Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಲಕ್ಷ ಮತದಾರರಿದ್ದಾರೆ ? ಇಲ್ಲಿದೆ ಸಂಪೂರ್ಣ ಮಾಹಿತಿ…!

---Advertisement---

 

ದಾವಣಗೆರೆ,ಜನವರಿ.07 : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ವಾರು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ.ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಸೇರಿ 1693 ಮತಗಟ್ಟೆಗಳಿವೆ. ಈ ಎಲ್ಲಾ ಮತಗಟ್ಟೆಗಳಲ್ಲಿ 743888 ಪುರುಷ, 752813 ಮಹಿಳಾ ಹಾಗೂ 118 ಇತರೆ ಮತದಾರರು ಸೇರಿ 1496819 ಮತದಾರರಿದ್ದಾರೆ.
ಕ್ಷೇತ್ರವಾರು ಮತಗಟ್ಟೆ ವಿವರ:

ಜಗಳೂರು 263, ಹರಿಹರ 228, ದಾವಣಗೆರೆ  ಉತ್ತರ ಕ್ಷೇತ್ರ 245, ದಾವಣಗೆರೆ ದಕ್ಷಿಣ ಕ್ಷೇತ್ರ 217, ಮಾಯಕೊಂಡ ಕ್ಷೇತ್ರ 240, ಚನ್ನಗಿರಿ ಕ್ಷೇತ್ರ 255 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 245 ಮತಗಟ್ಟೆ ಸೇರಿ 1693 ಮತಗಟ್ಟೆಗಳಿವೆ.

ಮತದಾರರ ವಿವರ :
ಜಗಳೂರು :
ಪುರುಷ-100634, ಮಹಿಳೆ-99534, ಇತರೆ-10, ಒಟ್ಟು-200178, ಹರಿಹರ, ಪುರುಷ-, ಮಹಿಳೆ-106767, ಇತರೆ-17, ಒಟ್ಟು-212327,

ದಾವಣಗೆರೆ ಉತ್ತರ :
ಪುರುಷ-125964, ಮಹಿಳೆ-130652, ಇತರೆ-36, ಒಟ್ಟು-256652,

ದಾವಣಗೆರೆ ದಕ್ಷಿಣ, ಪುರುಷ-111266, ಮಹಿಳೆ-114395, ಇತರೆ-38, ಒಟ್ಟು-225699,

ಮಾಯಕೊಂಡ,  ಪುರುಷ-98063, ಮಹಿಳೆ-97794, ಇತರೆ-4, ಒಟ್ಟು-195861,

ಚನ್ನಗಿರಿ ಪುರುಷ-102105, ಮಹಿಳೆ-103051, ಇತರೆ-8, ಒಟ್ಟು-205164,

ಹೊನ್ನಾಳಿ ಪುರುಷ-100307, ಮಹಿಳೆ-100626, ಇತರೆ-5, ಒಟ್ಟು-200938 ಮತದಾರರಿದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ನು ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಆನ್‍ಲೈನ್ https://voterportal.eci.gov.in or  https://voters.eci.gov.in  ನಲ್ಲಿ ಪರಿಶೀಲಿಸಿಕೊಳ್ಳಬಹುದು. ಮತ್ತು  ಮತದಾರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ನಿರಂತರ ಪ್ರಕ್ರಿಯೆ ಯಾಗಿರುತ್ತದೆ. ವಿದೇಶಗಳಲ್ಲಿ ಉದ್ಯೋಗ, ಶಿಕ್ಷಣ ನಿಮಿತ್ತ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಮತದಾರರ ಪಟ್ಟಿಯಲ್ಲಿ  ಹೆಸರನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.  ನಮೂನೆ-6 ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಸಂಬಂಧಿಸಿದ ಮತದಾರರ ನೋಂದಾಧಿಕಾರಿಗಳಿಗೆ ಅಂಚೆ ಅಥವಾ ಆನ್‍ಲೈನ್ ಮೂಲಕ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment