Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಣಿಗ ಸಮುದಾಯಕ್ಕೆ ನಿವೇಶನ ನೀಡಿ : ತಿಪೇಸ್ವಾಮಿ ಮನವಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 16 : ಗಾಣಿಗ ಸಮಾಜಕ್ಕೆ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡಿಸಿ ಕೊಡುವಂತೆ ಗಾಣಿಗ ಸಮುದಾಯದ ತಾಲ್ಲೂಕು ಅಧ್ಯಕ್ಷರಾದ ಎ.ಆರ್. ತಿಪೇಸ್ವಾಮಿ ಗಾಣಿಗ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಂಸದರಾದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್‍ರವರಿಗೆ ಮನವಿ ಮಾಡಿದರು.

ಗಾಣಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ಸಮಾಜವು ಹಾಗೂ ಅಲ್ಪಸಂಖ್ಯಾತ ಸಮಾಜವಾಗಿದ್ದು, ಗಾಣಿಗ ಸಮಾಜದ ಸರ್ವಾಂಗೀಣ ಏಳಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಆದ್ಯತೆ ನೀಡಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಂಕರ್‍ಲಾಲ್ ಲೇಔಟ್, ಕೆಳಗೋಟೆ ಗ್ರಾಮದ ರಿ.ಸ.ನಂ; 64/1, 2, 3 & 4 ರ ಚಿತ್ರದುರ್ಗ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತವಾಗಿ ವಸತಿ ವಿನ್ಯಾಸದಲ್ಲಿನ ನಾಗರೀಕ ಸೌಲಭ್ಯ ನಿವೇಶನವು ಚಿತ್ರದುರ್ಗ ನಗರಸಭೆ ವಶದಲ್ಲಿರುತ್ತದೆ. ಸದರಿ ನಾಗರೀಕ ಸೌಲಭ್ಯ ನಿವೇಶನವನ್ನಾಗಲಿ ಅಥವಾ ಚಿತ್ರದುರ್ಗ ನಗರದ ಆಯಕಟ್ಟಿನ ಪ್ರದೇಶದಲ್ಲಾಗಲಿ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಯಾವುದಾದರೂ ಖಾಲಿ ನಿವೇಶನವನ್ನು ಗಾಣಿಗ ಸಮಾಜಕ್ಕೆ ಮಂಜೂರು ಮಾಡಿಸಿಕೊಟ್ಟು ಗಾಣಿಗ ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯ ಮಾಡಬೇಕೆಂದು. ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಞಾನ ಮೂರ್ತಿ, ಉಪಾಧ್ಯಕ್ಷರಾದ ಶಿವಾನಂದ .ಜೆ.ಎಂ., ಸಹ ಕಾರ್ಯದರ್ಶಿ ಮುರುಗೇಶ್, ಮಂಜುನಾಥ್, ಸಂಚಾಲಕರಾದ ವಿರೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ವರದಶಂಕರ್, ಆಶೋಕ್, ನಿರ್ದೇಶಕರುಗಳಾದ ಬಸಣ್ಣ .ಕೆ.ಟಿ.,ವೀರೇಶ್.ಟಿ.,ನಂದೀಶ್.ಜಿ.ಟಿ,ಕಿರಣ್‍ಶಂಕರ್.ಬಿ.ಜೆ ವೀರಭದ್ರಪ್ಪ.ಎನ್.ಎಂ ಮಂಜುನಾಥ.ಎಸ್  ಮಂಜುನಾಥ್.ಟಿ ಪ್ರಶಾಂತ್.ಬಿ.ಆರ್. ವಿರೂಪಕ್ತ.ಜಿ.ಎನ್.  ರವಿ .ಬಿ.ಎನ್. ಬಸವರಾಜು .ಎನ್.ಟಿ ಚನ್ನಬಸಪ್ಪ .ಡಿ.ವಿ  ಮಂಜುನಾಥ್.ಎನ್.ಹೆಚ್. ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

​ಸರ್ಕಾರಿ ಬ್ಯಾಂಕ್ ಖಾತೆಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಬ್ಯಾಂಕ್ ದಾಖಲೆಗಳಲ್ಲಿ ಕಡ್ಡಾಯವಾಗಿ ‘ಸರ್ಕಾರಿ ಇ-ಮೇಲ್ ಐಡಿ’ ಬಳಸಲು ಆದೇಶ

ಡೇಟಾ ಸೆಂಟರ್ ಕ್ರಾಂತಿ: 2030ರ ವೇಳೆಗೆ ಭಾರತದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ!

ಬೆಂಗಳೂರಿನ ಫುಟ್‌ಬಾಲ್ ಪ್ರಿಯರಿಗೆ ಗುಡ್ ನ್ಯೂಸ್: ಫಿಫಾ ವಿಶ್ವಕಪ್ ಹಿನ್ನೆಲೆ ಮಧ್ಯರಾತ್ರಿ 3.30ರವರೆಗೆ ಹೋಟೆಲ್, ರೆಸ್ಟೋರೆಂಟ್‌ ತೆರೆಯಲು ಅನುಮತಿ!

ಜುಲೈ 16 ರಂದು ರಂಗಕರ್ಮಿ ಕೆ.ವಿ ಸುಬ್ಬಣ್ಣ ಸ್ಮರಣೋತ್ಸವ : ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರ

ಚಿತ್ರದುರ್ಗ ಅಭಿವೃದ್ಧಿಗೆ ವೇಗ ನೀಡಲು ಶಾಸಕ ವೀರೇಂದ್ರ ಪಪ್ಪಿ ಒತ್ತಾಯ; ಈ ನಾಲ್ಕು ಪ್ರಮುಖ ಯೋಜನೆಗಳಿಗೆ ಅನುದಾನ ಬೇಡಿಕೆ

ಆಷಾಢ ಅಮಾವಾಸ್ಯೆ: ಕೋಟೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತರ ಸಾಗರ

Leave a Comment