ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ನಗರ ಉಪ ವಿಭಾಗ ಘಟಕ-2 ರ ವ್ಯಾಪ್ತಿಯಲ್ಲಿ ಬರುವ ಎಫ್-8 ವಿದ್ಯಾನಗರ ಮತ್ತು ಎಫ್-15 ಮಿಲ್ ಏರಿಯಾ ಮಾರ್ಗದ ಜೆ.ಎಮ್.ಐ.ಟಿ ವೃತ್ತದ ಮುಂಭಾಗದಲ್ಲಿ ಕಾಮಗಾರಿಗೆ ಅಡ್ಡಲಾಗಿರುವ 11ಕೆವಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಗರಸಭೆ ಚಿತ್ರದುರ್ಗ ಇವರು ನಿರ್ವಹಿಸುತ್ತಿದ್ದು, ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ (ಫೆಬ್ರವರಿ 23 ಮತ್ತು 24 ರಂದು) ಬೆಳಗ್ಗೆ 10.00 ರಿಂದ ಸಂಜೆ 05.00 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಲು ಕೋರಲಾಗಿದೆ. ಈ ಕೆಳಗೆ ತಿಳಿಸಿರುವ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಫೆಬ್ರವರಿ 23 ರಂದು ಬೆಳಗ್ಗೆ 10.00 ರಿಂದ ಸಂಜೆ 05.00ರ ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು:-
ವಿದ್ಯಾನಗರ, ತರಳಬಾಳು ನಗರ, ಜೆ.ಎಮ್.ಐ.ಟಿ ಕ್ಯಾಂಪಸ್ ಸುತ್ತ ಮುತ್ತ, ಕಾವಾಡಿಗರಹಟ್ಟಿ, ಎಮ್.ಕೆ.ಹಟ್ಟಿ, ಗಾರೇಹಟ್ಟಿ, ಎಮ್.ಆರ್. ಎಸ್.ಆರ್.ಲೇಔಟ್, ಮರಳುಸಿದ್ದೇಶ್ವರ ಬಡಾವಣೆ, ಹನುಮಂತ ನಗರ, ಇಂಡಸ್ಟ್ರಿಯಲ್ ಏರಿಯಾ, ಎಮ್.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳುಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್ಪೀರ್ ಲೇಔಟ್, ಆಶ್ರಯ ಬಡಾವಣೆ ಹಂತ-1 ಮತ್ತು ಹಂತ-2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ದವಳಗಿರಿ ಬಡಾವಣೆ 3ನೇಹಂತ, ವಿದ್ಯಾಶ್ರೀ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶ ವಿದ್ಯುತ್ ವ್ಯತ್ಯಯವಾಗಲಿದೆ.
ಫೆಬ್ರವರಿ 24 ರಂದು ಬೆಳಗ್ಗೆ 10.00 ರಿಂದ ಸಂಜೆ 06.00ರ ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು:- ಮುನ್ಸಿಪಲ್ ಕಾಲೋನಿ, ಭುವನೇಶ್ವರಿ ಸರ್ಕಲ್, ಕೆಳಗೋಟೆ, ಭೀಮಪ್ಪ ನಾಯಕರ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ. ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















