ಬೆಂಗಳೂರು: ಟರ್ನರ್, ಮೆಕ್ಯಾನಿಸ್ಟ್, ಫಿಟ್ಟರ್, ಎಲೆಕ್ಟ್ರಿಷಿಯನ್, ಫೌಂಡ್ರಿ ಮ್ಯಾನ್ ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಪೋಸ್ಟ್ ಗಳು ಖಾಲಿ ಇದ್ದು, ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ನಾಳೆಯಿಂದಾನೇ ಅರ್ಜಿ ಸಲ್ಲಿಕೆಗೆ ದಿನಾಂಕ ಬಿಡಲಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಬಹುದು, ಅರ್ಜಿ ಸಲ್ಲಿಕೆ ಹೇಗೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.
ಬರೋಬ್ಬರಿ 515 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬೆಂಗಳೂರಿನಲ್ಲಿಯೇ ಉದ್ಯೋಗ ಪಡೆಯಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದಾಗಿದೆ. ಕನಿಷ್ಠ ಪಕ್ಷ ಎಸ್ಎಸ್ಎಲ್ಸಿ ಯನ್ನಾದರೂ ಮುಗಿಸಿರಬೇಕು. ಟ್ರೇಡ್ ನಲ್ಲಿ ಐಟಿಐ, ರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ ಮತ್ತು ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಪ್ರಮಾಣ ಪತ್ರವನ್ನು ಹೊಂದಿರಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 60% ಮತ್ತು SC/ST ವರ್ಗದ ಅಭ್ಯರ್ಥಿಗಳು ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರ ವಯಸ್ಸು ಗರಿಷ್ಟ 27, ಒಬಿಸಿಗೆ 3 ವರ್ಷ ಹಾಗೂ ಎಸ್ಸಿ, ಎಸ್ಟಿ ಸಮುದಾಯಕ್ಕೆ 5 ವರ್ಷಗಳ ಸಡಿಲಿಕೆ ಮಾಡಿರುತ್ತಾರೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮೊದಲು BHEL ವೆಬ್‌ಸೈಟ್‌ಗೆ https://bhel.com/ ಭೇಟಿ ನೀಡಬೇಕು. ಪರದೆ ಮೇಲೆ ಕಾಣುವ ‘ಅಪ್ರೆಂಟಿಸ್ ನೇಮಕಾತಿ 2025’ ಲಿಂಕ್ ಆಯ್ಕೆ ಮಾಡಿಕೊಂಡು ಹೊಸದಾಗಿ ರಜಿಸ್ಟರ್ ಮಾಡಿಕೊಳ್ಳಬೇಕು. ಅಗತ್ಯ ಮಾಹಿತಿ ನಮೂದಿಸಿ ಲಾಗಿನ್ ಆಗಬೇಕು. ಅಲ್ಲಿ ಕೇಳಲಾಗುವ ಅಗತ್ಯ ವಿವರ ಹಾಕಿ, ದಾಖಲೆ ಅಪ್‌ಲೋಡ್ ಮಾಡಬೇಕು.




