2025-26ರ ಕೇಂದ್ರ ಬಜೆಟ್ ಜನವರಿ 31ಕ್ಕೆ ನಿಗದಿಯಾಗಿದೆ. ಜನ ಸಾಮಾನ್ಯರಿಗೆ ಸಾಮಾನ್ಯವಾಗಿಯೇ ಬಹಳ ನಿರೀಕ್ಷೆ ಇದೆ. ಆ ನಿರೀಕ್ಷೆಗಳು ಬಜೆಟ್ ಸಿದ್ಧ ಮಾಡುವವರ ಗಮನಕ್ಕೆ ಬಾರದೆ ಇರಬಹುದು. ಆದರೆ ಈ ಬಾರಿ ನಿಮ್ಮ ಸಲಹೆ ಸೂಚನೆಗಳನ್ನು ನೀಡುವುದಕ್ಕೂ ಅವಕಾಶ ನೀಡಲಾಗಿದೆ. ನೀವೂ ನಿರೀಕ್ಚಿಸಿದ ಬಜೆಟ್ ನಲ್ಲಿ ಏನೆಲ್ಲಾ ಇರಬೇಕು..? ಯಾವ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಬೇಕು ಅದೆಲ್ಲವನ್ನು ನೀವೇ ಹೇಳಬಹುದು. ಅದಕ್ಕೆ ಬೇಕಾದ ಮಾಹಿತಿ ಇಲ್ಲಿದೆ ನೋಡಿ.
ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ನಿಮಗೂ ಬಜೆಟ್ ವಿಚಾರಕ್ಕೆ ಸಲಹೆ ಸೂಚನೆಗಳನ್ನು ಕೊಡಬೇಕು ಎನಿಸಿದರೆ, mygov ಎಂಬ ಪೇಜ್ ಗೆ ಹೋಗಿ ನಿಮ್ಮ ಸಲಹೆ ಸೂಚನೆಗಳನ್ನು ಅಲ್ಲಿ ಹಾಕಬಹುದು. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜನರ ಸಹಭಾಗಿತ್ವದ ಆಡಳಿತ ನೀಡುವುದಕ್ಕೆ mygov ಪೇಜ್ ಆರಂಭಿಸಿತ್ತು. ಅದೇ ಪೇಜ್ ನಲ್ಲಿ ಇದೀಗ ಬಜೆಟ್ ಗೆ ಸಂಬಂಧಿಸಿದ ಸಲಹೆಗಳನ್ನು ನೀಡಬಹುದಾಗಿದೆ.
ಹಣಕಾಸು ಸಚಿವಾಲಯವೂ ಯೋಗ್ಯವಾದ ಬಜೆಟ್ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಮುಂದಾಗಿದೆ. ಈ ಸಲಹೆಗಳು ಜನರ ಅಗತ್ಯತೆಗಳು, ಆಕಾಂಕ್ಷೆಗಳ ಪ್ರತಿಬಿಂಬಿಸುವಂತಿರಬೇಕು. ವಿದ್ಯಾರ್ಥಿಗಳು, ಗೃಹಿಣಿಯರು, ವೃತ್ತಿಪರರು ಯಾರೇ ಆಗಲಿ ಇದೊಂದು ಅಗತ್ಯವಿದೆ ಎನಿಸಿದರೆ mygov ಪೇಜ್ ಗೆ ಹೋಗಿ ಅಲ್ಲಿ ತಿಳಿಸಬಹುದು. ವ್ಯಾಲಿಡ್ ಎನಿಸಿದರೆ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಆ ಸಲಹೆಯನ್ನು ಕನ್ಸಿಡರ್ ಮಾಡುತ್ತದೆ. ನೀವು ಕೊಡುವ ಸಲಹೆಗಳು ಜನಪರ ಆಡಳಿತಕ್ಕೂ ಅನುಕೂಲವಾಗಲಿದೆ.