Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಭಾ ಮಲ್ಲಿಕಾರ್ಜುನ್ ಅವರನ್ನ ಅಮಿತ್ ಶಾ ಹೊಗಳಿಲ್ಲ : ಪ್ರತಾಪ್ ಸಿಂಹ ಹೇಳಿದ್ದೇನು..?

---Advertisement---

ದಾವಣಗೆರೆ: ಅಮಿತ್ ಶಾ ಅವರು ಪ್ರಭಾ ಮಲ್ಲಿಕಾರ್ಜುನ ಅವರನ್ನ ಹೊಗಳಿಲ್ಲ, ಭಾರೀ ಚಾಲಾಕಿ ಎಂದು ಹೇಳಿದರು. ಹೊಸ ಸಂಸದರು ಬಂದು ವರ್ಷ ಕಳೆದಿದೆ ಎಂದು ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಜಿ.ಎಂ.ಸಿದ್ದೇಶ್ವರ ಅಭಿಮಾನಿಗಳು ನೆರವೇರಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ ಈ ಬಗ್ಗೆ ಮಾತನಾಡಿದ್ದಾರೆ.

ಈಗಿನ ಸಂಸದೆ ಪ್ರಭಾ ಅವರ ಮಾವ ಅಡ್ಜೆಸ್ಟ್ಮೆಂಟ್ ಮಾಡಿದ ಪರಿಣಾಮವಾಗಿ ಅವರು ಗೆದ್ದರು. ಗೃಹ ಸಚಿವ ಅಮಿತ್ ಶಾ ನಿಮ್ಮನ್ನು ಹೊಗಳಿಲ್ಲ. ಬಾರೀ ಚಾಲಕಿ ಇದ್ದಾರೆ ಅಂದ್ರು. ಹೊಸ ಸಂಸದರು ಬಂದು ವರ್ಷವಾಗಿದೆ. ಅಶೋಕ ರೈಲ್ವೆ ಗೇಟ್ ಬಳಿ ಕಾಮಗಾರಿ ಕೈಗೊಳ್ಳದ, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಅಳವಡಿಸದ ಕಾರಣ ಐದು ಯೋಜನೆಗಳಿಗೆ ಹಿಂದಿನ ಸಂಸದ ಸಿದ್ದೇಶ್ವರರು ತಂದ ಅನುದಾನ ವಾಪಾಸ್ ಆಗಿದೆ. ಇನ್ನು ಮುಂದಾದರು ಪ್ರಭಾ ಹಿಂದಿನ ಒಳ್ಳೆಯ ಕೆಲಸಗಳನ್ನು ಮುಂದುವರೆಸುತ್ತೇನೆಂದು ಸೌವಜನ್ಯ ತೋರಲಿ ಎಂದು ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ದನ ಮೇಯುತ್ತಿದ್ದ ವಿಮಾನ ನಿಲ್ದಾಣದ ಜೀರ್ಣೋದ್ಧಾರಕ್ಕೆ ಜಿ.ಎಂ. ಸಿದ್ದೇಶ್ವರ ಅವರ ಸಹಕಾರವೂ ಇದೆ. ಜಿ.ಮಲ್ಲಿಕಾರ್ಜುನಪ್ಪನವರು ದಾವಣಗೆರೆಯಲ್ಲಿ ಪಕ್ಷ ಬೆಳೆಸಿದರು. ನಾಲ್ಕು ಬಾರಿ ದಾವಣಗೆರೆ ಕ್ಷೇತ್ರ ಪ್ರತಿನಿಧಿಸಿರುವ ಸಿದ್ದೇಶ್ವರ 115 ಕಾಮಗಾರಿ ಮಾಡಿಸಿದ್ದಾರೆ ಎಂದರು.

ಇದೆ ವೇಳೆ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ”ಬಿ.ಎಸ್‌. ಯಡಿಯೂರಪ್ಪನವರ ಬಲಗೈ ಭಂಟರಾಗಿ ಪಕ್ಷ ಕಟ್ಟಿದವರಲ್ಲಿ ಜಿ.ಎಂ. ಸಿದ್ದೇಶ್ವರ್‌ ಕೊಡುಗೆಯು ಇದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ ಕೀರ್ತಿ ಸಿದ್ದೇಶ್ವರ ಅವರಿಗೆ ಸಲ್ಲಲಿದೆ” ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment