ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟ : ಪಾರ್ಶ್ವ ನಾಥ ಶಾಲೆಯ ಶ್ರೀಹರಿಗೆ ಸಚಿವರಿಂದ ಸನ್ಮಾನ

suddionenews
2 Min Read

ಚಿತ್ರದುರ್ಗ ಜ. 31 : ಚಿತ್ರದುರ್ಗ ನಗರದ ಪಾರ್ಶ್ವ ನಾಥ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಶ್ರೀಹರಿ 24-2025ನೇ ಸಾಲಿನಲ್ಲಿ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ದೆಯಲ್ಲಿ 10.69 ಮೀ ದೂರವನ್ನು ಎಸೆಯುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗೆ ಜ. 26 ರಂದು ಚಿತ್ರದುರ್ಗದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಫಲಕವನ್ನು ನೀಡಿ ಸನ್ಮಾನಿಸಿದರು, ಇದರ ಅಂಗವಾಗಿ ಗುರುವಾರ ಶಾಲಾ ಆವರಣದಲ್ಲಿ ಶಾಲಾ ಆಡಳಿತ ಮಂಡಳಿಯವತಿಯಿಂದ ಶಾಲಾ ಶಿಕ್ಷಕರು ಶ್ರೀಹರಿಯನ್ನು ಸನ್ಮಾನಿಸಿದರು.

 

ಶ್ರೀಹರಿಯು 8 ನೇ ತರಗತಿಯಲ್ಲಿದ್ದಾಗ ಡ್ರೀಮ್ಸ್ ಸ್ಪೋಟ್ಟ್ ಅಕಾಡೆಮಿಯ ಶಿವಕುಮಾರ್ ಬಳಿಯಲ್ಲಿ ತರಬೇತಿಯನ್ನು ಪಡೆಯುವುದರ ಮೂಲಕ 22-2023ನೇ ಸಾಲಿನಲ್ಲಿ ಕೊರಟಿಗೆರೆಯಲ್ಲಿ ನಡೆದ ವಿಶೇಷ ಚೇತನರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, 23-24ನೇ ಸಾಲಿನಲ್ಲಿ ಮಧುಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಚಿಶೇಷ ಚೇತನರ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಹಾಗೂ 100 ಮೀ ಓಟದಲ್ಲಿ ತೃತೀಯ ಸ್ಥಾನ, 24-2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ 17 ವರ್ಷದ ವಯೋಮಿತಿಯ ರಾಜ್ಯ ಮಟ್ಟದ ವಿಶೇಷ ವೇತನರ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ 10.69 ಮೀ ದೂರವನ್ನು ಎಸೆಯುವುದರ ಮೂಲಕ ಪ್ರಥಮ ಸ್ಥಾನವನ್ನು ಪಡೆದರೆ 100 ಮೀ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ಧಾನೆ. ಮೂರು ಬಾರಿ ರಾಜ್ಯ ಮಟ್ಟದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಲ್ಲದೆ ದಸರಾ ಕ್ರೀಡೆಯಲ್ಲಿಯೂ ಸಹಾ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

2024ರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 13ನೇ ನ್ಯಾಷನಲ್ ಜೂನಿಯರ್ ಮತ್ತು ಸಬ್ ಜೂನಿಯರ್ ಪ್ಯಾರ ಅಥ್ಲೇಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ದ್ವೀತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಎಲ್ಲಾ ವಿಶೇಷವನ್ನು ಗಮನಿಸಿದ ಜಿಲ್ಲಾಡಳಿತ ಜ.26ರ ಗಣರಾಜ್ಯೋತ್ಸವದಲ್ಲಿ ಸಚಿವ ಸುಧಾಕರ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ನಗರದ ಪಾಶ್ರ್ವನಾಥ್ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈತನ ಸಾಧನೆಯನ್ನು ಕಂಡು ಶಾಲಾ ಆಡಳಿತ ಮಂಡಳಿಯ ಪರವಾಗಿ ಹರ್ತಿ ಇಂದು ಶಾಲಾ ಆವರಣದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಶ್ರೀಮತಿ ನಾಜಿಮಾ ಸ್ವಲೇಹಾ, ಶ್ರೀಮತಿ ವಿಜಯಲಕ್ಷ್ಮೀ, ಚಿತ್ರ ಕಲಾವಿದರಾದ ನಾಗರಾಜ್ ಬೇದ್ರೇ, ದೈಹಿಕ ಶಿಕ್ಷಕರಾದ ಉಮಾದೇವಿ, ಪ್ರತಾಪ್, ಆಯೇಷಾ ಬೇಗಂ, ರಶ್ಮಿ ಡಿ. ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *