ಸುದ್ದಿಒನ್, ಹಿರಿಯೂರು, ಏಪ್ರಿಲ್. 21 : ಕುಡಿಯುವ ನೀರಿನ ಸಮಸ್ಯೆ ವಿಚಾರದಲ್ಲಿ ಅಧಿಕಾರಿಗಳು ಉದಾಸಿನತೆ ತೊರಬಾರದು, ತಾಲ್ಲೂಕಿನ ಯಾವ ಹಳ್ಳಿಯಲ್ಲೂ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು.
ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಸಾಮರ್ಥ್ಯ ಸೌಧದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುಡ್ಡಿನ ಬಗ್ಗೆ ಯೋಚಿಸಬಾರದು, ಟ್ಯಾಂಕರ್ ಮೂಲಕ ನೀರು ಕಲ್ಪಿಸಿ ಯಾವುದೇ ಕಾರಣಕ್ಕೂ ಎಲ್ಲೂ ಕುಡಿಯುವ ನೀರು ತೊಂದರೆ ಆಗಬಾರದು, ಬೇರೆ ಯಾವುದಾದರೂ ಮೂಲದಿಂದ ದುಡ್ಡು ವ್ಯವಸ್ಥೆ ಮಾಡೋಣ ಎಂದು ಸಚಿವರು ತಿಳಿಸಿದರು.
ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಮಾತನಾಡಿ
ತಾಲ್ಲೂಕಿನ ಮ್ಯಾದನಹೊಳೆ ಸೇತುವೆ ಕಾಮಗಾರಿ ಆರಂಭವಾಗಿದೆ. ಆಗಸ್ಟ್ ನಲ್ಲಿ ಕಾಮಗಾರಿ ಮುಗಿಯಲಿದೆ..
ಕಲ್ಲಹಟ್ಟಿ ಬಳಿ 50ಲಕ್ಷದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಮುಗಿಯುವ ಹಂತದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಖಾದಿ ರಮೇಶ್, ಕೃಷ್ಣಮೂರ್ತಿ, ಕೆಡಿಪಿ ಸದಸ್ಯರಾದ ಗುರುಪ್ರಸಾದ್, ಮಹಾಂತೇಶ್, ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್, ಸಿಡಿಪಿಒ ರಾಘವೇಂದ್ರ, ಬಿಇಒ ಸಿಎಂ ತಿಪ್ಪೇಸ್ವಾಮಿ, ಬೆಸ್ಕಾಂ ಅಧಿಕಾರಿ ಪೀರ್ ಸಾಬ್, ಇದ್ದರು




