ಪಾಕ್ ಮೇಲೆ ಯುದ್ಧ ; ಸಚಿವ ಜಮೀರ್ ಅಹ್ಮದ್ ಖಾನ್ ರಿಯಾಕ್ಷನ್ ಏನು..?

ಬೆಂಗಳೂರು; ಪಾಕ್ ಮೇಲೆ ಯುದ್ಧ ಮಾಡೋದು ಗ್ಯಾರಂಟಿ. ಕೇಂದ್ರದಿಂದ ಈಗಾಗಲೆ ಎಲ್ಲಾ ರಾಜ್ಯಗಳಿಗೆ ಸೂಚನೆಯನ್ನು ನೀಡಲಾಗಿದೆ. ಜನರು ತಮ್ಮನ್ನು ತಾವೂ ಸಂರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ. ಸಂರಕ್ಷಣೆಗಾಗಿ ಮಾಕ್ ಡ್ರಿಲ್ ನಡೆಸಲಿದ್ದಾರೆ. ಈ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದು ಗೊತ್ತಿಲ್ಲ. ನಮ್ಮ ಕೇಂದ್ರದ ನಾಯಕರಾದಂತ ರಾಹುಲ್ ಗಾಂಧಿ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡ್ತೇವೆ ಅಂತ ಹೇಳಿದ್ದಾರೆ. ನಮ್ಮ ಪಕ್ಷದ ವತಿಯಿಂದ ಬೆಂಬಲ ಘೋಷಣೆ ಮಾಡಿದ್ದಾರೆ. ನಾವೂ ಕೂಡ ಅವರ ಜೊತೆಗೆ ಇರ್ತೇವೆ ಎಂದಿದ್ದಾರೆ.

ಪಾಕಿಸ್ತಾನದ ಕೆಟ್ಟ ಚಾಳಿಯನ್ನ ಭಾರತ ಇಷ್ಟು ದಿನ ಸಹಿಸಿಕೊಂಡೆ ಬಂದಿದೆ. ಎಚ್ಚರಿಕೆಯನ್ನು ನೀಡುತ್ತಾ ಬಂದಿದೆ. ಪಾಕಿಸ್ತಾನ ಈಗಿರುವ ಪರಿಸ್ಥಿತಿ ನೋಡಿದ್ರೆ ತಿನ್ನುವುದಕ್ಕೂ ಗತಿ ಇಲ್ಲ ಎಂಬಂತ ಸ್ಥಿತಿ ಅದರದ್ದು. ಅಂತದ್ರಲ್ಲಿ ಈಗಲೂ ಭಾರತದ ಮೇಲೆ ಸುಮ್ಮ ಸುಮ್ಮನೆ ದಾಳಿ ನಡೆಸೋದು, ದ್ವೇಷ ಸಾಧಿಸೋದನ್ನ ಮಾಡ್ತಾ ಇದೆ. ಮೊದಲೇ ನಮ್ಮ ಭಾರತ ಎಲ್ಲದರಲ್ಲೂ ಶಕ್ತಿಶಾಲಿಯಾಗಿ ಮುನ್ನುಗ್ಗುತ್ತಿದೆ. ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸದೇ ಇರುತ್ತದೆಯಾ. ಕಾಶ್ಮೀರದಲ್ಲಿ ಎಂಜಾಯ್ ಮಾಡುವುದಕ್ಕೆ ಹೋದವರ ಪ್ರಾಣ ತೆಗೆದ ಪ್ರತೀಕಾರವೇ ಇದಾಗಿದೆ. ಈಗಾಗಲೇ ಪಾಕಿಗಳಿಗೆ ಬಿಸಿ ಮುಟ್ಟಿಸಿದೆ‌. ಇನ್ಮುಂದೆ ಏನಿದ್ರು ಅವರನ್ನ ಮತ್ತೆ ಏಳದಂತೆ ಮಟ್ಟ ಹಾಕೋದಷ್ಟೇ. ಈ ಪಾಕಿಗಳ ಕ್ರೌರ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕೇಂದ್ರ ಸರ್ಕಾರದ ನಡೆಗೆ ಎಲ್ಲಾ ಪಕ್ಷದಿಂದಾನೂ ಬೆಂಬಲವಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks