Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾ ಮಂದಣ್ಣ ಹೇಳಿಕೆಗೆ ರೊಚ್ಚಿಗೆದ್ದ ನಟಿಯರು : ಅಂತದ್ದೇನಾಯ್ತು..?

---Advertisement---

ರಶ್ಮಿಕಾ ಮಂದಣ್ಣ ಹೇಳುವ ಹೇಳಿಕೆಗಳು ಆಗಾಗ ಅವಾಂತರವನ್ನೇ ಸೃಷ್ಟಿ ಮಾಡ್ತವೆ. ನಾನು ಹೈದ್ರಾಬಾದ್ ಹುಡುಗಿ, ನಂಗೆ ಕನ್ನಡ ಬರಲ್ಲ ಹೀಗೆ ನಾನಾ ಹೇಳಿಕೆಯಿಂದ ಟ್ರೋಲ್ ಆಗಿದ್ದೇ ಹೆಚ್ಚು. ಈಗ ನೋಡಿದ್ರೆ ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ಬಂದಿದ್ದೆ ನಾನೊಬ್ಬಳು ಎಂಬ ಮಾತನ್ನ ಹೇಳಿದ್ದಾರೆ. ಯಾವುದೋ ಸಂದರ್ಶನದಲ್ಲಿ ಮಾತನಾಡುವಾಗ, ನನ್ನ ಮೊದಲ ಚೆಕ್ ಸಿಕ್ಕಾಗ ಮನೆಯಲ್ಲಿ ಏನೆಲ್ಲಾ ಮಾತಾಡ್ತಾ ಇದ್ದರು ಎಂಬ ನೆನಪು ಇದೆ ನನಗೆ. ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ ಕೂರ್ಗ್ ಸಮುದಾಯದಲ್ಲಿ ಇಂಡಸ್ಟ್ರಿಗೆ ಯಾರೂ ಬಂದಿರಲಿಲ್ಲ. ಇಡೀ ಸಮುದಾಯದಲ್ಲಿ ನಾನೊಬ್ಬಳೇ ಬಂದಿರೋದು ಎಂದು ಹೇಳಿದ್ದರು. ಈ ಹೇಳಿಕೆಗೆ ಇದೀಗ ಕೊಡವ ನಟಿಯರು ಬೇಸರ ಹೊರ ಹಾಕಿದ್ದಾರೆ.

ಅದರಲ್ಲೂ ಕನ್ನಡ ಇಂಡಸ್ಟ್ರಿಯನ್ನೇ ಒಂದು ಕಾಲದಲ್ಲಿ ಆಳಿದ ಪ್ರೇಮಾ ಎಲ್ಲಿಯವರು. ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ತಪಸ್ಸಿನಿ, ಶುಭ್ರ ಅಯ್ಯಪ್ಪ ಎಲ್ಲಿಯವರು ಎಂಬುದು ರಶ್ಮಿಕಾ ಮಂದಣ್ಣನಿಗೆ ಗೊತ್ತಿಲ್ವಾ ಎಂಬ ಪ್ರಶ್ನೆಯನ್ನ ಕೇಳುತ್ತಾ ಇದ್ದಾರೆ. ಈ ಬಗ್ಗೆ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಇದನ್ನ ವಿವಾದ ಅಂತ ಹೇಳೋದಿಲ್ಲ. ಯಾವುದೋ ಸಂದರ್ಶನದಲ್ಲಿ ಗೊತ್ತಿಲ್ಲದೆ ಮಾತನಾಡಿರಬಹುದು. ತೆಲುಗು ಹಾಗೂ ಹಿಂದಿ ಇಂಡಸ್ಟ್ರಿಯಲ್ಲಿ ನಾನು ಹೆಸರು ಮಾಡಿದ್ದೇನೆ ಎಂಬ ಅರ್ಥದಲ್ಲಿ ಹೇಳಿರಬಹುದು. ನಾವೂ ಹುಟ್ಟಿಯೇ ಇರಲಿಲ್ಲ. ಆಗಲೇ ಅಣ್ಣಾವ್ರ‌ ಜೊತೆಗೆ ಅಭಿನಯಿಸಿದವರು ಶಶಿಕಲಾ. ನಾವೆಲ್ಲಾ ಪ್ರೇಮಾ ಅವರನ್ನು ನೋಡಿಕೊಂಡೆ ಬೆಳೆದವರು. ಅವರು ಎಂಥ ಅದ್ಭುತವಾ್ ನಟಿ. ಸಿನಿಮಾನೇ ಅವರಿಂದ ನಡೆಯುತ್ತಿತ್ತು. ಅವರಿದ್ದ ಸಿನಿಮಾಗಳು ಒಳ್ಳೆ ಕಲೆಕ್ಷನ್ ಮಾಡ್ತಾ ಇತ್ತು. ರಶ್ಮಿಕಾ ಮಂದಣ್ಣ ಮೇಲೆ ಗೌರವ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯವನ್ನ ಪರಿಚಯಿಸಿದ್ದಾರೆ. ಗೊತ್ತಿಲ್ಲದ ಹೇಳಿರಬಹುದು. ಅವರನ್ನು ಕ್ಷಮಿಸೋಣಾ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment