Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪಾಕ್ ಮೇಲೆ ಯುದ್ಧ ನಡೆಯುವ ಸಾಧ್ಯತೆ ; ಹೇಗಿದೆ ಬೆಂಗಳೂರಲ್ಲಿ ತಯಾರಿ..?

---Advertisement---

ಬೆಂಗಳೂರು; ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸಾಧ್ಯತೆ ಹಿನ್ನೆಲೆ ದೇಶದಾದ್ಯಂತ ರಕ್ಷಣಾ ಮಾಕ್ ಡ್ರಿಲ್ ಮಾಡಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ನಾಳೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸಲು ಸೂಚನೆ ನೀಡಸಲು ಸೂಚನೆ ನೀಡಲಾಗಿದೆ.

ನಾಗರಿಕರ ರಕ್ಷಣೆಗಾಗಿ ದೇಶದಾದ್ಯಂತ ಮಾಕ್ ಡ್ರಿಲ್ ಅಂದ್ರೆ ಅಣಕು ಪ್ರದರ್ಶನ ನಡೆಸಲು ಸೂಚನೆ ನೀಡಲಾಗಿದೆ. ಎಲ್ಲಾ ರಾಜ್ಯಗಳಲ್ಲಿ ವಾಯು ದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಗೃಹ ರಕ್ಷಕ ದಳ, ಎನ್ ಸಿ ಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಮಾಕ್ ಡ್ರಿಲ್‌ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ. ಕರ್ನಾಟಕದ ಎರಡು ಪ್ರದೇಶದಲ್ಲಿ ಅಂದ್ರೆ ಬೆಂಗಳೂರಿನ ಮಲ್ಲೇಶ್ವರಂ ಮತ್ತು ರಾಯಚೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಕರ್ನಾಟಕ ಈ ಎರಡು ಪ್ರದೇಶದಲ್ಲಿ ಮಾತ್ರ ಮಾಕ್ ಡ್ರಿಲ್ ನಡೆಯಲಿದೆ.

ಈ ಮಾಕ್ ಡ್ರಿಲ್ ಬಗ್ಗೆ ಮಾಜಿ ಐಜಿಪಿ ಅರ್ಕೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾರವಾರ ಕೂಡ ಪ್ರಮುಖವಾದ ಸ್ಥಳ. ನಮ್ಮ ರಕ್ಷಣಾ ಪ್ರೊಡೆಕ್ಷನ್ ಯೂನಿಟ್ಸ್ ಗಳು ಹಲವಾರು ಇದಾವೆ. ಹಲವಾರು ಸೂಕ್ಷ್ಮ ಆಯುಧಗಳ ಸಂಗ್ರಹವೂ ನಮ್ಮ ರಾಜ್ಯದಲ್ಲಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಲಾಗಿದೆ. ಯುದ್ಧದಲ್ಲಿ ಸೈನಿಕ ಮಾತ್ರ ಭಾಗಿಯಾಗಲ್ಲ. ಅದು ಹಳೆ ಕಾಲದ ಯುದ್ಧ ತಂತ್ರ. ಈಗಿನ ಕಾಲಕ್ಕೆ ಯುದ್ಧ ತಂತ್ರಗಳು ಅಪ್ಡೇಟ್ ಆಗಿರುವ ಕಾತಣ, ಈ ಯುದ್ಧದಲ್ಲಿ ಪ್ರತಿ ಪ್ರಜೆಗೂ ತನ್ನದೆ ಆದ ಕರ್ತವ್ಯ ಇರುತ್ತದೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment