ದೇಹದಲ್ಲಿ ಕಜ್ಜಿ ಸಮಸ್ಯೆ ಇದ್ದರೆ ಕಣಗೆಲೆ ಹೂ ಪರಿಹಾರ ಕೊಡುತ್ತೆ

suddionenews
1 Min Read

ಕಣಗಲೆ ಹೂಗಳಿಗೆ ಅದರದೆ ಆದ ಬಹಳ ದೊಡ್ಡ ಮಹತ್ವವಿದೆ. ದೇವರಿಗೆ ಆರತಿ ಮಾಡುವಾಗ ಈ ಹೂಗಳಿಂದಾನೇ ಅಲಂಕಾರ ಮಾಡಲಾಗುತ್ತದೆ. ಅಂದ್ರೆ ದೇವರಿಗೆ ಅತಿ ಪ್ರಿಯವಾದ ಹೂ ಇದಾಗಿದೆ. ದೇವರಿಗೆ ಮಾತ್ರವಲ್ಲ ಹಲವು ಚರ್ಮದ ಕಾಯಿಲೆಗಳಿಗೂ ಇದು ರಾಮ ಬಾಣವಿದ್ದಂತೆಯೇ ಸರಿ. ಆದರೆ ಅದನ್ನ ಹೆಚ್ಚು ಜನ ಬಳಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈಗಲೂ ಈ ಕಣಗೆಲೆಯ ಹೂವನ್ನು ಗಾಯವಾದ ಜಾಗಕಗಕೆ ಅರೆದು ಮದ್ದು ಮಾಡಿ ಕಟ್ಟುತ್ತಾರೆ.

* ಈ ಹೂಗಳು ಚರ್ಮದ ಹಲವು ಕಾಯಿಲೆಗಳಿಗೆ ಮದ್ದು ಇದ್ದಂತೆ. ಅದರಲ್ಲೂ ಕಜ್ಜಿ ಸಮಸದಯೆ ಇರುವವರು ಆಸ್ಪತ್ರೆಗೆ ಹೋಗಿ, ಮಾತ್ರೆ, ಔಷಧಿ ಅಂತ ಬೀಳುವ ಬದಲು, ಒಮ್ಮೆ ಈ ಕಣಗೆಲೆಯನ್ನು ಬಳಸಿ ನೋಡಿ.

* ಕಜ್ಜಿಯಿಂದ ಬಳಲುವವರು ಎಲೆಯ ರಸಕ್ಕೆ ಸಾಸುವೆ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ತೈಲವನ್ನು ಮೇಲೆ ಹಚ್ಚುವುದಕ್ಕೆ ಉಪಯೋಗಿಸಬೇಕು.

* ಕಣಗಿಲೆಯ ಎಲೆಯನ್ನು ಬಾಣಲೆಯಲ್ಲಿ ಹಾಕಿ ಹುರಿದು ಕರಕು ಮಾಡಿ, ಅದನ್ನು ಒಂದು ಅಗಲವಾದ ತಟ್ಟೆಗೆ ಹಾಕಿ ಚೆನ್ನಾಗಿ ಉಜ್ಜಿ ಮುಲಾಮು ಮಾಡಿ ನರೋಲಿ ಇರುವ ಜಾಗದಲ್ಲಿ ಪ್ರತಿದಿನ ಉಜ್ಜಿಕೊಳ್ಳುವುದರಿಂದ ನರೋಲಿ ಮಾಯವಾಗುತ್ತದೆ.

* ಉಗುರುಸುತ್ತು ಉಂಟಾದಾಗ ಕಣಗಿಲೆ ಎಲೆ, ಎಣ್ಣೆ ಮತ್ತು ವೀಳ್ಯಕ್ಕೆ ಹಾಕುವ ಸುಣ್ಣ ಇವುಗಳನ್ನು ಸೇರಿಸಿ ಅರೆದು ಕಟ್ಟುವುದರಿಂದ ಶೀಘ್ರ ಗುಣಕಾರಿಯಾಗಿದೆ.

* ಗ್ರಾಮೀಣ ಭಾಗದಲ್ಲಿ ಕಣಗೆಲೆಯ ಮರ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣಿಸುತ್ತಿದೆ. ಇದರ ಕೊಂಬೆಗಳು ಬಹಳ ಸ್ಮೂಥ್ ಆಗಿ ಇರುತ್ತವೆ. ಹೂಗಳಂತು ಹೆಚ್ಚಿನದಾಗಿ ಬಿಡುತ್ತವೆ. ಯಾರಿಗಾದರೂ ಕಜ್ಜಿ ಸಮಸ್ಯೆ ಕಂಡು ಬಂದರೆ ಒಮ್ಮೆ ಬಳಸಿ ನೋಡಿ.

Share This Article
Leave a Comment

Leave a Reply

Your email address will not be published. Required fields are marked *