Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಕೃತಿಯ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

---Advertisement---

 

ಚಿತ್ರದುರ್ಗ, ಜನವರಿ. 26 : ಪ್ರಕೃತಿಯ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 76ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮೂರು ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಶುಶ್ರಾವ್ಯವಾಗಿ ಹಾಡಿದರು.
5ನೇ ತರಗತಿ ವಿದ್ಯಾರ್ಥಿನಿಯಾದ ಶಿಫಾನ ಖಾನಂ ಪಥಸಂಚಲನದ ತಂಡಗಳ ಪರಿಚಯವನ್ನು ಶಾಲೆಯ ಅಧ್ಯಕ್ಷರಿಗೆ ಪರಿಚಯ ಮಾಡಿಕೊಟ್ಟರು.
ಅಧ್ಯಕ್ಷರಿಂದ ಹಾಗೂ ಎಲ್ಲಾ ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ಮಾಡಲಾಯಿತು.

ಪ್ರಸ್ತಾವಿಕ ನುಡಿಯನ್ನು ಸಹಶಿಕ್ಷಕಿಯಾದ ಕುಮಾರಿ ಇಂದುಶ್ರೀ ಅವರು ಅಚ್ಚುಕಟ್ಟಾಗಿ ಮಾಡಿದರು.
ವೆಂಕಟೇಶ್ ಸಮಾಜ ಸೇವಕರು ಇವರು ಕಾರ್ಯಕ್ರಮದ ಕುರಿತು ಹಿತ ನುಡಿಗಳನ್ನಾಡಿದರು.
ಹಾಗೂ ನಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ವೀಣಾ ವಾದನ ನಿರೂಪಣೆ ಹಾಗೂ ಗಾಂಧಾರಿ ವಿದ್ಯೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಇವರು ಬೆಳ್ಳಿ ನಾಣ್ಯವನ್ನು ನೀಡಿದರು.

ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀಯುತ ದ್ವಾರಕೀಶ್ ವೀಣ ವಾದಕರು ಇವರು ಡಾಕ್ಟರ್ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳುತ್ತಾ ಮಕ್ಕಳ ಭವಿಷ್ಯದ ಕುರಿತು ಅವರ ಏಳಿಗೆಯ ಬಗ್ಗೆ ತಿಳಿಸಿ ಬರುವ ಮುಂದಿನ ವರ್ಷದಲ್ಲಿ ವೀಣಾ ವಾದನವನ್ನು ಹೇಳಿಕೊಡುವುದಾಗಿ ತಿಳಿಸಿದರು
ಐದನೇ ತರಗತಿ ವಿದ್ಯಾರ್ಥಿನಿ ಕೃತಿಕಾ ಇವರು ಒಂದು ಪುಟ್ಟ ಭಾಷಣವನ್ನು ಮಾಡಿದರು.

ಅಧ್ಯಕ್ಷರಾದ ರೋಟೇರಿಯನ್ ಪಿ ಹೆಚ್ ಎಫ್ ಎಂ ಕೆ ರವೀಂದ್ರರವರು ಅವರು ಕಾರ್ಯಕ್ರಮದ ಕುರಿತು ಮಾತನಾಡಿ ಮಕ್ಕಳಿಗೆ ಉತ್ತಮ ಅಂಕ ಗಳಿಸಿದವರಿಗೆ ಬೆಳ್ಳಿ ಪದಕಗಳನ್ನು ನೀಡುತ್ತೇವೆ ಎಂದು ಪ್ರೋತ್ಸಾಹ ನೀಡಿದರು.
ವಂದನಾರ್ಪಣೆಯನ್ನು ನಮ್ಮ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಕಾರ್ತಿಕ್ ಎಂ ರವರು ಮಾಡಿದರು.

ಹಾಗೂ ನಮ್ಮ ಶಾಲೆಯ ಎಲ್ಲಾ ಟ್ರಸ್ಟಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...