ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಇಂದಿನ ದಿನಮಾನಗಳಲ್ಲಿ ಬೇರೆ ಬೇರೆ ರೀತಿಯ ಸಡಗರ ಸಂಭ್ರಮದ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಆದರೆ ಇಂತಹ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮವನ್ನು ನೋಡಿದ್ದು ಇದೇ ಮೊದಲು. ಹಾಗಾಗಿ ಈ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 21ನೇ ಶತಮಾನದಲ್ಲಿ ಶ್ರೇಷ್ಠ ದಾನವೆಂದರೆ ಅದುವೆ ವಿದ್ಯಾದಾನ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ಶ್ರೀ ಅನಂತಕೃಷ್ಣ ವೇದಿಕೆಯಲ್ಲಿ ನಿನ್ನೆ (ಜುಲೈ 12ರ ಶನಿವಾರ) ಹಮ್ಮಿಕೊಂಡಿದ್ದ “ಸಾಧಕರೊಂದಿಗೆ ಸಂವಾದ”2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಶ್ರಮಪಟ್ಟು ಅಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕೆಂದದರು. ವಿದ್ಯಾರ್ಥಿಗಳೆ, ಸಮಯ ಅಮೂಲ್ಯವಾದದ್ದು ಇದರ ಬಗ್ಗೆ ಎಚ್ಚರವಿರಲಿ ಎಂದು ಹೇಳಿ, ಮುಂದುವರಿಯುತ್ತಿರುವ ಇಂದಿನ ವಿಜ್ಞಾನ ಯುಗದಲ್ಲಿ ತಾವೇಲ್ಲರೂ ಉತ್ತಮ ಸಾಧನೆಯನ್ನು ಮಾಡಿ ಈ ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಈ ನೆಲದ ಸಂಪತ್ತಾಗಿ ನಿರ್ಮಾಣವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ವಾಗ್ಮಿಗಳಾದ ಅಶೋಕ್ ಹಂಚಲಿ ಅವರು ಮಾತನಾಡಿ ಶಿಕ್ಷಣವೆಂಬುದು ಹುಲಿ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೆಬೇಕು ಎಂಬ ಡಾ. ಬಿ. ಆರ್, ಅಂಬೇಡ್ಕರ್ ಮಾತಿನಂತೆ ತಾವೇಲ್ಲರೂ ಶಿಕ್ಷಣ ಪಡೆದು ಭವಿಷ್ಯದ ದಿನಗಳಲ್ಲಿ ಉನ್ನತ ಸಾಧನೆ ಮಾಡಬೇಕೆಂದು ತಿಳಿಹೇಳಿದರು. ಸ್ವಾಮಿ ವಿವೇಕಾನಂದ, ಡಾ. ಬಿ. ಆರ್. ಅಂಬೇಡ್ಕರ್, ಮಾಕ್ಸ್‌ಮುಲ್ಲರ್ ಇವರುಗಳು ಭಾರತದ ಬಗ್ಗೆ ಇಟ್ಟುಕೊಂಡಿರುವ ಅಭಿಮಾನವನ್ನು ತಿಳಿಸುವುದರ ಮೂಲಕ ಅವರ ಚಿಂತೆಗಳನ್ನು ವಿಶ್ಲೇಷಿದರು. ಇದು ನನ್ನ ಭಾರತ ಈ ನೆಲದಲ್ಲಿ ಹುಟ್ಟುವುದೇ ಸೌಭಾಗ್ಯ ಎಂದು ಹೆಮ್ಮೆಯಿಂದ ಶ್ಲಾಘಿಸಿದರು. ಈ ಭೂಮಿಯ ಮೇಲೆ ಹುಟ್ಟಿದಾಗ ನಿಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದರೆ ನೀವೂ ಒಬ್ಬ ಅದರ್ಶ ವ್ಯಕ್ತಿಯಾಗುತ್ತೀರಿ ಎಂದು ಪ್ರೇರೆಪಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಟಿ ಶೇಖರ್ ರೆಡ್ಡಿ, ಪದವಿಪೂರ್ವ ಶಿಕ್ಷಣ ಎನ್ನುವುದು ಎರಡು ವರ್ಷಗಳ ಅಧ್ಯಯನ ಎನ್ನುವುದಕ್ಕಿಂತ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನನ್ನ ಪರಿಶ್ರಮ ಹೇಗಿದೆ ಎಂಬುದನ್ನು ಪ್ರತಿನಿತ್ಯ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಸಾಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿಯವರು, ಪ್ರತಿವರ್ಷ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲೆಂಬ ಮಹದಾಸೆ. ನಿಮ್ಮ ಜೀವನದಲ್ಲಿ ಪಿಯುಸಿ ತುಂಬಾ ಮಹತ್ವದ ಘಟ್ಟ. ಹಾಗಾಗಿ ಎಚ್ಚರಿಕೆ, ಶ್ರದ್ಧೆ ಹಾಗೂ ನಿರಂತರವಾದ ಅಧ್ಯಯನ ಬಹಳ ಮುಖ್ಯ. ಈ ಸ್ಪರ್ಧಾತ್ಮಕ ಜಗತ್ತನ್ನು ಅರಿತಿರುವ ನಾನು ಮುಂದಿನ ದಿನಗಳಲ್ಲಿ ಕೆಎಎಸ್, ಐಎಎಸ್, ಐಪಿಎಸ್ ಆಕಾಂಕ್ಷಿಗಳಿದ್ದರೆ ಅವರಿಗೆ ಅಧ್ಯಯನಕ್ಕೆ ಪೂರಕವಾದ ವಾತರವಣವನ್ನು ಕಲ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ 2025ನೇ ಸಾಲಿನ ನೀಟ್, ಜೆಇಇ ಹಾಗೂ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಕು.ಕೆ ಪಿ ಪೂಜಿತ್ ಕುಲಾಲ್, ಕು.ಆನಂದ್ ಎನ್ ವೈ, ಕು. ಅಮರೇಶ, ಕು.ಇಶಿತಾ ಬಿ ಎನ್, ಹಾಗೂ ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳಿಸಿದ ಒಟ್ಟು 86 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಸಂವಾದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್ ಅಮೋಘ್, ಆಡಿಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್, ಚಳ್ಳಕೆರೆ ಎಸ್ ಆರ್ ಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸತ್ಯನಾರಾಯಣ, ಉಪನ್ಯಾಸಕರು, ಬೊಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











