Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಗುವ ಆಸೆ ಇದ್ಯಾ : ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

---Advertisement---

ಬೆಂಗಳೂರು: ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಾ, ಸಿಎಂ ಆಗಬೇಕಾಗಿತ್ತು ಎಂಬ ಆಸೆಯ ಬಗ್ಗೆ ಹೇಳಿದ್ದರು‌. ಆ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ತಂದೆಯವರು ಸಿಎಂ ಆಗುವ ಆಸೆಯ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಮೊದಲು ಫುಲ್ ವಿಡಿಯೋ ನೋಡಿ. ಈ ವಾಟ್ಸಾಪ್ ವರ್ಷನ್ಸ್ ಗಳೇ ನಮಗೆ ಡೇಂಜರ್ ಅನ್ನಿಸೋದು. ಸಾಹೇಬ್ರು ಏನ್ ಹೇಳಿದ್ರು ನಾಲ್ಕು ನಾಲ್ಕೂವರೆ ವರ್ಷ ನಾವೆಲ್ಲರು ಸೇರಿ ದುಡಿದಿದ್ದೆವು. ಆದರೆ ಅದಾದ ಮೇಲೆ ಹೈಕಮಾಂಡ್ ಅವರು ತೀರ್ಮಾನ ಮಾಡಿ, ನಾಲ್ಕೂವರೆ ತಿಂಗಳಿದ್ದಾಗ ಎಸ್ ಎಂ ಕೃಷ್ಣ ಅವರು ಬಂದ್ರು, ಅವರಿಗೆ ಅವಕಾಶ ಸಿಕ್ತು. ಅಷ್ಟು ದಿನ ನಾವೂ ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತಾಯ್ತು ಅಂದ್ರು. ಅದಾದ ಮೇಲೆ ಏನ್ ಹೇಳ್ತಾರೆ. ಅದಕ್ಕೆ ಯಾವುದೇ ರಿಗ್ರೇಟ್ ಇಲ್ಲ ಅಂದ್ರು. ಇವತ್ತು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಪಕ್ಷ ಎಲ್ಲವನ್ನು ಕೊಟ್ಟಿದೆ ಎಂದಿದ್ದಾರೆ. ಆದರೆ ನೀವೂ ಹಿಂದಿನ ಎರಡ್ ನಿಮಿಷ ಮುಂದಿನ ಎರಡ್ ನಿಮಿಷ ನೋಡ್ಬೇಕು ಅಲ್ವಾ. ಬರೀ ಎರಡು ಸೆಕೆಂಡ್ ನೋಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಎಲ್ಲರ ಆಶೀರ್ವಾದದಿಂದ ಸುಭಾಶ್ ಚಂದ್ರ ಬೋಸ್, ಗಾಂಧೀಜಿ ಅವರಿದ್ದ ಸ್ಥಾನದಲ್ಲಿದ್ದಾರೆ. ಹೈಕಮಾಂಡ್ ಜೊತೆಗೆ ಚೆನ್ನಾಗಿದ್ದಾರೆ. ಅವರು ಏನೇ ತೀರ್ಮಾನ ತೆಗೆದುಕೊಂಡರು ಅದರ ಮೇಲೆ ಹೋಗುತ್ತಾರೆ. ಕಳೆದ ಚುನಾವಣೆಯಲ್ಲಿ, ಅಧಿಕಾರ ಇರಲಿ, ಬಿಡಲಿ ನಾನು ಪಕ್ಷದ ಕೆಲಸ ಮಾಡಿಯೇ ಮಾಡ್ತೀನಿ ಅಂತ ಹೇಳಿದ್ದಾರೆ ಎಂದು ತಂದೆ ಬಗ್ಗೆ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...