ಕಲಬುರಗಿ: ತಮ್ಮದೇ ಪಕ್ಷದ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ತನಗೆ ಗೊತ್ತಿರುವ ಸತ್ಯವನ್ನ ಹೇಳಿದ್ರೆ ಸರ್ಕಾರವೇ ಅಲ್ಲಾಡುತ್ತೆ ಎನ್ನುವ ಮಾತನ್ನಾಡಿದ್ದಾರೆ. ಅದು ರಾಜೀವ್ ಗಾಂಧಿ ವಸತಿ ಯೋಜನೆಯ ವಿಚಾರಕ್ಕೆ. ಹಾಗಾದ್ರೆ ಬಿ.ಆರ್.ಪಾಟೀಲ್ ಹೇಳಿದ್ದೇನು ಅನ್ನೋದನ್ನ ಮುಂದೆ ಓದಿ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸದೊಂದು ಬಾಂವ್ ಹಾಕಿದ ಶಾಸಕ ಪಾಟೀಲ್ ಅವರು, ಹಣ ನೀಡಿದವರಿಗಷ್ಟೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆಗಳು ಮಂಜೂರಾಗುತ್ತಿವೆ ಎಂದು ಆರೋಪಿಸಿರುವ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಈ ಆಡಿಯೋ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತರಾದ ಸರ್ಫರಾಜ್ ಖಾನ್ ಜೊತೆಗೆ ಬಿ.ಆರ್.ಪಾಟೀಲ್ ಅವರು ಮಾತನಾಡಿದ್ದಾರೆ ಎನ್ಮಲಾಗಿದೆ.
ಆಡಿಯೋದಲ್ಲಿ, ನಮ್ಮ ಸರ್ಕಾರವನ್ನು ದೂರುವುದಕ್ಕೆ ನಮಗೆ ಬೇಸರವಾಗುತ್ತಿದೆ. ಹಣ ನೀಡಿದವರಿಗಷ್ಟೇ ವಸತಿ ನೀಡಲಾಗುತ್ತಿದೆ. ನೀವೂ ತಪ್ಪು ತಿಳಿಯಬೇಡೊ. ಆಶ್ಚರ್ಯ ವಿಚಾರ ಇದೆ. ರಾಜೀವ್ ಗಾಂಧಿ ನಿಗಮದಲ್ಲಿ ಯಾರೂ ದುಡ್ಡು ಕೊಡ್ತಾರೆ ಅವರಿಗೆ ಮನೆ ನೀಡಲಾಗುತ್ತಿದೆ. ಇದು ದಂಧೆ ಆಗ್ತಾ ಇದೆಯಾ..? ನಾನು ನನ್ನ ಸರ್ಕಾರದ ಪರ ಹೇಗೆ ಆರೋಪ ಮಾಡ್ತೀನಿ..? ನನ್ನ ಮಾಹಿತಿ ಪ್ರಕಾರ ಯಾರು ದುಡ್ಡು ಕೊಡ್ತಾರೆ ಅವರಿಗೆ ಮನೆಗಳು ಸಿಗುತ್ತಿವೆ. ನಾನು ಯಾರಿಗೂ ಹೇಳಿಲ್ಲ. ನಾನು ಕೊಟ್ಟಿರುವ ಲೆಟರ್ ಗೆ ಮನೆಗಳನ್ನು ಕೊಟ್ಟಿಲ್ಲ. ಅದೇ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನಾನು ಕೊಟ್ಟಿರುವ ಲೆಟರ್ ಗೆ ಹಣ ಕೊಟ್ಟಿರುವ ಮನೆಗಳನ್ನು ತೆಗೆದುಕೊಂಡು ಬಂದಿದ್ದಾರೆ. ಹೀಗಾದ್ರೆ ನನ್ನ ಮರ್ಯಾದೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸರ್ಫರಾಜ್ ಖಾನ್ ಹಾಗೆಲ್ಲಾ ಏನಿಲ್ಲ, ಇದ್ದರೆ ಹೇಳಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಸದ್ಯ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಾ ಇದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











