Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಮಲ್ ಹಾಸನ್ ಉದ್ಧಟತನದಿಂದ ಲಾಸ್ ಆಗುತ್ತಾ 300 ಕೋಟಿ..?

---Advertisement---

ಕಮಲ್ ಹಾಸನ್ ವಿವಾದ ಎಲ್ಲರಿಗೂ ಗೊತ್ತಿರುವಂತ ವಿಚಾರವೇ ಸರಿ. ಕನ್ನಡದ ಬಗ್ಗೆ ಮಾತನಾಡಿದ ಕಮಲ್ ಗೆ ಕನ್ನಡಿಗರು ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಷಮೆ ಕೇಳದೆ ಕಮಲ್ ಹಾಸನ್ ಗೆ ಬೇರೆ ದಾರಿಯೇ ಇಲ್ಲ. ಆದರೆ‌ ಕಮಲ್ ಹಾಸನ್ ಈ ವಿಚಾರದಲ್ಲಿ ಮೊಂಡುತನ ತೋರುತ್ತಿದ್ದಾರೆ. ಇದರಿಂದ ಸಿನಿಮಾಗೆ ನಷ್ಟವಾಗುವುದು ಬಿಟ್ಟರೆ ಬೇರೆನು ಆಗಲ್ಲ. ಒಮ್ಮೆ‌ ಕನ್ನಡಿಗರು ತಮ್ಮ ಭಾಷೆಗೆ ಅವಮಾನ ಆಯ್ತು ಅಂತ ಬಿಟ್ಟರೆ ಮುಗೀತು, ಅವರ ಸಿನಿಮಾಗಳನ್ನು ಸಹ ನೋಡಲ್ಲ. ಆ ರೀತಿ ಸ್ವಾಭಿಮಾನಿಯಾಗ್ತಾರೆ. ಹೀಗಾಗಿ ಕಮಲ್ ಹಾಸನ್ ಮೊಂಡುತನ ಸಿನಿಮಾದ ಮೇಲೆ ಪ್ರಭಾವ ಬಿರೋದು ಡೌಟೇ ಇಲ್ಲ.

ತಮಿಳಿನಿಂದ ಕನ್ನಡ ಹುಟ್ಟಿರೋದು ಅಂತ ಹೇಳಿದ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವಾದರೆ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಆಗೋದಕ್ಕೆ ಬಿಡಲ್ಲ ಎಂದೇ ಕನ್ನಡಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಅತ್ತ ನೋಡುದ್ರೆ ನಾನು ತಪ್ಪೇ ಮಾಡಿಲ್ಲ, ನಾನೇಕೆ ಕ್ಷಮೆ ಕೇಳಬೇಕು ಅಂತಿದ್ದಾರೆ. ಕ್ಷಮೆ ಕೇಳದೆ ಹೋದರೆ ಥಂಗ್ ಆಫ್ ಲೈಫ್ ರಿಲೀಸ್ ಆಗಲ್ಲ ಅಂತಾನೇ ಫಿಲ್ಮ್ ಚೇಂಬರ್ ಕೂಡ ನಿರ್ಧಾರ ಮಾಡಿದೆ.

ಇನ್ನು ಥಂಗ್ ಲೈಫ್ ಗಾಗಿ 300 ಕೋಟಿಯನ್ನು ಖರ್ಚು ಮಾಡಲಾಗಿದೆ. ಬಹಳ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಅದರ ಮುಖ್ಯ ಭಾಗವಾಗಿ ಕಮಲ್ ಹಾಸನ್ ಬೆಂಗಳೂರಿಗೆ ಬಂದು ಕೂಡ ಪ್ರಮೋಷನ್ ಮಾಡಿ ಹೋಗಿದ್ದಾರೆ. ಆದರೆ ಚೆನ್ನೈನಲ್ಲಿ ಪ್ರಮೋಷನ್ ಭಾಗವಾಗಿ ಮಾತನಾಡುವಾಗ, ಕನ್ನಡದ ಬಗ್ಗೆ ಕಮಲ್ ಹಾಸನ್ ನಾಲಿಗೆ ಹರಿಬಿಟ್ಟಿದ್ದರು. ಇದೀಗ ಅದರ ಎಫೆಕ್ಟ್ ಸಿನಿಮಾ ಮೇಲಾಗುವ ಎಲ್ಲಾ ಸಾಧ್ಯತೆಯೂ ಕಾಣಿಸ್ತಾ ಇದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment