ಬೆಂಗಳೂರು; ಕಮಲ್ ಹಾಸನ್ ತಾವೂ ನೀಡಿರುವ ಹೇಳಿಕೆಯಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ಬಗ್ಗೆ, ಕನ್ನಡ ಇತಿಹಾಸ ತಿಳಿಯದೆ ಮಾತನಾಡಿದ ಕಮಲ್ ಹಾಸನ್ ಗೆ ಕ್ಷಮೆ ಕೇಳುವಂತೆ ಒತ್ತಡ ಹಾಕ್ತಾ ಇದ್ದಾರೆ. ಆದರೆ ಅವರು ಕ್ಷಮೆ ಕೇಳುವ ಗೋಜಿಗೂ ಹೋಗ್ತಿಲ್ಲ. ಇದೀಗ ಕಮಲ್ ಹಾಸನ್ ಗೆ ಹೈಕೋರ್ಟ್ ಶಾಕ್ ನೀಡಿದೆ. ಈ ಮೂಲಕ ಕರ್ನಾಟಕದಲ್ಲಿ ರಿಲೀಸ್ ಆಗುವುದು ಅನುಮಾನವಾಗಿದೆ.
ಕನ್ನಡ ಪರ ಹೋರಾಟಗಾರರು ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದು, ಸಿನಿಮಾವನ್ನು ಯಾವುದೇ ಕಾರಣಕ್ಕೂ ರಿಲೀಸ್ ಮಾಡಲು ಬಿಡಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಗೆ ಭದ್ರತೆಯನ್ನು ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆಯನ್ನು ಇದೀಗ ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ. ಈ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ, ವಾದವನ್ನು ಕೇಳಿ ವಿಚಾರಣೆ ಮುಂದೂಡಿದೆ. ಅಷ್ಟೇ ಅಲ್ಲ ಕಮಲ್ ಹಾಸನ್ ಅವರ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್ ಚೆಂಬರ್ ಜೊತೆಗೆ ಮಾತುಕತೆ ನಡೆಸಲು ಒಂದು ವಾರಗಳ ಕಾಲ ಸಮಯ ಕೋರಿದರು.

ಅರ್ಜಿದಾರರ ಪರ ವಕೀಲರೇ ಒಂದು ವಾರಗಳ ಸಮಯ ಕೇಳಿದ್ದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಂಗ್ ಆಫ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಕಮಲ್ ಹಾಸನ್ ಅವರು ಕನ್ನಡ ಫಿಲ್ಮ್ ಚೆಂಬರ್ ಗೂ ಪತ್ರ ಬರೆದಿದ್ದು, ಆ ಪತ್ರದಲ್ಲೂ ಕ್ಷಮೆ ಕೇಳಿರಲಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ಥಂಗ್ ಆಫ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










