Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಜವಾದ ಹಿಂದೂ ದ್ರೋಹಿಗಳು ಯಾರು ಗೊತ್ತಾ..? ಮಧು ಬಂಗಾರಪ್ಪ ಹೇಳಿದ್ದೇನು..?

---Advertisement---

ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಿಜವಾದ ಭಯೋತ್ಪಾದಕರು ಅಂದ್ರೆ ಅದು ಬಿಜೆಪಿಯವರೇ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕ್ಕಮಗಳೂರು ಮೂಲದ ಆರೋಪಿಗಳನ್ನ ಬಂಧಿಸಲಾಗಿದೆ. ಸರ್ಕಾರ ಈಗಾಗಲೇ ತನಿಖೆಯನ್ನು ನಡೆಸುತ್ತಿದೆ. ಕಾನೂನು ಇದೆ. ತಪ್ಪಿತಸ್ಥರಿಗೆ ಕಾನುಹನು ಬದ್ಧವಾಗಿ ಶಿಕ್ಷೆ ನೀಡುತ್ತೇವೆ. ಬಿಜೆಪಿಯವರು ಎಲ್ಲದಕ್ಕೂ ಟೀಕೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಜವಾದ ಹಿಂದೂ ದ್ರೋಹಿಗಳು ಅಂದ್ರೆ ಅದು ಬಿಜೆಪಿಯವರು. ಇಲ್ಲದಕ್ಕೆಲ್ಲ ಬಂದು ಹಿಂದುತ್ವ ಹಿಂದುತ್ವ ಅಂತಾರೆ. ಆ ಚಾಳಿಯನ್ನ ಬಿಡಬೇಕು. ಬಿಜೆಪಿಯವರಿಗೆ ಅದೊಂದು ರೋಗವಿದೆ. ಸರ್ಕಾರ ಆರೋಪಿಗಳನ್ನು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಕಾನೂನು ಇದ್ದಾಗ ತಪ್ಪಿತಸ್ಥರಿಗೆ ಕಾನೂನು ಬದ್ಧವಾಗಿ ಶಿಕ್ಷೆ ನಿಡ್ತೇವೆ. ಅವರು ಎಲ್ಲದಕ್ಕೂ ಟೀಕರ ಟಿಪ್ಪಣಿ ಮಾಡ್ತಾರೆ ಎಂದಿದ್ದಾರೆ.

ಜನಿವಾರ,ತಾಳಿ ಅಂತ ನಾವೂ ಕಾನೂನೆ ಮಾಡಿಲ್ಲ. ಆದತೆ ಬಿಜೆಪಿ ಅದನ್ನು ಕಾನೂನು ಮಾಡಿದೆ. ಆದ್ರೆ ನಮ್ಮ ವಿರುದ್ಧ ಟೀಕೆ ಟಿಪ್ಪಣಿ ಮಾಡಿದ್ರು. ಘಟನೆಯನ್ನು ನಾವೂ ವಿರೋಧಿಸುತ್ತೇವೆ. ಬಿಜೆಪಿಯವರು ಪರೀಕ್ಷೆಗೆ ಕಾನೂನು ಮಾಡಿದ್ರು. ನಾವೂ ಕಾನೂನು ಮಾಡಿಲ್ಲ. ಅವರ ಕಾನೂನು ಮಾಡಿ ವಾಪಾಸ್ ತಗೋತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಹೆಚ್ಚಿನ ಹಿಂದೂಗಳ ಹತ್ಯೆಯಾಗ್ತಿದೆ ಎಂಬ ಆರೋಪಕ್ಕೆ, ನೀವೂ ಲೆಕ್ಕ ನೋಡಿದ್ದೀರಾ..? ಮುಸ್ಲಿಂ ಅಂತ ಲೆಕ್ಕ ಮಾಡಿದ್ದೀವಾ..? ಒಂದು ಪ್ರಾಣ ಹೋದಾಗ ಅದಕ್ಕೆ ಜಾತಿ ಇರಲ್ಲ. ಹುಟ್ಟಿದಾಗ ಯಾರೂ ಜಾತಿ ಬರ್ಕೊಂಡು ಹುಟ್ಟಲ್ಲ ಎಂದು ಬಿಜೆಪಿ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment