Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯ ಬ್ಯಾಂಕ್ ರಾಬರಿ ಕಥೆ ; 6 ತಿಂಗಳ ಬಳಿಕ ಅಂದರ್ ಆಗಿದ್ದೇಗೆ ಖದೀಮರು..?

---Advertisement---

ದಾವಣಗೆರೆ; ಕಳ್ಳತನ ಮಾಡಿದ ಕಳ್ಳರು ಸಣ್ಣದಾದ ಯಾವುದಾದರೊಂದು ಸುಳಿವನ್ನ ಬಿಟ್ಟು ಹೋಗಿರುತ್ತಾರೆ. ಅದರಿಂದಾನೇ ತಗಲಾಕಿಕೊಳ್ಳುತ್ತಾರೆ. ಇದೀಗ ದಾವಣಗೆರೆಯಲ್ಲೂ ಅಂಥದ್ದೇ ಘಟನೆಯೊಂದು ನಡೆದಿದೆ. ಲಂಚ ಕೇಳಿದ್ದಕ್ಕೆ ಅಣ್ಣ ತಮ್ಮಂದಿರು ಸೇರಿ ಬ್ಯಾಂಕ್ ಅನ್ನೇ ರಾಬರಿ ಮಾಡಿರೋ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.

ಹೌದು, ಬ್ಯಾಂಕ್ ರಾಬರಿಯಾಗಿ ಐದು ತಿಂಗಳ ಬಳಿಕ ಅದರ ಸುಳಿವು ಕೊಟ್ಟಿದ್ದು ಒಂದು ಗ್ಯಾಸ್ ಸಿಲಿಂಡರ್. ಪೊಲೀಸ್ ಠಾಣೆಯ 500 ಕಿಲೋ ಮೀಟರ್ ದೂರದಲ್ಲಿ ಗ್ಯಾಸ್ ಸಿಲಿಂಡರ್ ಒಂದು ಬಿದ್ದಿತ್ತು. ಅದು ಪೊಲೀಸರ ಕಣ್ಣಿಗು ಕಂಡಿತ್ತು. ಆ ಗ್ಯಾಸ್ ಸಿಲಿಂಡರ್ ತನಿಖೆ ಶುರು ಮಾಡಿದಾಗ ಗೊತ್ತಾಯ್ತು, ಬ್ಯಾಂಕ್ ರಾಬರಿಯಾಗಿರೋದು ಯಾರಿಂದ ಅಂತ.

ಆ ಇಬ್ಬರು ಅಣ್ಣತಮ್ಮ ತಮಿಳುನಾಡು ಮೂಲದವರು. ಆದರೆ ದಾವಣಗೆರೆಗೆ ಬಂದು ಏನಾದರೊಂದು ಬಿಸಿನೆಸ್ ಮಾಡಬೇಕೆಂದುಕೊಂಡಿದ್ದರು. ಅದರಲ್ಲೂ ಬೇಕರಿಯನ್ನು ಶುರು ಮಾಡೋಣಾ ಎಂದು ನಿರ್ಧಾರ ಮಾಡಿದ್ದರಂತೆ. ಬೇಕರಿ ಪದಾರ್ಥಗಳಿಗೆ ಡಿಮ್ಯಾಂಡ್ ಇದ್ದೆ ಇದೆ. ಟೇಸ್ಟ್ ಚೆನ್ನಾಗಿರೋದನ್ನ ನೀಡಿದರೆ ಜನ ಹುಡುಕಿಕೊಂಡು ಬರುತ್ತಾರೆ. ಹೀಗಾಗಿ ಬೇಕರಿಯನ್ನು ತೆರೆಯುವುದಕ್ಕೆ ನಿರ್ಧಾರ ಮಾಡುತ್ತಾರೆ.

ಅದಕ್ಕಾಗಿ ಹಣಕಾಸನ್ನು ಸೇರಿಸಲು ಪ್ರಯತ್ನಿಸುತ್ತಾರೆ. ಆಗ ಬ್ಯಾಂಕ್ ಗೆ ಲೋನ್ ಗೆ ಅಪ್ಲೈ ಮಾಡುತ್ತಾರೆ. ಲೋನ್ ಕೊಡಬೇಕು ಎಂದರೆ ಲಂಚ ಕೊಡಬೇಕು ಎಂದು ಬ್ಯಾಂಕ್ ಮ್ಯಾನೇಜರ್ ಡಿಮ್ಯಾಂಡ್ ಇಡ್ತಾರಂತೆ. ಆಗ ಲಂಚ ಕೊಡುವುದಕ್ಕೆ ಒಪ್ಪದ ಅಣ್ಣ ತಮ್ಮ ಒಂದು ಪ್ಲ್ಯಾನ್ ಮಾಡ್ತಾರಂತೆ. ತನ್ನ ಜೊತೆಗಾರರನ್ನು ಕಟ್ಟಿಕೊಂಡು ಬ್ಯಾಂಕ್ ರಾಬರಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಬ್ಯಾಂಕ್ ರಾಬರಿ ಸಮಯದಲ್ಲಿ ಕಳ್ಳತನ ಆಗಿರೋದು 17 ಕೆಜಿ ಆಭರಣ. ಆದರೆ ಪೊಲೀಸರಿಂದ ರಿವಕರಿ ಆಗಿರೋದು ಕೇವಲ 220 ಗ್ರಾಂ. ಇನ್ನುಳಿದ ಆಭರಣದ ಬಗ್ಗೆ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment