ಚೆಲುವರಾಯಸ್ವಾಮಿ ಪರಿಹಾರ ನೀಡಲು ಹೋದಾಗ ತಿರಸ್ಕರಿಸಿದ ಮೃತ ಬಾಲಕಿ ತಂದೆ..!

1 Min Read

 

ಮಂಡ್ಯ; ಹೃತೀಕ್ಷಾ ಎಂಬ ಪುಟ್ಟ ಬಾಲಕಿ ನಿನ್ನೆ ಮೃತಪಟ್ಟಿದ್ದಾಳೆ. ನಾಯಿ ದಾಳಿಗೊಳಗಾಗಿದ್ದ ಹೃತೀಕ್ಷಾಳನ್ನ ಆಸ್ಪತ್ರೆಗೆ ಸಾಗಿಸುವಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ ಮಗು ಕೆಳಗೆ ಬಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದೆ. ಮಗಳನ್ನು ನೆನೆದು ತಂದೆ ತಾಯಿಯ ರೋದನೆ ಮುಗಿಲು ಮುಟ್ಟಿದೆ. ಇಂದು ಸಚುವ ಚೆಲುವರಾಯಸ್ವಾಮಿ ಅವರ ಮನೆಗೆ ಹೋಗಿ, ಸಾಂತ್ವಾನ ತಿಳಿಸಿದ್ದಾರೆ.

ಚೆಲುವರಾಯಸ್ವಾಮಿ ಅವರು ಕುಟುಂಬದವರನ್ನು ಭೇಟಿಯಾದಾಗ ಮೃತ ಬಾಲಕಿಯ ತಂದೆ, ಮಗಳ ಜೊತೆಗೆ ಇದ್ದಂತ ಫೋಟೋಗಳನ್ನ ತೋರಿಸುತ್ತಾ, ನೋಡಿ ಸರ್ ನನ್ನ ಮಗಳನ್ನ. ನಂಗೆ ಕೈ ತುತ್ತು ತಿನ್ನಿಸ್ತಾ ಇದ್ದಳು.ಪಪ್ಪಾ‌ನನಗೆ ನೀನೆ ಊಟ ಮಾಡಿಸು ಅಂತ ಇದ್ದಳು. ಈಗ ನಾನು ಏನು ಮಾಡ್ಲಿ ಅಂತ ಕಣ್ಣೀರು ಹಾಕಿದ್ದಾರೆ. ಮಗಳನ್ನು ಕಳೆದುಕೊಂಡ ತಂದೆಗೆ ಅವರಿಂದ ಯಾವುದೇ ರೀತಿಯ ಸಾಂತ್ವಾನವನ್ನ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಸಚಿವ ಚೆಲುವರಾಯಸ್ವಾಮಿ ಅವರು ಸಾಧ್ಯವಾದಷ್ಟು ಸಮಾಧಾನ ಮಾಡಿದ್ದಾರೆ. ಬಳಿಕ ಪರಿಹಾರವನ್ನ ನೀಡಿದ್ದಾರೆ.

ಮಗಳಿಗೆ ನಾಯಿ ಕಚ್ಚಿದಾಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮದ್ದೂರಿನಲ್ಲಿ ಒಂದೇ‌ ಒಂದು ಇಂಜೆಕ್ಷನ್ ಕೊಟ್ಟಿದ್ದರೆ ಇಷ್ಟೆಲ್ಲ ಸಮಸ್ಯೆ ಆಗ್ತಾ ಇರಲಿಲ್ಲ. ಇಂಜೆಕ್ಷನ್ ಇಲ್ಲ ಅಂತ ಅಷ್ಟು ದೂರ ಕಳುಹಿಸಿದರು ಎಂದು ಸಚಿವರ ಮುಂದೆ ಕಣ್ಣೀರು ಹಾಕಿದರು. ಸಚಿವ ಚೆಲುವರಾಯಸ್ವಾಮಿ ಅವರು ಕೂಡ ಸಾಂತ್ವಾನ ಹೇಳಿದ್ದು, ಒಂದೂವರೆ ಲಕ್ಷ ಹಣವನ್ನು ಪರಿಹಾರ ನೀಡಿದ್ದಾರೆ. ಆದರೆ ಆ ನೋವಿನಲ್ಲಿದ್ದ ಅಶೋಕ್ ಅವರು ಪರಿಹಾರ ಹಣ ಬೇಡ ಎಂದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಮಗಳನ್ನ ಕಳೆದುಕೊಂಡಿರುವ ನೋವು ಅಷ್ಟು ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *