Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿ: ರಾಜ್ಯ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಆಕ್ರೋಶ

---Advertisement---

 

ಹುಬ್ಬಳ್ಳಿ; ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದಿಂದ ದೇವಸ್ಥಾನಗಳ ಅಭಿವೃದ್ಧಿ ಸಲುವಾಗಿ 15 ರಿಂದ 20 ಪ್ರಪೋಷಲ್ ಹೋಗಿದ್ದವು. ಇದರಲ್ಲಿ ಬೆಂಗಳೂರಿನ ದೇವಿಕಾರಾಣಿ ಎಸ್ಟೇಟ್ ದೇವಾಲಯ, ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಸಹ ಒಂದು ಎಂದಹ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಬೆಳಗಾವಿ ಅಧಿಕಾರಿ ಹಾಗೂ ಡಿಸಿ ಅವರಿಗೆ ‌ಮನವರಿಕೆ ಮಾಡಿದೆ. ಕೇಂದ್ರ ಪ್ರಚಾಸ ಸಚಿವರ ಗಮನಕ್ಕೆ ತಂದು ಮಾಹಿತಿ ಕೊಟ್ಟೆ. ನಾನು ಸೂಚನೆ ನೀಡಿದ ಕಾರಣ ಅನುದಾನ ಬಂದಿದೆ. 118 ಕೋಟಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಿದೆ. 118 ಅನುದಾನ ಖರ್ಚು ಆಗಿದ್ದು, ಇದನ್ನು ಖರ್ಚು ಮಾಡುವ ಹೊಣೆ ರಾಜ್ಯ‌ ಸರಕಾರದ್ದು. ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವರು ಎಚ್ ಕೆ ಪಾಟೀಲ್ ಇದ್ದಾರೆ. ಆದರೆ ನನ್ನ ಯಾವುದೇ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳತಾ ಇಲ್ಲ.

ಯಾವುದೇ ನಿರ್ಣಯ , ಸಭೆ ಮಾಡಿದರೆ ಕೊನೆಯ ಸಮಯದಲ್ಲಿ ಗಮನಕ್ಕೆ ತರುತ್ತಾರೆ. ನಾಳೆ‌ ಸಭೆ ಇದ್ದರೆ ಇಂದು ಮಾಹಿತಿ ಕೊಡುತ್ತಾರೆ. ನಾನು ಸಂಸದ ಇದ್ದೇನೆ ನನ್ನದೇ ಸಲಹೆ ಸೂಚನೆಗಳು ಇವೆ. ನಾನು ಸಹ ಮಾಹಿತಿ ,ಸಲಹೆ ಸೂಚನೆ ಮಾರ್ಗದರ್ಶನ ನೀಡಲು ಆಗತಾ ಇಲ್ಲ. ಆದರೆ ನನಗೆ ಸರಿಯಾದ ಮಾಹಿತಿ ಕೊಡತಾ ಇಲ್ಲ. ರಾಜಕೀಯ ಕಾರಣಕ್ಕೆ ಜೊತೆಗೆ ಬೇರೆ ಬೇರೆ ಕಾರಣಕ್ಕೆ ನನಗೆ ಮಾಹಿತಿ ಕೊಡತಾ ಇಲ್ಲ. ಇಂದು ಲೋಕಸಭಾ ಸದಸ್ಯರನ್ನ ಬಿಟ್ಟು ಸಭೆ ಮಾಡಲಾಗುತ್ತಿದೆ. ಈ ಕುರಿತು ಪ್ರವಾಸೋದ್ಯಮ ಸಚಿವರಿಗೆ ಪತ್ರ ಸಹ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ಇದು ಸರಿಹೋಗ ಬಹುದು. ರಾಜ್ಯ ಸರ್ಕಾರದ ಯಾವುದೇ ಅನುದಾನ ಕೊಡತಾ ಇಲ್ಲ.

ಕಳೆದ ಬಜೆಟ್ ನಲ್ಲಿ ಸಹ ಸಿಎಂ ಸಿದ್ದರಾಮಯ್ಯ ಹೇಳಿದ್ದರು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಟ್ಟ 118 ಕೋಟಿ ಅನುದಾನ ಖರ್ಚು ಮಾಡತಾ ಇದ್ದಿರಿ ಅಷ್ಟೇ. ಇದಕ್ಕೂ ನಮ್ಮ ಯಾವುದೇ ತಕರಾರು ಇಲ್ಲ. ಆದರೆ‌ ರಾಜ್ಯ ಸರ್ಕಾರ ದೇವಸ್ಥಾನ ಅಭಿವೃದ್ಧಿ ಅನುದಾನ ಕೊಟ್ಟಿದ್ದೇವೆ ಅಂತಾ ಸುಳ್ಳು ಹೇಳ್ತಾ ಇದ್ದಾರೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment