ಬೆಂಗಳೂರು; ಜಾತಿ ಗಣತಿ ವರದಿ ರಿಲೀಸ್ ಆಗುವುದಕ್ಕೂ ಮುನ್ನವೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಅಂಕಿ ಅಂಶಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ವಿರೋಧವೂ ಜೋರಾಗಿದೆ. ಇದೀಗ ಗೊಲ್ಲ ಮತ್ತು ಯಾದವ ಸಮುದಾಯದವರು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಗೊಲ್ಲ ಸಮುದಾಯದ ಸಂಖ್ಯೆ 30 ಲಕ್ಷಕ್ಕಿಂತಲೂ ಹೆಚ್ಚಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಒಟ್ಟಾರೆಯಾಗಿ ಗೊಲ್ಲರು ಅತಿ ಹಿಂದುಳಿದ ವರ್ಗಗಳಲ್ಲಿದ್ದಾರೆ. ಇವರನ್ನ ಕೆಲವರು ಗೊಲ್ಲರು ಅಂತಾರೆ, ಯಾದವ, ಹಣಬಾರ್, ಕಾಡುಗೊಲ್ಲ ಸಮುದಾಯಗಳು ಅಂತೆಲ್ಲಾ ಹೆಸರನ್ನಿಟ್ಟಿದ್ದಾರೆ. ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ರೀತಿಯ ಹೆಸರಿನಲ್ಲಿ ಕರೆಯುತ್ತಾರೆ. ಈ ಸಮುದಾಯ ಈ ಹಿಂದಿನ ವರದಿಗಳಲ್ಲಿ ಪ್ರವರ್ಗ -1 ರಲ್ಲಿ ಇರುತ್ತಾ ಇತ್ತು. ಆದರೆ ಜಾತಿಗಣತಿ ವರದಿಯಲ್ಲಿ ಪ್ರವರ್ಗ -1A ನಲ್ಲಿ ಸೇರಿಸಲಾಗಿದೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಪ್ರವರ್ಗ 1A ನಲ್ಲಿ ಸೇರಿಸಿದ್ದರೆ, ಯಾದವರನ್ನ ಪ್ರವರ್ಗ -1Bಗೆ ಸೇರಿಸಿದ್ದಾರೆ.
ಇಲ್ಲಿ ಗೊಲ್ಲ ಮತ್ತು ಯಾದವ ಸಮುದಾಯದವರನ್ನ ಬೇರ್ಪಡಿಸಲಾಗಿದೆ. ಯಾದವರು ಕೂಡ ಗೊಲ್ಲ ಜಾತಿಗೆ ಸೇರಿದವರಾಗಿದ್ದಾರೆ. ಗೊಲ್ಲರು ಹಾಗೂ ಕಾಡು ಗೊಲ್ಲರು ಮಾತ್ರ ಒಂದೇ ಅಲ್ಲ ಈ ಮೇಲಿನ ಎಲ್ಲಾ ಜಾತಿಗಳು ಒಂದೇ. ಹೀಗೆ ಬೇರೆ ಬೇರೆ ಮಾಡುವುದು ಬೇಡ ಎಂದು ಗೊಲ್ಲ ಸಮುದಾಯದವರು ಆಗ್ರಹ ಮಾಡುತ್ತಿದ್ದಾರೆ. ಜಾತಿಗಣತಿ ವರದಿಯ ಅಂಕಿ ಅಂಶಗಳು ಬಂದ ಬೆನ್ನಲ್ಲೇ ಮತ್ತಷ್ಟು ವಿರೋಧ ವ್ಯಕ್ತವಾಗ್ತಾ ಇದೆ. ಈಗ ಗೊಲ್ಲರು ಹಾಗೂ ಯಾದವರು ಕೂಡ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದಾರೆ.











