Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಮ್ಯಾ, ತಮನ್ನಾ ಯಾರೂ ಹಿಂಗೆ ಮಾಡಿಲ್ಲ : ರಚಿತಾ ರಾಮ್ ವಿರುದ್ಧ ನಾಗಶೇಖರ್ ಕೆಂಡಾಮಂಡಲ..!

---Advertisement---

ಬೆಂಗಳೂರು: ಸಂಜು ವೆಡ್ಸ್ ಗೀತಾ 2 ಸಿನಿಮಾ ಸಾಕಷ್ಟು ಅಡೆತಡೆಗಳನ್ನು ದಾಟಿ ಎರಡು ಸಲ ರಿಲೀಸ್ ಆಗಿದೆ. ಆದರೆ ಇದೀಗ ಚಿತ್ರದ ನಾಯಕ ನಟಿ ರಚಿತಾ ರಾಮ್ ವಿರುದ್ಧವೇ ಚಿತ್ರತಂಡ ತಿರುಗಿ ಬಿದ್ದಿದೆ. ಫಿಲ್ಮ್ ಚೇಂಬರ್ ಗೆ ಹೋಗಿ ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ದೂರು ನೀಡಿದ್ದಾರೆ. ಸಿನಿಮಾ ಪ್ರಮೋಷನ್ ಬರುತ್ತಿಲ್ಲ ಎಂದೇ ಆಕ್ರೋಶ ಹೊರಹಾಕಿದ್ದಾರೆ.

ಇಂದು ದೂರು ನೀಡಿದ ನಾಗಶೇಖರ್ ಅವರು, ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದರೆ ಇಂಥ ಸಮಸ್ಯೆಯನ್ನ ಯಾವ ನಟಿಯೂ ನೀಡಿಲ್ಲ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಮೋಷನ್ ಗೆ ಬಂದಿಲ್ಲ. ಹೀಗಾಗಿ ರಚಿತಾ ರಾಮ್ ವಿರುದ್ಧ ನಿರ್ದೇಶಕರು ತಿರುಗಿ ಬಿದ್ದಿದ್ದಾರೆ.

ನಮ್ಮ ಸಿನಿಮಾಗೆ ರಚಿತಾ ರಾಮ್ ಒಂಚೂರು ಸಪೋರ್ಟ್ ಮಾಡಿಲ್ಲ. ರಾಕ್ಲೈನ್ ವೆಂಕಟೇಶ್ ಅವರು ಹೇಳಿದ್ರು ಕೂಡ ಕೇಳಿಲ್ಲ. ನಾವೂ ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂಜು ವೆಡ್ಸ್ ಗೀತಾ ಸಿನಿಮಾ ಇಷ್ಟು ದಿನ ಪ್ರದರ್ಶನ ಕಂಡರು ಒಂದು ದಿನವೂ ಪ್ರಚಾರಕ್ಕೆ ಬಂದಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂತವರೇ ಈ ಸಿನಿಮಾವನ್ನ ಬೆಂಬಲಿಸಿದ್ದಾರೆ‌. ನಾವೇನು ಪೇಮೆಂಟ್ ಕಡಿಮೆ ಕೊಟ್ಟಿಲ್ಲ ಎಂದು ನಾಗಶೇಖರ್ ಗರಂ ಆಗಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಗೆ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಕುರಿತಾಗಿಯೂ ದೂರು ನೀಡಿದ್ದಾರೆ. ರಚಿತಾ ರಾಮ್ ಪೇಮೆಂಟ್ ತಗೊಂಡ್ರು ತಮ್ಮ ಸಿನಿಮಾದ ಪ್ರಚಾರಕ್ಕೆ ಬರ್ತಾ ಇಲ್ಲ ಎಂಬುದರ ಕುರಿತಾಗಿಯೂ ಬೇಸರ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...