ಚಿತ್ರದುರ್ಗ. ಜೂ.06: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಮೈಗೂಡಿಸಿಕೊಳ್ಳಿ ಎಂದು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಿವಾಸ ಹೇಳಿದರು.
ನಗರದ ಕಂದಾಯಗಿರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಪ್ರಯುಕ್ತ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಆವರಣದ ಸುತ್ತ ಗಿಡ ಮರ ಬೆಳೆಸಿ. ಮರ ಗಿಡಗಳು ನಾವು ಜೀವಿಸಲು ಅಗತ್ಯ ಆಮ್ಲಜನಕ ನೀಡುತ್ತವೆ. ಸ್ವಚ್ಛ ವಾತವಾರಣ ಪರಿಸರ. ರೂಪಿಸುವಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು. ಉತ್ತಮ ಆರೋಗ್ಯ ಸಂಪಾದಿಸಲು ಉತ್ತಮ ಪರಿಸರ ವ್ಯವಸ್ಥೆಯನ್ನು ರೂಪಿಸಿಕೊಳ್ಳ ಬೇಕು. ಘನ ತ್ಯಾಜ್ಯ ನಿರ್ವಹಣೆ ಬಹಳ ಪ್ರಮುಖವಾಗಿದೆ. ಪ್ಲಾಸ್ಟಿಕ್ ಬಳಸಿದ ಪರಿಸರ ಸ್ನೇಹಿ ಪರಿಕರಗಳನ್ನು ಪರ್ಯಾಯವಾಗಿ ಬಳಸಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪಾಧ್ಯಾಯರಾದ ಗೌಸ್ ಫಯಾಜ್ ಮಾತನಾಡಿದರು. ಶಾಲಾ ಶಿಕ್ಷಕರಾದ ಪ್ರಸಾದ್ , ಸಹ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ನಾಗರಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

















