ಮಂಡ್ಯ: ಜಿಲ್ಲೆಯ ಸಾಧನಾ ಸಮಾವೇಶದಲ್ಲಿ ತಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಹಾಲು ಉತ್ಪಾದಕರ ಸಹಕಾರ ಸಂಘ ಎಷ್ಟು 12 ಲಕ್ಷ. 5 ರೂಪಾಯಿ ಕೊಟ್ಟವರು ಯಾರು..? ಒಂದು ಲೀಟರ್ ಹಾಲಿಗೆ ಐದು ರೂಪಾಯಿ, ಸುಮಾರು ಒಂದು ಲಕ್ಷ ಕುಟುಂಬ ಹಾಲಾಕುತ್ತೆ. ಐದು ರೂಪಾಯಿ ಕೊಟ್ಟವರು ಇದೇ ಸಿದ್ದರಾಮಯ್ಯ ಎಂಬುದನ್ನ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ವರ್ಷ ಶುಗರ್ ಫ್ಯಾಕ್ಟರಿಗೆ ಈಗ ಹತ್ತು ಕೋಟಿ ರೂಪಾಯಿ ಕೊಟ್ಟಿದ್ದೇವೆ. ಒಟ್ಟು 112 ಕೋಟಿ ರೂಪಾಯಿಯನ್ನ ಶುಗರ್ ಫ್ಯಾಕ್ಟರಿ ಕೊಟ್ಟಿರುವ ಸರ್ಕಾರ ಇದ್ದರೆ ಅದು ನಮ್ಮ ಸರ್ಕಾರ ಅಂತ ಹೇಳ್ತೇನೆ.
ನಮ್ಮ ಪಕ್ಷ ಯಾವಾಗ ಅಧಿಕಾರಕ್ಕೆ ಬಂತು, ನಾನು ಸಿಎಂ ಆದ ಎರೆಉ ಅವಧಿಯಲ್ಲಿ ಬಡವರ ಪರ, ದಲಿತರ ಪರ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಕಾರ್ಮಿಕರ ಪರ ಅನೇಕ ಯೋಜನೆಗಳನ್ನ ಕೊಟ್ಟಿದ್ದೇವೆ. ನಮ್ಮ ಉದ್ದೇಶ ಅಸಮಾನತೆಯನ್ನು ತೊಡೆದು ಹಾಕಬೇಕು, ಜಾತಿ ವ್ಯವಸ್ಥೆ ಹೋಗಬೇಕು. ಸಮಾಜದಲ್ಲಿ ಸಮಾನತೆಯನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ ಎಂದು ತಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ.
ಇದೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಅವರು, 6 ಲಕ್ಷದ 82 ಸಾವಿರ ಲಕ್ಷ ಟನ್ ಕೊಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 5 ಲಕ್ಷದ 27 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಕೊಟ್ಟಿದೆ ಎಂದು ಗೊಬ್ಬರದ ವಿಚಾರವಾಗಿ ಮಾತನಾಡುತ್ತಿರುವ ಬಿಜೆಪಿ ಪಕ್ಷದ ಮಾತುಗಳಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು ಮೊದಲು ಗೊಬ್ಬರ ಕೊಡಿ ಅಂತ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡುತ್ತಿದ್ದಾರೆ.


















