Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಒತ್ತಡ ನಿವಾರಣೆಗೆ ಸಂಗೀತವೇ ಶ್ರೇಷ್ಠ ಔಷಧಿ : ಡಾ. ಜೆ .ಕರಿಯಪ್ಪ ಮಾಳಿಗೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 28 : ಮಾನವ ಕೆಲಸದಿಂದ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡದ ನಡುವೆ ಇರುತ್ತಾರೆ ಈತನ ಒತ್ತಡವನ್ನು ನಿವಾರಣೆ ಮಾಡುವುದರ ಎಂದರೆ ಸಂಗೀತ, ತಮ್ಮ ಕೆಲಸದ ನಡುವೆ ಸಂಗೀತವನ್ನು ಆಲಿಸುವುದರ ಮೂಲಕ ತಮ್ಮ ದೇಹದಲ್ಲಿನ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾದ ಡಾ. ಜೆ .ಕರಿಯಪ್ಪ ಮಾಳಿಗೆ ತಿಳಿಸಿದರು.

ಮದಕರಿ ಯುವಕ ಸಂಘ (ರಿ), ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಐಮಂಗಲದ ಪೊಲೀಸ್ ತರಬೇತಿ ಶಾಲೆ ಸಂಯುಕ್ತಾಶ್ರಯದಲ್ಲಿ  ಸÉೂೀಮವಾರ ಸಂಜೆ ಐಮಂಗಲದ ಪೊಲೀಸ್ ತರಬೇತಿ ಶಾಲೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಎಲ್ಲರು ಅನೇಕ ರೀತಿಯಾದ ಒತ್ತಡಗಳ ಮಧ್ಯದಲ್ಲಿ ಬದುಕನ್ನು ನಡೆಸಲಾಗುತ್ತಿದೆ. ಆಧುನಿಕತೆ, ತಂತ್ರಜ್ಞಾನ ಮೋಬೈಲ್, ಕೆಲಸ, ಕಟುಂಬದ ಒತ್ತಡ ಮಧ್ಯದಲ್ಲಿ ಬದುಕನ್ನು ನಡೆಸಲಾಗುತ್ತಿದೆ. ಇದಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲ, ಇದಕ್ಕೆ ನಡೆ, ನುಡಿ ಮನಸ್ಸನ್ನು ಶುದ್ದಗೂಳಿಸುವ ಪ್ರಾಚೀನವಾದ ಕಲೆ ಎಂದರೆ ಸಂಗೀತವಾಗಿದೆ. ಇದು ಅಧುನಿಕ ಒತ್ತಡದಿಂದ ಬಿಡುಗಡೆಯನ್ನು ಹೊಂದಲು ಔಷಧಿಯಾಗಿದೆ ಎಂದರು.

ಸಂಗೀತವನ್ನು ಹಾಡುವುದು ಒಂದು ಕಲೆಯಾದರೆ ಅದನ್ನು ಕೇಳುವುದು, ಪ್ರೋತ್ಸಾಹ ಮಾಡುವುದು ಒಂದು ಕಲೆಯಾಗಿದೆ. ಮಾಣವ ಎಲ್ಲಾ ಕಲೆಯನ್ನು ಸಹಾ ಬಲ್ಲವನಾಗಿದ್ದಾನೆ ಆದರೆ ತಮಗೆ ಬೇಕಾದ ಕಲೆಯನ್ನು ಮಾತ್ರ ರೂಢಿಸಿಕೊಳ್ಳುತ್ತಾನೆ. ಪ್ರತಿಯೊಂದು ಕಲೆಯೂ ಸಹಾ ಮಾನವಲ್ಲಿ ಅಡಗಿದೆ. ಕಲೆ ಇಂದಿನ ದಿನಮಾನದಲ್ಲಿ ಅನಿವಾರ್ಯ ಮತ್ತು ಅಗತ್ಯವಾಗಿದೆ. ಸಂಗೀತವನ್ನು ಆಸ್ವಾದಿಸುವವರಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಹೊಂದಿರುತ್ತಾರೆ. ಸೌಹಾರ್ದ ಸಮರಸ್ಯವನ್ನು ಮೂಡಿಸುತ್ತದೆ. ಭಾವನಾತ್ಮಕವಾದ ಆರೋಗ್ಯವನ್ನು ಉಂಟು ಮಾಡುತ್ತದೆ. ಮಾನಸಿಕ, ದೈಹಿಕ ಭಾವನಾತ್ಮಕ ಆರೋಗ್ಯವನ್ನು ನೀಡುವುದು ಸಂಗೀತ ಮಾತ್ರ. ಇಂದಿನ ದಿನಮಾನದಲ್ಲಿ ಸಂಗೀತ ಕಲೆಯನ್ನು ಪ್ರೋತ್ಸಾಹ ಮಾಡುವುದರ ಜೊತೆಗೆ ಅದನ್ನು ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ 1680 ಗ್ರಾಮಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿನ ಬುಡಕಟ್ಟಿನ ವಿಷಯಗಳನ್ನು ಅವಲೋಕನ ಮಾಡಿ ಅದನ್ನು ಸಂಶೋಧಿಸಿ ಎರಡು ಸಂಪುಟಗಳಲ್ಲಿ ಚರಿತ್ರೆಯನ್ನು ಬರೆಯಲಾಗಿದೆ. ಭಜನೆ ಪದಗಳನ್ನು ಆಲಿಸುವುದರಿಂದ ಎಲ್ಲವನ್ನು ಮೀರಿದ ಮಾನವೀಯ ಮೌಲ್ಯಗಳು ಒಳಗೊಂಡಿವೆ. ಇಂದಿನ ದಿನದಲ್ಲಿ ಮುನುಷ್ಯ ಪ್ರೀತಿಯನ್ನು ಮಾನವೀಯ ಮೌಲ್ಯಗಳನ್ನು ಸಂಬಂಧವನ್ನು ಕಳೆದುಕೊಂಡಿದ್ದೇವೆ. ಸಂವೇದನ ರಹಿತರು ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಾರೆ. ಸಂಗೀತ ಸಂವೇಧನೆ, ಸಂಬಂಧ, ಪ್ರೀತಿಯನ್ನು ಬೆಳಸುತ್ತದೆ, ಇಂದಿನ ದಿನಮಾನದಲ್ಲಿ ಜಾತಿ, ಧರ್ಮ, ದೇವರು, ರಾಜಕೀಯದಲ್ಲಿ ಬಿಕ್ಕಟ್ಟು ಇಕ್ಕಟ್ಟುಗಳಲ್ಲಿ ಮುಳಗಿದ್ದಾರೆ. ಇವುಗಳನ್ನು ಮೀರಿ ಮನುಷ್ಯರೆಲ್ಲಾ ಒಂದೇ ಎಂದು ಸಾರುವುದು ಸಾಹಿತ್ಯ, ಕಲೆ, ಸಂಗೀತವಾಗಿದೆ. ಹಾಡಿಗೆ ವಿವಿಧ ರೀತಿಯ ಶಕ್ತಿಯನ್ನು ಹೊಂದಿದೆ ಮಳೆಯನ್ನು ತರಿಸುವ ಪ್ರಾಣವನ್ನು ಉಳಿಸುವ ಶಕ್ತಿಯನ್ನು ಸಂಜೀವಿನಿಯಾದ ಸಂಗೀತ ಹೊಂದಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪೋಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಿ.ಪಾಪಣ್ಣ ಮಾತನಾಡಿ, ಒತ್ತಡವನ್ನು ನಿವಾರಣೆಯನ್ನು ಮಾಡಲು ಸಂಗೀತ ಉತ್ತಮವಾದ ಸಾಧನವಾಗಿದೆ. ಇಂದಿನ ದಿನಮಾನದಲ್ಲಿ ಸಂಗೀತಕ್ಕೆ ತಲೆ ಭಾಗದವರು ಯಾರು ಸಹಾ ಇಲ್ಲ ಪ್ರಾಣಿಗಳು, ಪಕ್ಷಿಗಳು, ಮಾನವರು, ಗಿಡಗಳು ಸಹಾ ಸಂಗೀತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಂಗೀತಕ್ಕೂ ನಮ್ಮ ಹೃದಯಕ್ಕೂ ಸಂಬಂಧ ಇದೆ ಸಂಗೀತವನ್ನು ಆಲಿಸುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ಕಡಿಮೆಯಾಗುತ್ತದೆ. ಅವಕಾಶ ಸಿಕ್ಕಾಗ ಉಪಯೋಗವನ್ನು ಮಾಡಿಕೊಳ್ಳಬೇಕಿದೆ ಇಂದಿನ ದಿನದಲ್ಲಿ ಸಂಗೀತವನ್ನು ಮರೆಯ ಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಡ್ಡಿಕೆರೆ ಕಾಂತರಾಜು ಆಕಾಶವಾಣಿ ಕಲಾವಿದರು, ಸಂಗೀತ ಪ್ರಾಧ್ಯಾಪಕರು, ಆನಂದ್ ಆರ್ ಪಾಟೀಲ್, ಪೋಲಿಸ್ ಇಲಾಖೆಯ ಪ್ರಶಾಂತ್, ಲೋಕೇಶ್, ಶಿವಕುಮಾರ್, ಆನಂದ, ಶರಣಬಸಪ್ಪ, ಪರಶುರಾಮ್ ಭಾಗವಹಿಸಿದ್ದರು. ಮದಕರಿ ಬಳಗದ ಡಿ. ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು. ಮದಕರಿ ಯುವಕ ಸಂಘ (ರಿ) ಅಧ್ಯಕ್ಷರಾದ ಸೋಮಶೇಖರ್ ವಂದಿಸಿದರು, ಅಮುಕುಂದಿ ಗಂಗಾಧರ .ಕೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವೀಣಾವಾದನ ಜನಪದ ಸಂಗೀತ ತತ್ವ ಪದಗಳು, ವಚನ ಸಂಗೀತ, ಸಂಗಮ ಸಂಗೀತ, ದಾಸರಪದ, ಕನ್ನಡ ಗೀತಗಾಯನ, ರಂಗಗೀತೆಗಳು ಗಾಯನ ಕಾರ್ಯಕ್ರಮ ನಡೆಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...