Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಕೋವಿಡ್ ಹೆಚ್ಚಳ : ಶಾಲೆಗಳ ರಜೆ ಬಗ್ಗೆ ಸಚಿವರಿಂದ ಮಹತ್ವದ ಘೋಷಣೆ

---Advertisement---

ಬೆಂಗಳೂರು; ಶಾಲೆಗಳ ರಜೆ ಮುಗಿದು, ಮಕ್ಕಳು ಬ್ಯಾಗ್ ಹಾಕಿಕೊಂಡು ಹೊರಡುವ ಸಮಯ ಬಂದೇ ಬಿಟ್ಟಿದೆ. ಆದರೆ ಇದರ ನಡುವೆ ಕೊರೊನಾ ಆತಂಕವೂ ಎದುರಾಗಿದೆ. ದಿನೇ ದಿನೇ ಕೊರೊನಾ ವೈರಸ್ ಹೆಚ್ಚಾಗ್ತಾ ಇದೆ. ಹೀಗಾಗಿ ಮಕ್ಕಳನ್ನ ಶಾಲೆಗೆ ಕಳುಹಿಸುವುದಕ್ಕೂ ಭಯಗೊಳ್ಳುತ್ತಿದ್ದಾರೆ. ಇದೀಗ ಪೋಷಕರ ಆತಂಕಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಜೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮೇ 29ರಿಂದ ಶಾಲೆಗಳು ಪ್ರಾರಂಭವಾಗುತ್ತಿವೆ. ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಅಂತಹವರಿಗೆ ರಜೆ ನೀಡಬೇಕು. ಕೊವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ. ಆದರೆ ಎಚ್ಚರಿಕೆ, ಮುಂಜಾಗ್ರತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ನೀಡಿದರೆ, ಅದನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ.

ಆರೋಗ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಯಂತೆ ನಾವೂ ಜಾರಿ ಮಾಡುತ್ತೇವೆ. ಈವರೆಗೆ ಆರೋಗ್ಯ ಇಲಾಖೆ ಯಾವುದೇ ಮಾರ್ಗಸೂಚಿ ನೀಡಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವೆಉ ಅಧಿಕಾರುಗಳ ಜೊತೆಗೆ ಸಭೆ ಮಾಡಿ ಅದರಲ್ಲಿಯೇ ಕೆಲವು ಮಾರ್ಗಸೂಚಿಗಳನ್ನ ಸೂಚಿಸಿದ್ದು, ಅದನ್ನ ಪಾಲನೆ ಮಾಡುತ್ತೇವೆ ಎಂದಿದ್ದಾರೆ. ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆರೋಗ್ಯ ಇಲಾಖೆ ಕೂಡ ಜಾಗೃತಿಯನ್ನು ಮೂಡಿಸುತ್ತಿದೆ. ಈಗಾಗಲೇ ಕೊರೊನಾ ಟೆಸ್ಟ್ ಗಳನ್ನು ಮಾಡಿದೆ. ಹೋಮ್ ಐಸೋಲೇಷನ್ ನಲ್ಲಿ ಕೂಡ ಜನರನ್ನ ಇಟ್ಟಿದೆ, ಹಲವರಿಗೆ ಚಿಕಿತ್ಸೆಯನ್ನು ಕೂಡ ಮುಂದುವರೆಸಿದೆ. ಹೀಗಾಗಿ ಜನರು ಕೂಡ ಜಾಗೃತಿಯಿಂದ ಇರಬೇಕಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...