ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಅಂತ ಗೋವಾ ವಿಧಾನಸಭೆಗೆ ಸಿಎಂ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರಂತೆ. ನನಗೆ ವೈಯಕ್ತಿಕವಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭರವಸೆಯನ್ನ ಕೊಟ್ಟಿದ್ದಾರೆ. ಅರಣ್ಯ ಇಲಾಖೆ ಕ್ಲಿಯರೆನ್ಸ್ ನೀಡಲ್ಲ ಅಂತ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರದ ಈ ನಿರ್ಧಾರ ರಾಜ್ಯದ ಜನತೆಗೆ ಬಗೆಯುವಂತ ದ್ರೋಹವಾಗಿದೆ. ರಾಜ್ಯ ಸರ್ಕಾರ ಇದನ್ನ ಉಗ್ರವಾಗಿ ಖಂಡಿಸಲಿದೆ. ಕನ್ನಡಿಗರ ಜೊತೆಗೆ ನಾವೂ ಹೋರಾಟ ಮಾಡ್ತೀವಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ಮಹಾದಾಯಿ ಹೋರಾಟ ಯಾವತ್ತಿಂದ ನಡೀತಾ ಇದೆ. ಮಹಾದಾಯಿ ಅನುಷ್ಠಾನ ಆಗಬೇಕು ಅಂತ ಕಾದು ಕುಳಿತಿದ್ದೀವಿ. ಒಂದು ಕಡೆ ಬರಪೀಡಿತ ಪ್ರದೇಶಗಳಿಗೆ ನೀರನ್ನ ಒದಗಿಸಬೇಕು. ಮಾಂಡೋವಿ ನದಿಯಲ್ಲಿ ವ್ಯರ್ಥವಾಗಿ ಹೋಗ್ತಾ ಇರುವ ನೀರನ್ನ ನಾವೂ ಕೇಳ್ತಾ ಇರೋದು.
ನಿಮ್ಮ ಕುಡಿಯುವ ನೀರಿಗೆ ನಾವೂ ಕೈ ಹಾಕಿಲ್ಲ. ಆದರೂ ಮಲತಾಯಿ ಧೋರಣೆ ತೋರ್ತಾ ಇದ್ದೀರಿ. ಗೋವಾದಲ್ಲಿ ಇರೋದೆ ಮೂವರು ಸಂಸದರು. ನಮ್ಮಲ್ಲಿ 28 ಇದಾರೆ. 17 ಜನರನ್ನ ಗೆಲ್ಲಿಸಿದ್ದೀವಿ. ಅಂತದ್ರಲ್ಲಿ ಭೂಪೇಂದ್ರ ಯಾದವ್ ಅವರನ್ನ ಕರೆದು ಹೇಳಿದ್ರಂತೆ. ಅದರಲ್ಲೂ ವೈಯಕ್ತಿಕವಾಗಿ ಹೇಳಿದ್ರಂತೆ ಎಂದು ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಮ್ಮ ಕರ್ನಾಟಕದ ನ್ಯಾಯಯುತವಾದ ಈ ನಿಲುವಿಗೆ, ಯಾವ ಕಾರಣಕ್ಕೂ ಅಡ್ಡಿ ಮಾಡಬಾರದು. ಆದರೂ ಅನ್ಯಾಯವಾಗ್ತಾ ಇದೆ. ಈ ಅನ್ಯಾಯವನ್ನ ಯಾವ ಹಂತದಲ್ಲಿ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನ ಸದನದಲ್ಲಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಆದರೆ ಬಿಜೆಪಿಯವರು ಈ ಮೊದಲಿನಿಂದನೂ ನಾವೂ ಆ ಕ್ಲಿಯರೆನ್ಸ್ ಕೊಡಿಸ್ತೇವೆ ಎಂದಿದ್ದರು. ಆದರೆ ಇಲ್ಲಿವರೆಗೂ ಆ ರೀತಿಯಾದ ಕ್ಲಿಯರೆನ್ಸ್ ತರೋದಕ್ಕೆ ಬಿಜೆಪಿ ರೆಡಿ ಇಲ್ಲ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











