Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿ ನಿಧನ ; ಕಮರಿತು ತಂಗಿಯ ಮದುವೆ ಕನಸು.. ತನ್ನ ಕನಸು..!

---Advertisement---

ಬೆಂಗಳೂರು; ರಾಕೇಶ್ ಪೂಜಾರಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. ಈ ಸಾವಿನ ಬಗ್ಗೆ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಯಾಕಂದ್ರೆ ರಾಕೇಶ್ ಪೂಜಾರಿಗೆ ಇನ್ನು ಕೇವಲ 34 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿಗೇನೆ ಸಾವು ಬಂದು ಬಿಡ್ತಾ ಅಂತ. ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಆಗಿದ್ದರು. ಸಾಕಷ್ಟು ಕನಸುಗಳನ್ನ ಕಂಡಿದ್ದ ರಾಕೇಶ್ ಪೂಜಾರಿ ಇಂದು ನಿಧನರಾಗಿದ್ದಾರೆ. ನಿನ್ನೆಯಷ್ಟೇ ಸ್ನೇಹಿತನ ಮದುವೆಯಲ್ಲಿ ಎಂಜಾಯ್ ಮಾಡಿದ್ದವರು. ಇಂದು ಈ ಲೋಕವನ್ನೇ ಬಿಟ್ಟು ಹೊರಟಿದ್ದಾರೆ.

ಸ್ನೇಹಿತನ ಮದುವೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಇದು ಕಿರುತೆರೆ ಚಿತ್ರರಂಗದವರಿಗೆ ಶಾಕ್ ನೀಡಿದೆ. ರಾಕೇಶ್ ಪೂಜಾರಿ ಸಾವಿನಿಂದ ಕುಟುಂಬಸ್ಥರು ನೀರವ ಮೌನದಲ್ಲಿದ್ದಾರೆ. ಮಗನ ಸಾವನ್ನ ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.

ರಾಕೇಶ್ ಪೂಜಾರಿಗೆ ಇದ್ದ ದೊಡ್ಡ ಕನಸು ಅಂದ್ರೆ ಅವರ ತಂಗಿಯ ಮದುವೆ ಮಾಡುವುದು. ಸ್ನೇಹಿತರ ಬಳಿಯೂ ಆ ಕನಸನ್ನ ಹಂಚಿಕೊಂಡಿದ್ದರು. ತಂಗಿ ಮದುವೆ ಮಾಡಿ ಆಮೇಲೆ ನಾನು ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ತುಳುನಾಡಿನ ಕೊರಗಜ್ಜ ದೈವದ ಬಗ್ಗೆ ಅಪಾರವಾದ ನಂಬಿಕೆ ಅವರಿಗೆ ಇತ್ತು. ಬಹಳ ಕಷ್ಟಪಟ್ಟು ಬಂದಿದ್ದ ರಾಕೇಶ್ ಪೂಜಾರಿ ಇಂದು ತಂಗಿ ಮತ್ತು ತಾಯಿಯನ್ನು ಬಿಟ್ಟು ಅಗಲಿದ್ದಾರೆ. ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲೂ ಮಾಡಿದ್ದರು. ಜೀ ಕನ್ನಡದ ವತಿಯಿಂದಾನೂ ಸಂತಾಪ ಸೂಚಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...