Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರೋಟರಿ ಅಂತರಾಷ್ಟ್ರೀಯ ಜಿಲ್ಲಾ ಗರ್ವನರ್ ಆಗಿ ರೊ.ಎಂ.ಕೆ.ರವೀಂದ್ರ ಪದಗ್ರಹಣ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಜುಲೈ. 13 : ನನಗೆ ವಹಿಸಿರುವ ಹೊಣೆಗಾರಿಕೆಯನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ನಿಭಾಯಿಸುತ್ತೇನೆಂದು ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3160 ರ 2025-26 ನೇ ಸಾಲಿನ ಜಿಲ್ಲಾ ಗರ್ವನರ್ ಆಗಿ ಪದಗ್ರಹಣ ಸ್ವೀಕರಿಸಿದ ರೊ.ಎಂ.ಕೆ.ರವೀಂದ್ರ ಹೇಳಿದರು.

ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಗರ್ವನರ್ ಆಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದರು.
ನಾಯಕತ್ವವೆಂದರೆ ಅದೊಂದು ಹುದ್ದೆಯಲ್ಲ. ಶಾಂತಿಯ ಸೇತುವೆಗಳನ್ನು ನಿರ್ಮಿಸಿ. ಹೊಸ ಅವಕಾಶಗಳನ್ನು ಸೃಷ್ಟಿಸುವುದು. ನನ್ನ ಮೇಲೆ ನಂಬಿಕೆಯಿಟ್ಟು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಕ್ಲಬ್‍ಗಳನ್ನು ಗಟ್ಟಿಗೊಳಿಸಿ ಚೈತನ್ಯಮಯ ಸಭೆಗಳು, ಲಾವಣ್ಯಮಯ ಯೋಜನೆಗಳು, ನಾಯಕತ್ವ ಅಭಿವೃದ್ದಿಯಿಂದ ರೋಟರಿಯನ್ನು ವಿಸ್ತರಿಸಿ ಪ್ರಭಾವಶಾಲಿ ಸೇವೆ, ರೋಟರಿ ಪೌಂಡೇಶನ್ ಬೆಂಬಲ ನೀಡುವುದರ ಜೊತೆ ಮುಂದಿನ ಪೀಳಿಗೆಯನ್ನು ರೋಟರಿಗೆ ಆಕರ್ಷಿಸುವತ್ತ ಶ್ರಮಿಸುತ್ತೇನೆಂದರು.

ಪ್ರತಿ ಗ್ರಾಮದಲ್ಲಿಯೂ ಮಗುವಿಗೆ ಕಡ್ಡಾಯ ಶಿಕ್ಷಣ ಸಿಗಬೇಕು. ಅಮೂಲ್ಯವಾದ ಒಂದು ಹನಿ ನೀರು ಹಾಗೂ ಪರಿಸರ ಸಂರಕ್ಷಣೆ ನನ್ನ ದೃಷ್ಟಿಕೋನ. ಗುಣಮಟ್ಟದ ಸೇವೆ ಸದಸ್ಯರ ಸ್ಥಾಯಿತ್ವ, ಅರ್ಥಪೂರ್ಣ ಕಾರ್ಯಕ್ರಮಗಳ ಮೇಲೆ ಕೇಂದ್ರಿಕರಿಸೋಣ. ಅದಕ್ಕಾಗಿ ನಮ್ಮೆಲ್ಲರ ಶಕ್ತಿಯನ್ನು ಒಗ್ಗೂಡಿಸಿ ಒಂದು ಕುಟುಂಬವಾಗಿ ಕೆಲಸ ಮಾಡೋಣ ಎಂದು ಕೋರಿದರು.

ಡಾ.ಸಾಧು ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಕೆ.ಪಿ.ನಾಗೇಶ್, ಪಿಡಿಜಿ. ಕೆ.ಮಧುಪ್ರಸಾದ್, ಪಿಡಿಜಿ. ಪಿ.ಎಸ್.ಶಂಭುಲಿಂಗಪ್ಪ, ರೊ.ವೇದಾ ರವೀಂದ್ರ ಇವರುಗಳು ವೇದಿಕೆಯಲ್ಲಿದ್ದರು.
ಡಿಜಿಇ. ಪಿ.ಕೇಶವರೆಡ್ಡಿ, ಡಿಜಿ.ಎನ್.ತ್ರಿವಿಕ್ರಮಜೋಶಿ, ರೊ.ಉಮೇಶ್ ವೀರಣ್ಣ ತುಪ್ಪದ್, ರೊ.ಹೆಚ್. ಕಿರಣ್‍ಕುಮಾರ್, ರೊ.ಎ.ಎಂ.ಭಾಗ್ಯಲಕ್ಷ್ಮಿ, ರೊ.ಶಶಿಧರ ಗುಪ್ತ ಎನ್. ರೊ.ದಿಲ್‍ಶಾದ್ ಉನ್ನಿಸ ಇವರುಗಳು ಜಿಲ್ಲಾ ಗರ್ವನರ್ ರೊ.ಎಂ.ಕೆ.ರವೀಂದ್ರರವರ ತಂಡದಲ್ಲಿದ್ದಾರೆ.
ಹಿಂದಿನ ಜಿಲ್ಲಾ ಗರ್ವನರ್‍ಗಳು, ಜಿಲ್ಲೆಯ ಪದಾಧಿಕಾರಿಗಳು, ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿಗಳು, ಇನ್ನರ್ ವೀಲ್ಹ್ ಸ್ನೇಹಿತರು, ಗಣ್ಯರು, ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಪದಗ್ರಹಣ ಸಮಾರಂಭದಲ್ಲಿ ನೆರೆದಿದ್ದು, ಜಿಲ್ಲಾ ಗರ್ವನರ್ ರೊ.ಎಂ.ಕೆ.ರವೀಂದ್ರರವರಿಗೆ ಶುಭ ಹಾರೈಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...