Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ : ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು

---Advertisement---

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 22 :  ತಾಲ್ಲೂಕಿನ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ ಹಸಿವಿನ ಹೊಟ್ಟೆಯಲ್ಲಿ ಹಸುಗೂಸಿನ ಕರು ಹೊಟ್ಟೆಯಲ್ಲಿ ಸತ್ತುಹೋಗಿತ್ತು, ಈ ಸುದ್ದಿಯನ್ನು ತಿಳಿದ ಚಿತ್ರದುರ್ಗದ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮುಚ್ಚುಕುಂಟೆ ಇಂದು ಗ್ರಾಮದಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಅಮೃಮಹಲ್ ಹಸುವನ್ನು ಸಿಸೇರಿಯನ್ ಮಾಡಿ ವಿಕೃತ ರೂಪದಲ್ಲಿದ್ದ ಕರುವನ್ನು ಶಸ್ತ್ರ ಚಿಕಿತ್ಸಕರಾದ ಡಾ.ದರ್ಶನ್ ಮತ್ತು ಡಾ.ರಕ್ಷಿತ್ ತಂಡವು ಯಶಸ್ವಿಯಾಗಿ ತೆಗೆದು ಹಸುವಿನ ಜೀವ ರಕ್ಷಣೆ ಮಾಡಿದ್ದಾರೆ.

ಇವರ ಕಾರ್ಯವು ಅತ್ಯಂತ ಶ್ಲಾಘನೀಯ. ವೈದ್ಯೋ ನಾರಾಯಣೋ ಹರಿ ಎಂದರೆ ಈ ವೈದ್ಯರೇ ದೇವರು ಎಂದರೆ ತಪ್ಪಾಗಲಾರದು, ಗ್ರಾಮದ ಜನತೆಯಲ್ಲಿ ಮಂದಹಾಸ ಮೂಡಿಸಿದ್ದಾರೆ ಈ ಸಂದರ್ಭದಲ್ಲಿ ಡಾ.ಟಿ. ಕೃಷ್ಣಪ್ಪ, ನಿವೃತ್ತ ಜಂಟಿ ನಿರ್ದೇಶಕರು, ಪಶು ವೈದ್ಯಕೀಯ ಇಲಾಖೆ, ಬೆಂಗಳೂರು ಹಾಗೂ ರಾಮ ಜೋಗಿಹಳ್ಳಿಯ ಪಶು ವೈದ್ಯ ಇಲಾಖೆಯ ಇನ್ಸ್ಪೆಕ್ಟರ್ ಜಯನಾಯ್ಕ ಇನ್ನಿತರೆ ಗ್ರಾಮಸ್ತರು ಹಾಜರಿದ್ದರು..

ವರದಿ : ಟಿ.ಶಿವಮೂರ್ತಿ ಕೋಡಿಹಳ್ಳಿ, ಚಿತ್ರದುರ್ಗ,

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment