Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬುದ್ದ, ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಮಾದಾರ ಚನ್ನಯ್ಯಸ್ವಾಮೀಜಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಜುಲೈ. 09 : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರುಗಳಲ್ಲಿ ಪೂರ್ವಸಿದ್ದತೆ ಹಾಗೂ ಸಮಯ ಪಾಲನೆಯಿರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ
ಉಪ ನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ(ಬಿಇಡಿ) ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂ ನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇ.ಡಿ ಶಿಕ್ಷಣ ಪಡೆದಾಕ್ಷಣ ಶಿಕ್ಷಕರಾಗಬೇಕೆಂದನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಬಹುದು. ಅದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಕರುಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡಲು ಟಿ.ಇ.ಟಿ.ಪರೀಕ್ಷೆಗಳನ್ನು ನಡೆಸುತ್ತಿದೆ. ಮಹತ್ವಪೂರ್ಣ ಸ್ಥಾನ ಗುರುವಿಗಿದೆ. ಮಕ್ಕಳಲ್ಲಿ ನೆನಪಿನ ಸಾಮಥ್ರ್ಯವಿರಬೇಕು. ಶಿಕ್ಷಕ ಎಂದು ಹೇಳಿಕೊಳ್ಳಲು ಹಿಂಜರಿಯುವಂತ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದರೆ ವೃತ್ತಿಯನ್ನು ಗೌರವಿಸಲು ಆಗುವುದಿಲ್ಲ. ವೃತ್ತಿ ಮತ್ತು ವಿಷಯವನ್ನು ಶಿಕ್ಷಕ ಗೌರವಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಬಹುದು. ಕಲಿಕೆ ಅನುಕರಣೀಯವಾಗಿರಬೇಕು. ಮೌಲ್ಯಗಳು ಕಡಿಮೆಯಾಗುತ್ತಿವೆ. ಕಲಿಕೆಯೆಂದರೆ ಬರವಣಿಗೆಯಲ್ಲ. ಅನುಭವದಿಂದ ಬರಬೇಕು. ಮಕ್ಕಳಿಗೆ ಪಾಠ ಮಾಡುವುದಷ್ಟೆ ಅಲ್ಲ. ಪೂರಕ ಮಾಹಿತಿ ಕೊಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಪ್ರತಿ ಮಗುವಿನ ಕಡೆ ವೈಯಕ್ತಿಕ ಗಮನ ಕೊಟ್ಟಾಗ ಬೆಳವಣಿಗೆಯಾಗುತ್ತದೆ. ಶಿಕ್ಷಕರ ಸಂವಹನ, ಭಾಷೆ ಮಕ್ಕಳಿಗೆ ತಲುಪಬೇಕು ಎಂದರು.

ಸಾಮರಸ್ಯ ಪ್ರಶಸ್ತಿ ಪುರಸ್ಕøತರಾದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ನಿಮ್ಮ ನಿಮ್ಮ ಕೆಲಸದಲ್ಲಿ ಮಗ್ನರಾದರೆ ನಿಮ್ಮ ಅರಿವಿಲ್ಲದೆ ಗುರಿ ಮುಟ್ಟುತ್ತೀರ. ಸಾಧನೆಯ ಮೆಟ್ಟಿಲು ಹತ್ತುವ ಒಂದು ಕ್ಷಣ ಖುಷಿ ಪಡಬೇಕು. ಉಳಿದಂತೆ ಹಿಂದಿನದನ್ನು ಮರೆಯಬಾರದು. ಎರಡು ಸಾವಿರ ವರ್ಷಗಳ ಹಿಂದಿನ ಬುದ್ದ, ಎಂಟು ನೂರು ವರ್ಷಗಳ ಬಸವಣ್ಣ ಸೇರಿದಂತೆ ಕ್ರಾಂತಿಕಾರಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರು ಪೂರ್ಣಿಮೆಗೆ ಮಹತ್ವವಿದೆ. ಪಾಠ ಕಲಿಸುವ ಶಿಕ್ಷಕರುಗಳಷ್ಟೆ ಗುರುಗಳಲ್ಲ. ಮಾರ್ಗದರ್ಶನ ಮಾಡುವವರು ಗುರುಗಳೆ ಎಂದು ಹೇಳಿದರು.

ನಿತ್ಯದ ಜೀವನದಲ್ಲಿ ದಾರ್ಶನಿಕರನ್ನು ಸ್ಮರಿಸಬೇಕು. ವೃದ್ದರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಶಿಕ್ಷಕ ವೃತ್ತಿಯನ್ನು ಸಾರ್ಥಕ ವೃತ್ತಿಯೆಂದು ಅಂದುಕೊಳ್ಳಬೇಕು. ಆಗ ವೃತ್ತಿಯ ಪಾವಿತ್ರತೆ ಕಾಪಾಡಿದಂತಾಗುತ್ತದೆ. ಸಮಾನತೆ, ಸೌಹಾರ್ಧತೆಯಿಂದ ಸಾಮರಸ್ಯ ಬದುಕು ಕಟ್ಟಿಕೊಳ್ಳಬಹುದು. ಆಗ ಮಾತ್ರ ಸಮಾಜ, ದೇಶ, ಜಗತ್ತು ಉಳಿಯುತ್ತದೆಂದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವವರಿಗೆ ಗುರುವಿನ ಸ್ಥಾನವಿದೆ.
ಒಂದು ಅಕ್ಷರ ಕಲಿಸಿದವರನ್ನು ಗುರು ಎನ್ನುತ್ತೇವೆ. ತಾಯಿಯೆ ಮೊದಲ ಗುರು. ವ್ಯಾಸ ಮಹರ್ಷಿಗಳ ನೆನಪಿಗಾಗಿ ಗುರು ಪೂರ್ಣಿಮೆಯನ್ನು ಆಚರಿಸಲಾಗುವುದು. ಜಗತ್ತಿಗೆ ಸಾಮರಸ್ಯದ ಅಗತ್ಯವಿದೆ. ಶಿಕ್ಷಕನಿಗೆ ಸೇವಾ ಮನೋಭಾವವಿರಬೇಕು. ಸ್ವತಂತ್ರ ಪೂರ್ವದಲ್ಲಿ ಶೇ.13 ರಷ್ಟು ಸಾಕ್ಷರತೆಯಿತ್ತು. ಈಗ ಸಾಕ್ಷರತೆ ಪ್ರಮಾಣ
ಶೇ.75 ರಷ್ಟಿದೆ. ಆದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕನಾದವನು ಉತ್ತಮ ನಡೆ, ನುಡಿ ಹೊಂದಿರಬೇಕು. ಎಷ್ಟೆ ಜ್ಞಾನವಂತರಾದರೂ ಅಹಂ ಇರಬಾರದು. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆಯನ್ನು ಜೀವನದಲ್ಲಿ ರೂಢಿಸಿಕೊಂಡು ಗುರುವಿಗೆ ಗೌರವಿಸುವುದನ್ನು ಕಲಿಯಬೇಕೆಂದರು. ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯರಾದ ಪ್ರೊ.ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಹನುಮಂತರೆಡ್ಡಿ ಜಿ. ಪ್ರೊ.ಮಂಜುನಾಥ್ ಒ.ಎಂ. ಇವರುಗಳು ವೇದಿಕೆಯಲ್ಲಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment