Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಿಪ್ಪು ಸುಲ್ತಾನ್ ವಿಚಾರ : ಆರ್ ಅಶೋಕ್ ವಿರುದ್ಧ ಜಮೀರ್ ವಾಗ್ದಾಳಿ

---Advertisement---

ಬೆಂಗಳೂರು: ಟಿಪ್ಪು ಸುಲ್ತಾನ್ ವುಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದರಲ್ಲೂ ಕೆ ಆರ್ ಎಸ್ ಡ್ಯಾಂ ಅಡಿಗಲ್ಲು ಹಾಕಿದ್ದೆ ಟಿಪ್ಪು ಸುಲ್ತಾನ್. ಅದರ ಶಾಸನ ಕೂಡ ಅಲ್ಲಿ ಇದೆ ಎಂದು ಮಹದೇವಪ್ಪ ಹೇಳಿದ್ರು. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧ ಎದುರಾಗಿದೆ. ಆರ್ ಅಶೋಕ್ ಕೂಡ ಟಿಪ್ಪು ಸುಲ್ತಾನ್ ಹೆಸರಿಡೋದಕ್ಕೆ ಸರ್ಕಾರ ಪ್ಲ್ಯಾನ್ ಮಾಡಿದೆ ಎಂಬ ಹೇಳಿಕೆಗೆ ಜಮೀರ್ ಅಹ್ಮದ್ ಗರಂ ಆಗಿದ್ದಾರೆ.

ಅವರಿಗೆ ಅಲ್ಪಸಂಖ್ಯಾತರ ವಿಚಾರ ಬಿಟ್ರೆ ಬೇರೆ ಏನು ಇಲ್ಲ. ಟಿಪ್ಪು ಸುಲ್ತಾನನ್ನ ಇಟ್ಕೊಂಡು, ಅಲ್ಪ ಸಂಖ್ಯಾತರನ್ನ ಇಟ್ಕೊಂಡೆ ರಾಜಕೀಯ ಮಾಡ್ತಾರೆ. ಏನ್ ಅಭಿವೃದ್ಧಿ ಮಾಡಿದ್ದಾರೆ ಹೇಳ್ರಿ ನೋಡೋಣಾ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ ಅಭಿವೃದ್ಧಿ ಏನು ಅನ್ನೋದನ್ನ ತೆಗೆಯೋದಕ್ಕೆ ಹೇಳಿ. ಇಂಥ ಅಭಿವೃದ್ಧಿ ಕೆಲಸ ಮಾಡಿದ್ದೀವಿ, ಬಡವರಿಗೆ ಇದನ್ನ ಮಾಡಿದ್ದೀವಿ ಅಂತ ಯಾವತ್ತಾದ್ರೂ ಹೇಳಿದ್ದಾರಾ..? ಬರೀ ಟಿಪ್ಪು ಸುಲ್ತಾನ್ ಅಲ್ಪ ಸಂಖ್ಯಾತರು. ಅದನ್ನ ಬಿಟ್ಟರೆ ಬಿಜೆಪಿಯವರದ್ದು ಏನಿದೆ.

ನಾವೂ ನೋಡಿ ಗಂಟಾಘೋಷವಾಗಿ ಹೇಳ್ತೀವಿ. ನಮ್ಮ ಸರ್ಕಾರ ಇತ್ತು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಇಂತಹ ಯೋಜನೆಗಳನ್ನ ಕೊಟ್ಟರು. ಈ ಬರಿ ನಮ್ಮ ಸರ್ಕಾರ ಬಂದಿದೆ. ಈ ರೀತಿಯ ಕಾರ್ಯಕ್ರಮಗಳನ್ನ ಕೊಡ್ತೀವಿ ಅಂತ ಗಂಟಾಘೋಷವಾಗಿ ಹೇಳ್ತೀವಿ. ಬಿಜೆಒಇ ಅವರು ಈ ರೀತಿ ಯಾವತ್ತಾದ್ರೂ ಹೇಳಿದ್ದಾರಾ..? ಬರೀ ಹಿಂದು ಮುಸಲ್ಮಾನ್. ಅವರಿಗೆ ಆ ಹಿಂದುನು ಬೇಕಿಲ್ಲ ಮುಸಲ್ಮಾನನು ಬೇಕಾಗಿಲ್ಲ. ಅಧಿಕಾರ ಅಷ್ಟೇ. ಆ ಅಧಿಕಾರಕ್ಕೋಸ್ಕರ ಜಾತಿ ಬೇಧ ತಂದಿಡ್ತಾ ಇದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...