ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 02 : ಹಾಲು ಉತ್ಪನ್ನಗಳ ಜೊತೆ ಸಿಹಿ ಪದಾರ್ಥಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ ಎಂದು ಕೆ.ಎಂ.ಎಫ್. ನಿರ್ದೇಶಕ ಜಿ.ಬಿ.ಶೇಖರ್ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಣ ಅಂಧರ ಶಾಲೆಯಲ್ಲಿ ಭಾನುವಾರ ಮಕ್ಕಳಿಗೆ ಹಾಲು ಹಾಗೂ ಕೇಕ್ ವಿತರಿಸಿ ಮಾತನಾಡಿದರು.
ವಿಶ್ವಾದ್ಯಂತ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರೂ ಹಾಲನ್ನು ಕುಡಿಯಬಹುದು. ಹಾಲಿನಲ್ಲಿ ಕ್ಯಾಲ್ಷಿಯಂ ಹಾಗೂ ಪೌಷ್ಠಿಕಾಂಶವಿರುತ್ತದೆ. ಬೆಣ್ಣೆ, ತುಪ್ಪ, ಮೊಸರಿನಿಂದಲೂ ದೇಹಕ್ಕೆ ಸಾಕಷ್ಟು ಪ್ರಯೋಜನವಿದೆ. ನಂದಿನಿ ಉತ್ಪನ್ನಗಳನ್ನೇ ಎಲ್ಲರೂ ಉಪಯೋಗಿಸಿದರೆ ರೈತರಿಗೆ ಹೆಚ್ಚಿನ ಲಾಭಾಂಶ ಕೊಡಲು ನೆರವಾಗಲಿದೆ ಎಂದು ಹೇಳಿದರು.
ಕೆ.ಎಂ.ವ್ಯವಸ್ಥಾಪಕ ಮಂಜುನಾಥ್ ಜಿ.ಬಿ. ಮಾತನಾಡಿ ಹಾಲನ್ನು ಎಲ್ಲಾ ವಯೋಮಾನದವರು ಕುಡಿಯಬಹುದು. ಕ್ಯಾಲ್ಷಿಯಂ ಹಾಗೂ ಇನ್ನಿತರೆ ಪೌಷ್ಠಿಕಾಂಶ ಪದಾರ್ಥಗಳು ಹಾಲಿನಲ್ಲಿರುತ್ತವೆ. ಹಾಗಾಗಿ ಹಾಲನ್ನು ಅಮೃತವೆಂತಲೂ ಕರೆಯುವುದುಂಟು. ನಂದಿನಿಯಿಂದ ಅನೇಕ ಉತ್ಪನ್ನಗಳು ತಯಾರಾಗುತ್ತಿವೆ. ಪ್ರತಿಯೊಬ್ಬರು ನಂದಿನಿ ಪ್ರಾಡಕ್ಟ್ಗಳನ್ನು ಬಳಸಿದಾಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯುಂಟಾಗುತ್ತದೆ ಎಂದರು.
ಜಿಲ್ಲಾ ಮಾರುಕಟ್ಟೆ ಉಸ್ತುವಾರಿ ಹನುಮಂತಪ್ಪ ಬಿ.ಎಂ. ಮಾರುಕಟ್ಟೆ ವಿಭಾಗದ ಆಕಾಶ್, ರಂಗಸ್ವಾಮಿ, ಅಂಧರ ಶಾಲೆಯ ಕಾರ್ಯದರ್ಶಿ ಕಾರ್ತಿಕ್ ಈ ಸಂದರ್ಭದಲ್ಲಿ ಹಾಜರಿದ್ದರು.



















