Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಎಲ್ಲೆಲ್ಲಿ ಮಳೆಯಾಗಿದೆ ?

---Advertisement---

ಚಿತ್ರದುರ್ಗ. ಆಗಸ್ಟ್06: ಮಂಗಳವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 31 ಮಿ.ಮೀ ಮಳೆಯಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 17 ಮಿ.ಮೀ, ಚಿತ್ರದುರ್ಗ ತಾಲ್ಲೂಕು 16.5 ಮಿ.ಮೀ, ಹಿರಿಯೂರು ತಾಲ್ಲೂಕು 36.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 44.6 ಮಿ.ಮೀ, ಹೊಸದುರ್ಗ ತಾಲ್ಲೂಕು 51.5 ಮಿ.ಮೀ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 21.1 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 20.6 ಮಿ.ಮೀ, ನಾಯಕನಹಟ್ಟಿ 20.9 ಮಿ.ಮೀ, ಪರಶುರಾಂಪುರ 18.2 ಮಿ.ಮೀ, ತಳಕು 9.6 ಮಿ.ಮೀ, ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 24.3 ಮಿ.ಮೀ, ಭರಮಸಾಗರ 6.8 ಮಿ.ಮೀ, ಹಿರೇಗುಂಟನೂರು 8.4 ಮಿ.ಮೀ, ತುರುವನೂರು 19.4 ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 71.8 ಮಿ.ಮೀ,. ಐಮಂಗಳ 48.8 ಮಿ.ಮೀ, ಧರ್ಮಪುರ 13.6 ಮಿ.ಮೀ, ಜವನಗೊಂಡನಹಳ್ಳಿ 20.5 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 42.2 ಮಿ.ಮೀ, ಬಿ.ದುರ್ಗ 41.5 ಮಿ.ಮೀ, ರಾಮಗಿರಿ 51.3 ಮಿ.ಮೀ, ತಾಳ್ಯ 43.3 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 49.7 ಮಿ.ಮೀ, ಮಾಡದಕೆರೆ 73.1 ಮಿ.ಮೀ,, ಮತ್ತೋಡು 51.7 ಮಿ.ಮೀ, ಶ್ರೀರಾಂಪುರ 25.5 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 16.6 ಮಿ.ಮೀ, ದೇವಸಮುದ್ರದಲ್ಲಿ 26.1 ಮಿ.ಮೀ ಮಳೆಯಾಗಿದೆ.
18 ಮನೆಗಳು ಹಾನಿ : ಮಳೆಯಿಂದಾಗಿ ಜಿಲ್ಲೆಯಾದ್ಯಂತ 16 ಮನೆಗಳು ಭಾಗಶಃ ಮತ್ತು 2 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 2 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 04 ಭಾಗಶಃ ಮನೆಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 05 ಭಾಗಶಃ ಮನೆಹಾನಿ, ಹೊಳಲ್ಕೆರೆಯಲ್ಲಿ 04 ಭಾಗಶಃ ಮನೆಹಾನಿ ಹಾಗೂ 02 ಪೂರ್ಣ ಮನೆಹಾನಿಯಾಗಿದೆ. ಹೊಸದುರ್ಗದಲ್ಲಿ ಭಾಗಶಃ ಮನೆಹಾನಿ 02 ಹಾಗೂ 02 ಮನೆಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 04 ಹೆಕ್ಟರ್ ಕೃಷಿ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಮನೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...