Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಉಚ್ಚಂಗಿಯಲ್ಲಮ್ಮ ಬಾಗಿಲ ಬಳಿಯಲ್ಲಿ ಸ್ಮಾರಕ ಸ್ವಚ್ಛತಾ ಕಾರ್ಯಕ್ರಮ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 19 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ಕಲಾ ಕಾಲೇಜ್ ಸ್ವಾಯತ್ತ, ಇತಿಹಾಸ ಪರಂಪರೆ ಕೂಟ ಮತ್ತು ಎನ್‍ಎಸ್‍ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗ ನಗರದ ಐತಿಹಾಸಿಕ ಸ್ಮಾರಕವಾದ ಸಿಹಿ ನೀರು ಹೊಂಡದ ಪಕ್ಕದಲ್ಲಿರುವ ಉಚ್ಚಂಗಿಯಲ್ಲಮ್ಮ ಬಾಗಿಲ ಬಳಿಯಲ್ಲಿ ಸ್ಮಾರಕ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಹ್ಲಾದ ಜಿ ಮಾತನಾಡಿ ಚಿತ್ರದುರ್ಗ ಪಾಳೇಗಾರ ಅರಸರ ಕಾಲದಲ್ಲಿ ನಿರ್ಮಾಣವಾದ ಭವ್ಯವಾದ ಕೋಟೆಯ ಕೊನೆಯ ಸುತ್ತು ಹಾಗೂ ಈಗಿನ ಮೊದಲ ಸುತ್ತಿನ ಪ್ರಮುಖ ನಾಲ್ಕು ಬಾಗಿಲು ಈಗ ಉಳಿದುಕೊಂಡಿದ್ದು ಅವುಗಳನ್ನು ಸಂರಕ್ಷಿಸುವುದು ಜರೂರು ಅವಶ್ಯಕತೆ ಇದೆ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಂದ ಸ್ಮಾರಕಗಳ ಬಳಿಯಲ್ಲಿ ಹೆಚ್ಚು ಹೆಚ್ಚು ಸ್ವಚ್ಛತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಎಷ್ಟೋ ಸ್ಮಾರಕಗಳನ್ನು ಮರ-ಗಿಡ ಗಂಟೆಗಳಿಂದ ಹಾಳಾಗದಂತೆ ರಕ್ಷಿಸಬಹುದು ಎಂದು ತಿಳಿಸಿದರು

ಚಿತ್ರದುರ್ಗದ ಮದಕರಿ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಗೋಪಾಲಸ್ವಾಮಿ ನಾಯಕ್‍ಮಾತನಾಡುತ್ತ ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ ಸ್ಮಾರಕ ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದರೊಂದಿಗೆ ಆಸಕ್ತಿ ವಹಿಸಬೇಕು  ತಮ್ಮ ತಮ್ಮ ಊರುಗಳಲ್ಲಿರುವ ಶಿಲಾಶಾಸನ ಕೋಟೆ ಸ್ಮಾರಕಗಳನ್ನುಸಂರಕ್ಷಿಸಲು ಪುರಾತತ್ವ ಇಲಾಖೆಯ ಗಮನಕ್ಕೆ ತರಬೇಕು ಎಂದರು.

ಕಾಲೇಜಿನ ಎನ್‍ಎಸ್‍ಎಸ್ ಘಟಕ ಅಧಿಕಾರಿಗಳಾದ ಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಸ್ಮಾರಕಗಳ ಬಳಿಯಲ್ಲಿ ಎನ್‍ಎಸ್‍ಎಸ್‍ವತಿಯಿಂದ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.

 

ಮಾರ್ಚ್ 22 ರಂದು ಮಾಸಿಕ ಗಮಕ ವಾಚನ-ವ್ಯಾಖ್ಯಾನ ಸಂಭ್ರಮ

ಚಿತ್ರದುರ್ಗ, ಮಾ,19 : ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ನಡೆಸುತ್ತಿರುವ ಮಾಸಿಕ ಗಮಕ ವಾಚನ-ವ್ಯಾಖ್ಯಾನ ಸಂಭ್ರಮದ 20ನೇ ಕಾರ್ಯಕ್ರಮವು ಇದೇ  ತಿಂಗಳ 22/3/2025, ಶನಿವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ‘ಕುಮಾರ ವ್ಯಾಸ ಭಾರತದ ಉದ್ಯೋಗ ಪರ್ವದ ವಿಶ್ವರೂಪ ದರ್ಶನ ಕಥಾ ಪ್ರಸಂಗ’ವನ್ನು ಅಧ್ಯಾಪಕರಾದ ಬೆಂಗಳೂರಿನ ಶ್ರೀಮತಿ ಸುಮಾ ಜಯಸಿಂಹ ವಾಚನ ಮಾಡಲಿದ್ದು, ಬೆಂಗಳೂರಿನ ಇಸ್ರೋದ ವಿಜ್ಞಾನಿಗಳಾದ ಜಯಸಿಂಹ ಇವರು ವ್ಯಾಖ್ಯಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾ ಪೋಷಕರಾದ ಶ್ರೀಕಾಂತ್ ಭಾಗವಹಿಸಲಿದ್ದಾರೆ.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್. ಗಣಪತಿ ದೇವಾಲಯ ಸಮಿತಿಯವರು ಕೋರಿದ್ದಾರೆ.

 

 

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...