ಬೆಂಗಳೂರು; ರೇಣುಕಾಸ್ವಾಮಿ ಕೊನೆ ಪ್ರಕರಣದ ಬಳಿಕ ಪವಿತ್ರಾ ಗೌಡ ಸದಾ ಕಾಲ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ತಾಳ್ಮೆ, ಬದುಕಿನ ಬಗ್ಗೆ ಪೋಸ್ಟ್ ಹಾಕಿದ್ದಾರೆ.
ಇವತ್ತು ಎರಡು ಪೋಸ್ಟ್ ಗಳನ್ನ ಹಾಕಿದ್ದಾರೆ. ಮೊದಲನೆಯದು ‘ಸಮಯ ಮತ್ತು ತಾಳ್ಮೆ ತುಂಬಾ ಮುಖ್ಯ. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಅತ್ಯುತ್ತಮ ಉತ್ತರ. ಪ್ರತಿಯೊಂದು ಸನ್ನಿವೇಶದಲ್ಲೂ ನಗುವುದು ಅತ್ಯುತ್ತಮ ಉತ್ತರ. ಪ್ರತಿಯೊಂದು ಸನ್ನಿವೇಶದಲ್ಲೂ ನಗುವುದು ಅತ್ಯುತ್ತಮ ಪ್ರತಿಕ್ರಿಯೆ ಅಂತ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟರ್ ನಲ್ಲಿ ದೇವರ ಚಿತ್ರ ಹಾಕಿದ್ದು, ಎಲ್ಲವನ್ನು ಕಳೆದುಕೊಂಡಂತೆ ನಟಿಸಿ ನೋಡು. ಆಗ ನಿನ್ನವರು ಯಾರು ಎಂಬುದು ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದೆಲ್ಲವನ್ನು ನೋಡಿದ ಅಭಿಮಾನಿಗಳಿಗೆ ಶಾಕ್ ಆಗಿದೆ.
ಇತ್ತೀಚೆಗಷ್ಟೇ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದರು. ಈ ಕೋರ್ಟ್ ಗೆ ಹೋಗಿ ಬಂದ ಮೇಲೆ ಹಲವು ವಿಚಾರಗಳು ಚರ್ಚೆಯಾಗಿವೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಒಂದೇ ಲಿಫ್ಟ್ ನಲ್ಲಿ ಬಂದಿದ್ದಾರೆ. ಆಗ ಪವಿತ್ರಾ ಗೌಡ ಬಲವಂತವಾಗಿ ನಂಬರ್ ತೆಗೆದುಕೊಂಡಿದ್ದಾರೆ. ದರ್ಶನ್ ಆಗ ನಂಬರ್ ಕೊಟ್ಟಿದ್ದಾರೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಪವಿತ್ರಾ ಗೌಡ ತಾಳ್ಮೆ, ಸಮಯ, ಯಾರು ನಮ್ಮವರು ಎಂಬೆಲ್ಲಾ ಪ್ರಶ್ನೆಗಳನ್ನ ಹಾಕಿದ್ದಾರೆ. ಇದು ಎಲ್ಲರಿಗೂ ಪ್ರಶ್ನೆಯಾಗಿ ಕಾಡುತ್ತಿದೆ. ಪವಿತ್ರಾ ಗೌಡ ಈ ರೀತಿ ಸ್ಟೇಟಸ್ ಹಾಕಿದ್ಯಾಕೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.

