Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಸಕ ಸಿಪಿ ಯೋಗೀಶ್ವರ್ ವಿರುದ್ಧ ಹೆಂಡತಿ, ಮಗಳಿಂದ ದೂರು : ಆಸ್ತಿಗಾಗಿ ಹೀಗೆ ಮಾಡಿದ್ರಾ?

---Advertisement---

ಬೆಂಗಳೂರು: ಸಿಪಿ ಯೋಗೀಶ್ವರ್ ವಿರುದ್ಧ ಮೊದಲ ಹೆಂಡತಿ, ಮಗಳು ರೊಚ್ಚಿಗೆದ್ದಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರಿಗೆ ದೂರನ್ನ ನೀಡಲಾಗಿದೆ. ಈ ಬಗ್ಗೆ ಮೊದಲ ಹೆಂಡತಿ ಮಾಳವಿಕ ಸೋಲಂಕಿ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಗೊತ್ತಿರುವಂತೆ ಈಗ ನನ್ನ ಮಕ್ಕಳು ಬೀದಿಯಲ್ಲಿದ್ದಾರೆ. ಇಷ್ಟು ದಿನ ಅವರ ತಂದೆಯ ಜೊತೆಗೆ ಇದ್ದರು. ಈಗ ಅವರ ಮೇಲೆ‌ ಕೇಸ್ ಮೇಲೆ ಕೇಸ್ ಹಾಕಿದ್ದಾರೆ. ಯೋಗೀಶ್ ಅವರು, ಮಗನ ಸೈನ್ ಅನ್ನೇ ಫೋರ್ಜರಿ ಮಾಡಿದ್ದು, ಅದು ಒಂದು ಕೇಸ್ ಆಗಿದೆ.

 

ನನ್ನ ಮಗಳು ಮೇಲೂ ಆಸ್ತಿ ವಿಚಾರಕ್ಕೆ ಕೇಸ್ ಆಗಿದೆ. ಈಗ ನಾವೂ ಮೂರು ಜನರು ಬೆಳಗ್ಗೆ ಆದ್ರೆ ಕೋರ್ಟ್, ಕೇಸ್ ಅಂತ ಅಲಿತಾ ಇದ್ದೀವಿ. ನಮಗೆ ಅವರ ಬಳಿ ಇರುವಷ್ಟು ದುಡ್ಡಿನ ಪವರ್ ಆಗಲಿ, ಪೊಲಿಟಿಕಲ್ ಪವರ್ ಆಗ್ಲಿ ಇಲ್ಲ. ಯಾರಿಗೆ ವಿಷಯ ಮುಟ್ಟಿಸಬೇಕು ಅವರಿಗೆ ಮುಟ್ಟಿಸಿದ್ದೇವೆ. ನಾವೂ ಆರ್ಡಿನರಿ ಜನ. ಕೋರ್ಟ್, ಕೇಸ್ ಅಂತ ಓಡಾಡಿದ್ರೆ, ಹೇಗೆ ನಿಭಾಯಿಸೋದು ಅದನ್ನ. ಈಗ ನೋಡಿ ತಂದೆ ವಿರುದ್ಧ ಮಕ್ಕಳು ಓಡಾಡುವಂತೆ ಆಗಿದೆ ಎಂದಿದ್ದಾರೆ.

ಮಗಳು ನಿಶಾ ಮಾತನಾಡಿ, ಇದು ಪ್ರಾಪರ್ಟಿ ವಿಚಾರ ಅಲ್ವೇ ಅಲ್ಲ. ನಮ್ಮ ತಂದೆಯವರು ಮನೆ ಮೇಲೆ ಒಂದು ಕೇಸನ್ನ ಹಾಕ್ತಾರೆ ಆಗ ಪ್ರಾಪರ್ಟಿ ವಿಚಾರ ಬಂದದ್ದು‌. ಈಗ ಅವರ 250-300 ಪ್ರಾಪರ್ಟಿ ಮೇಲೆ ಸ್ಟೇ ಆರ್ಡರ್ ತಂದಿದ್ದೀನಿ. ಕಳೆದ 40 ವರ್ಷದಿಂದ ಈ ಪ್ರಾಪರ್ಟಿ ವಿಚಾರಕ್ಕೆ ಬಂದಿದ್ದಲ್ಲ. ಈಗ ಒಂದು ಅಧಿಕಾರ ಬೇಕು ಅಂತ ನಮ್ಮ ಅಮ್ಮನು ನಿಂತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...