Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅಭಿಮಾನಿಗಳ ಮನವಿ : ಸಾರ್ವತ್ರಿಕ ರಜೆ ಘೋಷಿಸ್ತಾರಾ ಸಿಎಂ ಸಿದ್ದರಾಮಯ್ಯ..?

---Advertisement---

ಬೆಂಗಳೂರು; ಆರ್ಸಿಬಿ.. ಆರ್ಸಿಬಿ.. ಆರ್ಸಿಬಿ.. ಎಲ್ಲೆಲ್ಲೂ ಆರ್ಸಿಬಿಯದ್ದೇ ಸದ್ದು. ನಾಳೆಯ ಮ್ಯಾಚ್ ಗೋಸ್ಕರ ಎಲ್ಲರು ತುದಿಗಾಲಿನಲ್ಲಿ ನಿಂತಿದ್ದಾರೆ. ಸುಮಾರು 18 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಕಾಯ್ತಾ ಇರುವಂತಹ ಕಪ್ ಈ ಬಾರಿ ಬಂದೇ ಬರುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ಅಭಿಮಾನಿಗಳೆಲ್ಲಾ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದು ಮನವಿಯನ್ನ ಮಾಡಿದ್ದಾರೆ.

ಅದರಲ್ಲೂ ಈ ಬಾರಿ ಆರ್ಸಿಬಿ ತಂಡ ಸಖತ್ ಆಗಿನೇ ಮ್ಯಾಚ್ ಆಡಿದೆ. ನಾಳೆ ನಡೆಯುವ ಮ್ಯಾಚ್ ನಲ್ಲಿ ಆರ್ಸಿಬಿ ವರ್ಸಸ್ ಪಂಜಾಬ್ ಪಂದ್ಯ ನಡೆಯಲಿದೆ. ಈ ಬಾರಿಯ ಆಟದಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದು, ಫ್ಲೇ ಆಫ್ ನಲ್ಲಿ ಪಂಜಾಬ್ ವಿರುದ್ಧ ಪಂದ್ಯವಾಡಲಿದ್ದು, ನಾಳೆ ಒಂದು ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮನವಿಯನ್ನ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರಾ ನೋಡಬೇಕಿದೆ.

ಆರ್ಸಿಬಿ ಅಭಿಮಾನಿಗಳು ಆ ದಿನವನ್ನ ಹಬ್ಬವನ್ನಾಗಿ ಮಾಡುತ್ತಾರೆ. ನಾಳೆ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಅಲ್ಲಿಗೆ ಟಿಕೆಟ್ ಕೂಡ ಬುಕ್ ಆಗಿರುತ್ತವೆ‌. ನಾಳೆಯ ಮ್ಯಾಚ್ ಊಹೆಯೂ ಮಾಡಲಾಗದಷ್ಟು ಕುತೂಹಲವಿರುತ್ತದೆ. ಆರ್ಸಿಬಿ ಅಭಿಮಾನಿಗಳು ಕೆಲಸಕ್ಕೆ ಹೋದ್ರು ಕೂಡ ಕೆಲಸದ ಕಡೆ ಅಷ್ಟೊಂದು ಗಮನ ಇರೋದಿಲ್ಲ. ಮ್ಯಾಚ್ ಬಗ್ಗೆಯೇ ಯೋಚನೆ ಇರುತ್ತೆ‌. ಹೀಗಾಗಿ ಸಾರ್ವತ್ರಿಕ ರಜೆ ನೀಡಬೇಕೆಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಆರ್ಸಿಬಿಯ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನ ಮಾಡಿಸಿದ್ದಾರೆ. ಹೋಮ ಹವನಗಳ‌ನ್ನ ಮಾಡಿಸಿ, ಆರ್ಸಿಬಿ ತಂಡಕ್ಕೆ ಶಕ್ತಿ ಬರಲೆಂದೇ ಪೂಜೆಗಳನ್ನ ಮಾಡಿಸ್ತಾ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...