Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಕಾಂತಾರ-1 ಸಿನಿಮಾಗೆ ಮತ್ತೊಂದು ಅವಘಡ : ಮಗುಚಿಬಿದ್ದ ರಿಷಬ್ ಶೆಟ್ಟಿ ಇದ್ದ ದೋಣಿ..!

---Advertisement---

 

ಶಿವಮೊಗ್ಗ; ಕಾಂತಾರಾ 1 ಸಿನಿಮಾ ಶುರುವಾದಾಗಿನಿಂದ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರ್ತಾನೆ ಇದಾವೆ. ಅದರಲ್ಲೂ ಸಾವು ನೋವುಗಳೇ ಹೆಚ್ಚಾಗಿದಾವೆ. ಈಗಾಗಲೇ ಮೂರು ಜನ ಸಹ ಕಲಾವಿದರು ಸಾವನ್ನಪ್ಪಿದ್ದಾರೆ. ಇದನ್ನ ಮರೆಯುವ ಮುನ್ನವೇ ಕಾಂತಾರ ಪಾರ್ಟ್ 1 ಸೆಟ್ ನಲ್ಲಿ ದೊಡ್ಡ ಅವಾಂತರವೇ ನಡೆದಿದೆ. ಅದು ಶೂಟಿಂಗ್ ಮಾಡುವಾಗ, ರಿಷಬ್ ಶೆಟ್ಟಿ ಇದ್ದ ದೋಣಿ ಮಗುಚಿ ಬಿದ್ದಿದೆ.

ಕಾಂತಾರ 1 ಸಿನಿಮಾದ ಶೂಟಿಂಗ್ ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿರುವ ಮಾಸ್ತಿಕಟ್ಟೆ ಮಾಣಿ ಜಲಾಶಯದಲ್ಲಿ ಸಿನಿಮಾದ ಶೂಟಿಂಗ್ ನಡೀತಾ ಇದೆ. ಈ ಜಲಾಶಯದಲ್ಲಿ ದೋಣಿಯಲ್ಲಿ ಸಾಗುವ ದೃಶ್ಯವನ್ನ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೇ ದೋಣಿ ಮಡುಚಿ ಬಿದ್ದಿದೆ. ದೋಣಿ ಬೀಳುತ್ತಿದ್ದಂತೆ ಎಲ್ಲರೂ ಗಾಬರಿಯಾಗಿದ್ದಾರೆ. ಶೂಟಿಂಗ್ ಮಾಡುವ ವೇಳೆಯೇ ಇಂಥ ಅವಗಢ ಸಂಭವಿಸಿದೆ.

ಈ ದೋಣಿಯಲ್ಲಿ ರಿಷಬ್ ಶೆಟ್ಟಿ ಸೇರಿದಂತೆ 30 ಜನ ಇದ್ದರು. ದೋಣಿ ಬೀಳುತ್ತಿದ್ದಂತೆ ಕ್ಯಾಮೆರಾಗಳ ಸಮೇತ ಜಲಾಶಯಕ್ಕೆ ಬಿದ್ದಿದ್ದಾರೆ. ಎಲ್ಲರಿಗೂ ಈಜು ಬರುತ್ತಿದ್ದ ಕಾರಣ ಈಜಿ ದಡ ಸೇರಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ದುಬಾರಿ ಕ್ಯಾಮೆರಾಗಳು ನೀರು ಪಾಲಾಗಿವೆ. ಅದ್ದೂರಿ ವೆಚ್ಚದಲ್ಲಿ ಸಿನಿಮಾವನ್ನೆರ ನಿರ್ಮಾಣ ಮಾಡುತ್ತಿರುವ ಸಂಸ್ಥೆಗೆ ಕ್ಯಾಮೆರಾಗಳ ಬಗ್ಗೆ ಚಿಂತೆಯಿಲ್ಲ. ಯಾರಿಗೂ ಏನು ಆಗಲಿಲ್ಲವಲ್ಲ ಅದು ನೆಮ್ಮದಿ ಎನಿಸಿದೆ. ಹೀಗೆ ಪದೇ ಪದೇ ಜೀವ ಹಾನಿಯಾಗುವ ಪರಿಸ್ಥಿತಿ ಉದ್ಭವಿಸುತ್ತಿದೆ. ಕಾಂತಾರ1 ಸಿನಿಮಾವನ್ನು ಇದೇ ವರ್ಷ ರಿಲೀಸ್ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಕಲಾವಿದರ ಸಾವು, ಚಿತ್ರೀಕರಣಕ್ಕೆ ಅಡಚಣೆಗಳು ಬರ್ತಾನೆ ಇದಾವೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...