ಮೈಸೂರು ಸ್ಯಾಂಡಲ್ ಸೋಪ್ ಬಳಸುವುದೆಂದರೆ ಎಲ್ಲರಿಗೂ ಇಷ್ಟ. ಆ ವಾಸನೆಗೇನೆ ಫಿದಾ ಆದವರು ಹೆಚ್ಚು. ಆದ್ರೆ ಸ್ವಲ್ಪ ದುಬಾರಿಯೇ ಸರಿ. ಇದೀಗ ಹೊಸ ವಿಷಯವೇನು ಅಂದ್ರೆ ಸ್ಯಾಂಡಲ್ ಸೋಪ್ ಗೆ ರಾಯಭಾರಿಯನ್ನ ನೇಮಕ ಮಾಡಲಾಗಿದೆ. ಖ್ಯಾತ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಅವರನ್ನ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಂತ ತಮನ್ನಾ, ಸದ್ಯ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಇದೀಗ ಕರ್ನಾಟಕದ ಹೆಮ್ಮೆಯ ಸೋಪ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿದ್ದಾರೆ. ಈ ಪ್ರಚಾರಕ್ಕಾಗಿ ಅವರಿಗೆ ನೀಡುತ್ತಿರುವ ಹಣವೆಷ್ಟು ಎಂಬುದರ ಬಗ್ಗೆಯೂ ಸರ್ಕಾರ ಮಾಹಿತಿಯನ್ನ ಬಹಿರಂಗ ಪಡಿಸಿದೆ. ತಮನ್ನಾಗೆ ಮೈಸೂರ್ ಸ್ಯಾಂಡಲ್ ನೀಡಿತ್ತಿರುವ ಮೊತ್ತವನ್ನ ಕೇಳಿದ್ರೆ ನಿಜಕ್ಕೂ ಶಾಕ್ ಆಗದೆ ಇರುವುದಿಲ್ಲ.

ತಮನ್ನಾಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಹಾಗೇ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಮೈಸೂರು ಸ್ಯಾಂಡಲ್ ಸೋಪನ್ನು ದೇಶಾದ್ಯಂತ ಪಸರಿಸುವುದಕ್ಕೆ ಪ್ಲ್ಯಾನ್ ನಡೆದಿದೆ. ಎಲ್ಲೆಡೆ ಮೈಸೂರು ಸ್ಯಾಂಡಲ್ ಸೋಪಿನ ಮಹತ್ವ ತಿಳಿಸಿ, ಮಾರಾಟ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಅದಕ್ಕಾಗಿ ತಮನ್ನಾ ಅವರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ತಮನ್ನಾ ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ ಎರಡು ವರ್ಷ ಎರಡು ದಿನಗಳ ಕಾಲಕ್ಕೆ ಒಪ್ಪಿಗೆ ನೀಡಿದ್ದಾರೆ. ಇದಕ್ಕಾಗಿ ತಮನ್ನಾ ಪಡೆಯುತ್ತಿರುವುದು ಬರೋಬ್ಬರಿ 6 ಕೋಟಿ ಎರಡು ಲಕ್ಷ ರೂಪಾಯಿ. ರಾಯಭಾರಿಯಾಗಿ ಕಾಣಿಸಿಕೊಳ್ಳುವುದಕ್ಕೆ ವರ್ಷಕ್ಕೆ ಮೂರು ಕೋಟಿ ಒಂದು ಲಕ್ಷದಂತೆ ಚಾರ್ಜ್ ಮಾಡಿದ್ದಾರೆ. ದುಬಾರಿ ಸಂಭಾವನೆಯನ್ನು ಪಡೆದು ಸೋಪ್ ಅನ್ನು ಪ್ರಚಾರ ಮಾಡಲು ಹೊರಟಿದ್ದಾರೆ.
















