Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ : ಗೊಲ್ಲಹಳ್ಳಿ ಶಿವಪ್ರಸಾದ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 17 : ಮಣ್ಣಿನ ವಾಸನೆಯೊಂದಿಗೆ ಬದುಕುವ ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ಇಲ್ಲಿನ ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಇಲ್ಲಿ ಸೋಮವಾರ ನಡೆದ ಕಿಲಾರಿ ಕಲರವ ಉದ್ಗಾಟಿಸಿ ಮಾತನಾಡಿದರು.

ಗುಡುಗು, ಸಿಡಿಲು, ಮಳೆ, ಗಾಳಿ ಇದ್ಯಾವುದನ್ನು ಲೆಕ್ಕಿಸದೆ ಸಮಾಜ, ನೆಲ, ಸಮುದಾಯ ಪ್ರಕೃತಿಗಾಗಿ ಬದುಕುವ ಕಿಲಾರಿಗಳು ಬೆಳ್ಳಿ, ಬಂಗಾರ, ಕಂಚು
ಹಿತ್ತಾಳೆ ಯಾವುದಕ್ಕೂ ಆಸೆ ಪಡುವವರಲ್ಲ. ಪ್ರಕೃತಿಯೊಂದಿಗೆ ಬದುಕನ್ನು ಸಮರ್ಪಿಸಿಕೊಳ್ಳುವ ಕಿಲಾರಿಗಳನ್ನು ಒಳಗಣ್ಣಿನಿಂದ ನೋಡಬೇಕು. ಬಾಹ್ಯ ಸೌಂದರ್ಯಕ್ಕೆ ಆಕರ್ಷಿತರಾಗಿ ಮಾನವ ಹಾಳಾಗುತ್ತಿದ್ದಾನೆಂದು ವಿಷಾಧಿಸಿದರು.

ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನೆಲ್ಲಾ ಒಂದೊಂದು ಹೆಜ್ಜೆಯನ್ನಾಗಿಸಿಕೊಂಡು ನಡೆಯಬೇಕು. ಕಿಲಾರಿಗಳು ಕಾವ್ಯವನ್ನು ಸೃಷ್ಟಿಸಿಲ್ಲ. ಆದರೂ ಕವಿಗಳು. ಯುದ್ದ, ಆಕ್ರಮ, ರಕ್ತವನ್ನು ಬಯಸುತ್ತದೆ. ಬುದ್ದ ಶಾಂತಿಯನ್ನು ಪ್ರತಿಪಾದಿಸುತ್ತಾನೆ. ಹೆಣ್ಣು-ಗಂಡನ್ನು ಸಮಾನವಾಗಿ ನೋಡುವ ಕಣ್ಣುಗಳು ಬೇಕು. ಮಾತೊಂದು, ಮನಸ್ಸೊಂದು

ನಡೆಯೊಂದು, ನುಡಿಯೊಂದಿದ್ದಾಗ ಸಮ ಸಮಾಜ ಕಟ್ಟಲು ಆಗುವುದಿಲ್ಲ. ಮೊಬೈಲ್‍ನಿಂದ ಆತಂಕ. ಭಯ ಕಾಡುತ್ತಿದೆ. ಪರಂಪರೆಯ ಪಾದದ ಸ್ಪರ್ಶ ಮರೆತಿದ್ದೇವೆ. ಬೂಟಾಟಿಕೆ, ಆಡಂಭರ, ಅಟ್ಟಹಾಸವಿರುವ ಕಡೆ ವಾಸ್ತವವಿರುವುದಿಲ್ಲ. ಅಸಹನೆ, ಅಹಂಕಾರ, ಇರುವ ಕಡೆ ಸ್ನೇಹ ಸಂಬಂಧಕ್ಕೆ ಜಾಗವಿರುವುದಿಲ್ಲ. ಪ್ರೀತಿಗಿಂತ ದೊಡ್ಡ ಆಯುಧ ಜಗತ್ತಿನಲ್ಲಿ ಯಾವುದೂ ಇಲ್ಲ. ವಕ್ರವಾದ ಸಂಸ್ಕøತಿ, ಅಭಿವೃದ್ದಿಯ ವೇಗದಲ್ಲಿ ಸಂಬಂಧಗಳು ನಶಿಸುತ್ತಿವೆ ಎಂದರು.

ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ನಿರ್ಲಕ್ಷಿತ ಸಮುದಾಯಗಳ ಜ್ಞಾನ, ಪರಂಪರೆಯನ್ನು ಶೋಧಿಸುವ ಸಂಶೋಧನೆಗಳು ನಡೆಯಬೇಕು. ನೆಲದ ಅರಿವು, ಪ್ರಜ್ಞೆ, ಬೆಳಕು, ತತ್ವಪದಕಾರರ ನಾಥ, ಸಿದ್ದ, ಅವಧೂತರ ಪರಂಪರೆಯನ್ನು ಒಳಗೊಂಡಂತೆ ಕಿಲಾರಿಗಳ ಚರಿತ್ರೆಯನ್ನು ಶೈಕ್ಷಣಿಕ ಶಿಸ್ತಿನೊಳಗೆ ದಾಖಲಿಸುವ ಪ್ರಯತ್ನವಾಗಬೇಕೆಂದರು.

ಬಯಲ ಬದುಕನ್ನು ಕಟ್ಟಿಕೊಂಡ ಬಡುಕಟ್ಟು ಸಮುದಾಯದ ಚರಿತ್ರೆ ಮತ್ತು ಜ್ಞಾನವನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಗೊಳಿಸುವ ಅನಿವಾರ್ಯತೆಯಲ್ಲಿದ್ದೇವೆಂದು ಹೇಳಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ತಾರಿಣಿ ಶುಭದಾಯಿನಿ, ಸಮಾಜಶಾಸ್ತ್ರ ವಿಭಾಗದ ಪ್ರೊ.ಯಶೋಧಮ್ಮ, ಸಾಂಸ್ಕøತಿಕ ಕಾರ್ಯದರ್ಶಿ ಕೆ.ಮಂಜುನಾಥ್ ವೇದಿಕೆಯಲ್ಲಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...