ಹೊಸವರ್ಷದ ಸಂಭ್ರಮಕ್ಕೆ ಕೈಬಿಸಿ ಕರೆಯುತ್ತಿದೆ ಅರಮನೆ ಸ್ವೀಟ್ಸ್

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28 : 2025 ನೇ ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಜನರಿಗೆ ಅರಮನೆ ಸ್ವೀಟ್ಸ್ ಕೈಬೀಸಿ ಕರೆಯುತ್ತಿದೆ.

ಹೊಸವರ್ಷ ಎಂದಾಕ್ಷಣ ಕೇಕ್, ವಿವಿಧ ಬಗೆಯ ಸಿಹಿ ತಿನಿಸುಗಳು ಬೇಕೇ ಬೇಕು. ಅದರಲ್ಲೂ ಸ್ನೇಹಿತರು, ಕುಟುಂಬದ ಸದಸ್ಯರು ಒಂದೆಡೆ ಸೇರಿ ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಲು ಇನ್ನಿಲ್ಲದ ಸಂಭ್ರಮದಿಂದ ಕಾಯುತ್ತಿದ್ದಾರೆ.

ಅಂತಹದ್ದೊಂದು ಸಂಭ್ರಮವನ್ನು ಇಮ್ಮಡಿಗೊಳಿಸಲು ಚಿತ್ರದುರ್ಗ ಮತ್ತು ದಾವಣಗೆರೆಯ ಅರಮನೆ ಸ್ವೀಟ್ಸ್ ಕೈಬಿಸಿ ಕರೆಯುತ್ತಿದೆ. ಅರಮನೆ ಸ್ವೀಟ್ಸ್ ಅಂಗಡಿಗೆ ಹೋಗಿ ಕಣ್ಣಾಯಿಸಿದೆಲ್ಲೆಡೆ ಕೇಕ್, ಬಗೆ ಬಗೆಯ ಸಿಹಿತಿನಿಸುಗಳು ಬಾಯಲ್ಲಿ ನಿರೂರಿಸುತ್ತವೆ. ಅದರಲ್ಲೂ ಹೊಸವರ್ಷಕ್ಕಾಗಿಯೇ ಅರಮನೆ ಸ್ವೀಟ್ಸ್ ವಿವಿಧ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಮುಂಗಡವಾಗಿ ತಿಳಿಸದಿದ್ದರೂ ಮನಸ್ಸಿಗೆ ಒಪ್ಪುವ ಕೇಕ್, ಸಿಹಿತಿನಿಸುಗಳು ತಕ್ಷಣವೇ ದೊರೆಯಲಿದೆ.

ಹಲ್ವಾ, ಪೂತರೇಕುಲು, ರಾಗಿ ಲಡ್ಡು, ಮೋತಿಚೂರ್ ಲಡ್ಡು, ಮಹಾರಾಜ ಮೈಸೂರು ಪಾಕ್, ತುಪ್ಪದ ಮೈಸೂರು ಪಾಕ್ , ಕಾಜು ಕಟ್ಲಿ, ಬೆಳಗಾವಿ ಕುಂದಾ, ಕಾಜಾ ಜಗರಿ, ಬಾದುಷಾ, ಕಾಲಾ ಜಾಮೂನ್, ಕೋವಾ, ಕೋವಾ ಬಾದಾಮ್ ಭೋಗ, ಮ್ಯಾಂಗೋ ಬರ್ಫಿ, ಫ್ರೂಟ್ ಕೇಕ್, ಬೆಂಗಾಲಿ ಸ್ವೀಟ್ಸ್, ರಸಮಲೈ, ಮಿಕ್ಸಚರ್‌ನಲ್ಲಿ 15ಕ್ಕೂ ವಿಧಗಳು ಹಾಗೂ ಚಾಟ್ಸ್, ಪಾವ್ ಬಜ್ಜಿ, ಗಿಫ್ಟ್ ಪ್ಯಾಕ್, ಪ್ಯಾಕ್ಡ್ ಐಟಮ್ಸ್, ಐಸ್ ಕ್ರೀಮ್, ಬೇಕರಿ ಐಟಮ್ಸ್, ಅರಮನೆ ಸ್ಪೆಷಲ್ ಬರ್ಫಿ ಸೇರಿ 50ಕ್ಕೂ ಹೆಚ್ಚು ವಿವಿಧ ಬಗೆಯ ಸಿಹಿ ತಿನಿಸು ಅರಮನೆಯಲ್ಲಿ ಲಭ್ಯವಿರುವುದು ವಿಶೇಷ.

ಸಮಕಾಲೀನ ಅಭಿರುಚಿಗೆ ತಕ್ಕಂತೆ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶುದ್ಧ, ರುಚಿಕರ ಮತ್ತು ಉತ್ತಮ ಗುಣಮಟ್ಟದ ಸಿಹಿ ಉತ್ಪನ್ನಗಳನ್ನು ಜನತೆಗೆ ತಲುಪಿಸುವಲ್ಲಿ ಮುಂಚೂಣಿಯಲಿರುವ ಅರಮನೆ ಸ್ವೀಟ್ಸ್, ಗ್ರಾಹಕರಿಗೆ ಪ್ರಾಮಾಣಿಕ ಸೇವೆ, ಉತ್ತಮ ಗುಣಮಟ್ಟದ ಸಿಹಿತಿಂಡಿಗಳು ಮತ್ತು ಕರ್ನಾಟಕ ಸೇರಿ ವಿವಿಧ ಪ್ರದೇಶಗಳ ಸಿಹಿತಿಂಡಿಗಳು, ಸಾಂಪ್ರದಾಯಿಕ ಶೈಲಿಯಲ್ಲಿ ಅದ್ಭುತವಾದ ರುಚಿಯನ್ನು ನೀಡುತ್ತಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿಯೇ ಚಿತ್ರದುರ್ಗ-ದಾವಣಗೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ.
ಒಟ್ಟಿನಲ್ಲಿ 2025 ಹೊಸವರ್ಷ ಹೊಸ್ತಿಲಿನಲ್ಲಿ ನಿಂತಿರುವ ಸಮೂಹ ಸಂಭ್ರಮ ಪಡಲು ಅರಮನೆ ಸ್ವೀಟ್ಸ್ ಸಿಂಗಾರಗೊಂಡಿದ್ದು, ಕೈಬಿಸಿ ಕರೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!