ಸಿಎಂ ಬದಲಾವಣೆ, ಸೆಪ್ಟೆಂಬರ್ ಕ್ರಾಂತಿ ಹೀಗೆ ಹಲವು ಬೆಳವಣಿಗೆಯ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಯಾವತ್ತಿಗೂ ನಾವಿಬ್ಬರು ಒಂದೇ ಎಂಬುದನ್ನ ತೋರಿಸಿದ್ದಾರೆ. ಇಂದು ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವುದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರೂ ಮೈಸೂರಿನಲ್ಲಿ ಸೇರಿದ್ದರು. ಈ ವೇಳೆ ಪಕ್ಷದ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದಾರೆ.
ಐದು ವರ್ಷ ನಮ್ಮ ಸರ್ಕಾರ ಬಂಡೆ ಥರ ಗಟ್ಟಿಯಾಗಿರುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈ ಮೇಲಕ್ಕೆತ್ತಿ ಪ್ರದರ್ಶನ ಮಾಡಿದರು. ನಾವೂ ಗಟ್ಟಿ, ನಾವೂ ಒಗ್ಗಟ್ಟಾಗಿ ಇರ್ತೀವಿ ಎಂದರು. ಅದರಲ್ಲೂ ಸಚಿವ ಕೆ ಎನ್ ರಾಜಣ್ಣ ಅವರು ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತಾಡಿದಾಗಿನಿಂದ ಕೆಲ ಕಾಂಗ್ರೆಸ್ ನಾಯಕರು ಹಲವು ಹೇಳಿಕೆಗಳನ್ನು ನೀಡುತ್ತಾ ಇದ್ದರು. ಬಿಜೆಪಿ ನಾಯಕರಂತು ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟನೆ ಮಾಡ್ತಾರೆ ಅಂತೆಲ್ಲಾ ಹೇಳಿದ್ದರು. ಇದೀಗ ಅವರಿಗೆಲ್ಲ ಸಿಎಂ ಸಿದ್ದರಾಮಯ್ಯ ತಿರಗೇಟು ನೀಡಿದ್ದಾರೆ. ದಸರಾ ವೇಳೆಗೆ ಸಿಎಂ ಬದಲಾವಣೆ ಎಂಬ ಆರ್ ಅಶೋಕ್ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿ ಪಂಚಾಂಗ ಬಿಡಿ ನಿಮಗೆ ಏನು ಅನ್ನಿಸುತ್ತೆ ಹೇಳಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದಿದ್ದಾರೆ.
ಈ ಒಗ್ಗಟ್ಟು ಪ್ರದರ್ಶನದ ಬಗ್ಗೆ ವಿರೋಧ ಪಕ್ಷದ ನಾಯಕರು ವ್ಯಂಗ್ಯವಾಡಿದ್ದಾರೆ. ಬಂಡೆ ಪುಡಿ ಪುಡಿ ಆಗುತ್ತೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಬಿಜೆಪಿಯವರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.






