ಬೆಂಗಳೂರು; ಇತ್ತೀಚೆಗೆ ಧರ್ಮಸ್ಥಳದ ಆಕಾಂಕ್ಷ ಎಂಬ ಯುವತಿ ಪಂಜಾಬ್ ನಲ್ಲಿ ಆತ್ಮ* ಮಾಡಿಕೊಳ್ಳುವ ಮೂಲಕ ಪೋಷಕರಿಗೆ ಅಗಾಧ ನೋವು ನೀಡಿದ್ದರು. ಮಗಳು ಒಳ್ಳೆ ಕೆಲಸಕ್ಕೆ ಸೇರಿದ್ದರಿಂದ ದೊಡ್ಡದಾದ ಕನಸ್ಸನ್ನೇ ಕಂಡಿದ್ದ ಪೋಷಕರಿಗೆ ಈಗ ಮಂಕು ಕವಿದಂತಾಗಿದೆ. ಏರೋಸ್ಪೇಸ್ ನಲ್ಲಿ ಕೆಲಸದಲ್ಲಿದ್ದರು ಈ ಆಕಾಂಕ್ಷ ಈ ರೀತಿ ಕೆಟ್ಟ ನಿರ್ದಾರ ತೆಗೆದುಕೊಂಡಿದ್ದು ಮಾತ್ರ ತಪ್ಪೇ. ಆದರೆ ಆಕೆಯ ಮನಸ್ಸು ಎಷ್ಟು ನೊಂದಿತ್ತು ಅನ್ನೋದು ಕೂಡ ಇದರಿಂದಾನೇ ಅರ್ಥವಾಗುತ್ತಿದೆ. ಆಕಾಂಕ್ಷ ಆತ್ಮ* ಗೆ ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ.
ಆಕಾಂಕ್ಷ ಮೂಲತಃ ಧರ್ಮಸ್ಥಳದವರು. ಈಗಿನ್ನು 22 ವರ್ಷ ವಯಸ್ಸು. ಧರ್ಮಸ್ಥಳ ಬಳಿಯ ಬೊಳಿಯಾರ್ ಎಂಬ ಗ್ರಾಮದ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಯ ಮಗಳು. ಕಳೆದ 6 ತಿಂಗಳ ಹಿಂದಷ್ಟೇ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದಾರು. ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಸರ್ಟಿಫಿಕೇಟ್ ಪಡೆಯೋದಕ್ಕೆಂದು ಹೋದ ಆಕಾಂಕ್ಷ ಪ್ರಾಣ ಕಳೆದುಕೊಂಡಿದ್ದಾರೆ.
ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಬಿಜಿಲ್ ಮ್ಯಾಥ್ಯೂ ಪ್ರೊಫೆಸರ್ ಆಗಿದ್ದಾರೆ. ಮೂಲತಃ ಕೇರಳದವರು. ಮ್ಯಾಥ್ಯೂ ಮೇಲೆ ಪ್ರೇಮಾಂಕುರವಾಗಿತ್ತು ಎಂದು ಮೂಲಗಳ ಮಾಹಿತಿಯಾಗಿದೆ. ಆಕಾಂಕ್ಷ, ಮ್ಯಾಥ್ಯೂ ಬಳಿ ಮದುವೆಯಾಗುವಂತೆ ಕೇಳಿದ್ದರಂತೆ. ಮನೆಗೆ ಹೋಗಿ, ಕಾಲೇಜಿಗೆ ಹೋಗಿ ಗಲಾಟೆಯನ್ನು ಮಾಡಿದ್ದರಂತೆ. ಆದರೆ ಮ್ಯಾಥ್ಯೂ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲವಂತೆ. ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮ* ಪ್ರಚೋದನೆ ನೀಡಿದ ಆರೋಪದ ಮೇಲೆ ಮ್ಯಾಥ್ಯೂ ಅವರನ್ನ ಪಂಜಾಬ್ ನ ಜಲಂದರ್ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ನಂತರ ಮೃತದೇಹವನ್ನ ಧರ್ಮಸ್ಥಳಕ್ಕೆ ಕಳುಹಿಸಲಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











