ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಂಗಸೌರಭ ರಂಗೋತ್ಸವ ನಿಮಿತ್ತ ರಂಗ ಉಪನ್ಯಾಸ, ರಂಗ ಸಂಗೀತ, ರಂಗನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಜುಲೈ 21 ರಂದು ಬೆಳಿಗ್ಗೆ 10-30ಕ್ಕೆ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ಸಮೂಹ ಸಂಸ್ಥೆಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಉದ್ಘಾಟಿಸುವರು. ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಹಾಗೂ ಪ್ರಾಚಾರ್ಯೆ ಎಂ.ಆರ್.ಜಯಲಕ್ಷ್ಮಿ ಅಧ್ಯಕ್ಷತೆ ವಹಿಸುವರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಶಿಕ್ಷಣ ಮತ್ತು ರಂಗಭೂಮಿ ವಿಷಯವಾಗಿ ಉಪನ್ಯಾಸ ನೀಡುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಮೋಹನ್‍ಕುಮಾರ್, ಉಪನ್ಯಾಸಕರಾದ ಹೆಚ್.ಎನ್.ಶಿವಕುಮಾರ್, ಡಾ.ಹನುಮಂತರೆಡ್ಡಿ, ಓ.ಎಂ.ಮಂಜುನಾಥ, ತಂಜೀಮಾ, ಉಷಾಕಿರಣ್, ಟಿ.ವೈ. ಮಂಜುನಾಥಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಚಲನಚಿತ್ರ ಹಾಸ್ಯನಟ ಹಾಗೂ ನಾಟಕಕಾರ ಮೈಸೂರು ರಮಾನಂದ ರಚನೆ ಮತ್ತು ನಿರ್ದೇಶನದ ಹಾಸ್ಯನಾಟಕ ನಾನಿನ್ನೂ ಸತ್ತಿಲ್ಲ ನಾಟಕವನ್ನು ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗ ತಂಡದ ಕಲಾವಿದರು ಅಭಿನಯಿಸುವರು.
ದಿನಾಂಕ: 21-07-2025 ರಂದು ಮಧ್ಯಾಹ್ನ 2-30ಕ್ಕೆ ಕಾಮನಬಾವಿ ಬಡಾವಣೆಯಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ಶ್ರೀಮತಿ ಹೇಮಾವತಿ ಕುವೆಂಪು ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಎಸ್.ಸಂದೀಪ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರಾಚಾರ್ಯ ಡಾ.ಜಿ.ದಾಸಯ್ಯ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಡಾ.ಮೋಹನ್‍ಕುಮಾರ್ ಇವರು ಬೋಧನಾ ಪ್ರಕ್ರಿಯೆಯಲ್ಲಿ ರಂಗಕಲೆಯ ಮಹತ್ವ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸಕರಾದ ಡಾ.ರಾಧಮ್ಮ, ಕುಮಾರಿ ಹೇಮಲತಾ.ಬಿ, ಪಾತಲಿಂಗಪ್ಪ.ಬಿ, ಎಂ.ಪಿ.ನಾಗರಾಜ, ಜಿ.ಟಿ ನಹುಷನಾಯಕ, ಅಧೀಕ್ಷಕ ಪಾಪಣ್ಣ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.
ರಂಗಭೂಮಿ ಕಲಾವಿದ ಆರ್.ಅಮಿತಾನಂದ ಇವರ ರಚನೆ ಮತ್ತು ನಿರ್ದೇಶನದಲ್ಲಿ ಹಾಗೂ ಕೆ.ಪಿ.ಎಂ.ಗಣೇಶಯ್ಯ ಸಂಗೀತ ನಿರ್ದೇಶನದ ಹಾಸ್ಯನಾಟಕ ಹೆಂಡತಿಗೆ ಹೆದರದ ಗಂಡ ನಾಟಕವನ್ನು ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗತಂಡದ ಕಲಾವಿದರು ಅಭಿನಯಿಸುವರು ಎಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಯಿಗೊಳಿಸಬೇಕೆಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಪಿ.ಎನ್.ಗಿರೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


