Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರಗಳ ನಿರಂತರ ನಿರ್ಲಕ್ಷ್ಯ : ಅಲೆಮಾರಿ ಸಮುದಾಯಕ್ಕೆ ಅನ್ಯಾಯ : ಪ್ರತಾಪ್ ಕುಮಾರ್ ಜೋಗಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಜ.16 : ರಾಜಕೀಯ ಪಕ್ಷಗಳು ನಮ್ಮ  ಸಮುದಾಯವನ್ನು ಪರಿಣಿಸಿಲ್ಲ, ಸಣ್ಣ ಸಮುದಾಯವಾದ ನಮ್ಮನ್ನು ನಿರ್ಲಕ್ಷ್ಯ ಮಾಡಿದೆ. ಇದರಿಂದಾಗಿ ನಾವು ಇಂದಿಗೂ ಎಲ್ಲರಿಂದಲೂ ಸಹಾ ನಿರ್ಲಕ್ಷಕ್ಕೆ ಒಳಗಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕುಮಾರ್ ಒ.ಜೋಗಿ ದೂರಿದ್ಧಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಹಾಗೂ ನಮ್ಮನ್ನಾಳುವ ಸರ್ಕಾರಗಳು ನಮ್ಮ ಸಮುದಾಯಕ್ಕೆ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ. ನಮ್ಮ ಸಮುದಾಯದವರು ಇನ್ನೂ ಸಹಾ ಚಿಂದಿಯನ್ನು ಆಯುವ ಕೆಲಸವನ್ನು ಮಾಡುತ್ತಲೇ ಶಿಕ್ಷಣ ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುತ್ತಾ ಜೀವನ ನಡೆಸುತ್ತಿದ್ದಾರೆ.

ಸರ್ಕಾರಗಳಾಗಲಿ, ರಾಜಕೀಯ ಪಕ್ಷಗಳಾಗಲಿ ನಮ್ಮನ್ನು ಸರಿಯಾದ ರೀತಿಯಲ್ಲಿ ಪರಿಗಣಿಸಿಲ್ಲ, ಸಣ್ಣ ಸಮುದಾಯ ಎಂದು ನಿರ್ಲಕ್ಷ್ಯ ಮಾಡುತ್ತಿವೆ. ನಮ್ಮ ಜನಾಂಗದವರಿಗೆ ನಿಲ್ಲಲು ಒಂದು ನೆಲಯಲ್ಲಿ ಇದುವರೆವಿಗೂ ನೀಡಲ್ಲ, ಇದರಿಂದಾಗಿ ನಮ್ಮ ಸಮುದಾಯಕ್ಕೆ ಶಿಕ್ಷಣ ಎನ್ನವುದು ಮರಿಚಿಕೆಯಾಗುತ್ತಿದೆ ಎಂದು ನುಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿಯಲ್ಲಿ 46 ಜಾತಿಗಳು ಬರಲಿದ್ದು, ಇದರಲ್ಲಿ ಬಹಳಷ್ಟು ಜನಾಂಗದವರು ನಮ್ಮ ಕುಲದ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ, ಜನಾಂಗದವರಿಗೆ ಮೂಲಭೂತ ಸೌಕರ್ಯವಾದ ವಸತಿ, ಶಿಕ್ಷಣ, ಸಮುದಾಯ ಭವನ ನಿರ್ಮಾಣ, ರುದ್ರಭೂಮಿ, ಸಿಕ್ಕಿಲ್ಲ, ಒಂದು ಜಾಗದಲ್ಲಿ 10 ವರ್ಷ ಟೆಂಟ್ ಹಾಕಿ ವಾಸವಾಗಿದ್ದವರಿಗೆ ಆ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದ್ದಲ್ಲದೆ ನಮಗೆ ಆಲೆಮಾರಿ ಎಂದು ಜಾತಿ ಪ್ರಮಾಣ ಪತ್ರವನ್ನು ನೀಡುವಲ್ಲಿಯೂ ಸಹಾ ತಹಶೀಲ್ದಾರ್ ರವರು ಕಡೆಗಣಿಸುತ್ತಿದ್ದಾರೆ.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸಹಾ ನಮ್ಮನ್ನು ನಿರ್ಲಕ್ಷ ಮಾಡಿವೆ. ಸರ್ಕಾರ ಬೇರೆ ಎಲ್ಲಾ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಅನುದಾನವನ್ನುನೀದೆ ಆದರೆ ನಮಗೆ ನಿಗಮವನ್ನು ಸ್ಥಾಪನೆ ಮಾಡಲಾಗಿದೆ ಆದರೆ ಅದಕ್ಕೆ ಅಗತ್ಯವಾಗಿ ಬೇಕಾದ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿಲ್ಲ ಅನುದಾನವನ್ನು ಸಹಾ ನೀಡಲ್ಲ ಎಂದು ಸಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು ರಾಜ್ಯ ಮುಖ್ಯಮಂತ್ರಿಗಳು ಸಹಾ ನಮ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದೆ ನಮ್ಮ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಮುಂದಾಗಿಲ್ಲ ನಮ್ಮ ಸಮುದಾಯ ಸಮಾವೇಶಕ್ಕೆ ಹಿಂದಿನ ಹಾಗೂ ಇಂದಿನ ಮುಖ್ಯಮಂತ್ರಿಗಳನ್ನು ಆಹ್ವಾನ ಮಾಡಿದ್ದರು ಸಹಾ ಬಂದಿಲ್ಲ ಎಂದು ನುಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಕಾಂತ ಯಾದವ್ ಮಾತನಾಡಿ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಅಲೆಮಾರಿ ಜನಾಂಗದವರಿಗಾಇಯೇ ವಸತಿ ಶಾಲೆ ಇದೆ ಇದರಲ್ಲ ನಮ್ಮ ಸಮುದಾಯ ಮಕ್ಕಳು ಅಭ್ಯಾಸವನ್ನು ಮಾಡುತ್ತಿದ್ದಾರೆ ಇದೆ ಇಲ್ಲಿ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯ ಇಲ್ಲ, ಮಕ್ಕಳು ಮಲಗಲು ಹಾಸಿಗೆ ಇಲ್ಲ, ಸ್ನಾನ ಮಾಡಲು ಬಿಸಿಯಾದ ನೀರಿಲ್ಲ, ತಣ್ಣನೆ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ ನೆಲದ ಮೇಲೆ ಮಲಗುವ ಪರಿಸ್ಥಿತಿ ಇದೆ ಇದರ ಬಗ್ಗೆ ಯಾವ ಅಧಿಕಾರಿಯಾಗಲಿ, ಚುನಾಯಿತ ಪ್ರತಿನಿಧಿಗಳು ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಗೋಷ್ಟಿಯಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾದ ರಾಮು ಗೋಸಾಯಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿದಾಸರ್, ರಾಜು ಉಪಾಧ್ಯಕ್ಷರಾದ ಜ್ಯೋತಿ ದಾಸರ್, ಅಭೀಷೇಕ್, ಹೇಮಣ್ಣ, ಭಾಗವಹಿಸಿದ್ದರು.

 

 

 

 

 

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...