Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಸ್ತಿ ನೋಂದಣಿ ಈಗ ಸಂಪೂರ್ಣ ಡಿಜಿಟಲ್: 2027ರ ಜನವರಿಯಿಂದ ರಾಜ್ಯಾದ್ಯಂತ ಕಾವೇರಿ 2.0 ಕಾಗದರಹಿತ ವ್ಯವಸ್ಥೆ ಜಾರಿ

'Kaveri 2.0' paperless system to be implemented statewide from January 2027
---Advertisement---

ಬೆಂಗಳೂರು: ರಾಜ್ಯದಲ್ಲಿ ಆಸ್ತಿ ನೋಂದಣಿಗಾಗಿ ಇನ್ನು ಮುಂದೆ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಹಾಗೂ ಭೌತಿಕ ದಾಖಲೆಗಳನ್ನು ಹಿಡಿದು ಕಾಯುವ ಅಗತ್ಯವಿರುವುದಿಲ್ಲ. ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣ ಸರಳ, ಸುಗಮ ಹಾಗೂ ಪಾರದರ್ಶಕಗೊಳಿಸಲು ರಾಜ್ಯ ಸರ್ಕಾರವು ‘ಕಾವೇರಿ 2.0’ ಮೂಲಕ ಕಾಗದರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಈ ವ್ಯವಸ್ಥೆಯಡಿ ಆಸ್ತಿ ನೋಂದಣಿಗೆ ಅಗತ್ಯವಿರುವ ದಾಖಲೆಗಳನ್ನು ಕಾವೇರಿ 2.0 ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿಯನ್ನು ಸಹ ಆನ್‌ಲೈನ್ ಮೂಲಕವೇ ಮಾಡಬಹುದು.   ಆಧಾರ್ ಒಟಿಪಿ (OTP) ಆಧಾರಿತ ಇ-ಸೈನ್ ಮೂಲಕ ಡಿಜಿಟಲ್ ಸಹಿ ಮಾಡುವ ಅತ್ಯಾಧುನಿಕ ಸೌಲಭ್ಯವನ್ನು ಕಲ್ಪಿಸಲಾಗಿದೆ. ನೋಂದಣಿ ಪೂರ್ಣಗೊಂಡ ಬಳಿಕ ಸಾರ್ವಜನಿಕರು ತಮ್ಮ ದಾಖಲೆಗಳ ಡಿಜಿಟಲ್ ಪ್ರತಿಯನ್ನು ಸುಲಭವಾಗಿ ಪಡೆಯಬಹುದು.

ರಾಜ್ಯಾದ್ಯಂತ ವಿಸ್ತರಣೆ: ಪ್ರಸ್ತುತ ಚಾಮರಾಜನಗರದಲ್ಲಿ ಮಾತ್ರ ಜಾರಿಯಲ್ಲಿರುವ ಈ ಕಾಗದರಹಿತ ವ್ಯವಸ್ಥೆಯನ್ನು, ಮುಂಬರುವ 2027ರ ಜನವರಿ 10ರಿಂದ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ವಿಸ್ತರಿಸಲಾಗುವುದು.

256 ಕಚೇರಿಗಳಲ್ಲಿ ಅನುಷ್ಠಾನ: ಈ ಯೋಜನೆಯು ರಾಜ್ಯದ ಒಟ್ಟು 256 ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಡಿಜಿಟಲ್ ಕರ್ನಾಟಕದತ್ತ ಇದೊಂದು ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಆಸ್ತಿ ಖರೀದಿದಾರರಿಗೆ ಹಾಗೂ ಸಾರ್ವಜನಿಕರಿಗೆ ಈ ವ್ಯವಸ್ಥೆ ಬಹಳಷ್ಟು ಅನುಕೂಲವನ್ನು ಮಾಡಿಕೊಡಲಿದೆ.

Join WhatsApp

Join Now

Join Telegram

Join Now