Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಜನತೆಗೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ : ಮಹಮ್ಮದ್ ಹ್ಯಾರೀಸ್ ನಲಪಾಡ್

Facebook
Twitter
Telegram
WhatsApp

ಚಿತ್ರದುರ್ಗ, (ಮಾ.08) :  ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಮಯದಲ್ಲಿ ಹಲವಾರು ಆಶ್ವಾಸನೆಯನ್ನು ನೀಡಿತು ಆದರೆ ಅದರಲ್ಲಿ ಒಂದು ಸಹಾ ಈಡೇರಿಲ್ಲ, ಸಂವಿಧಾನವನ್ನು ಒಪ್ಪಿಕೊಂಡು ಬಂದವರು ಈಗ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಹಮ್ಮದ್ ಹ್ಯಾರೀಸ್ ನಲಪಾಡ್ ತಿಳಿಸಿದರು.

ನಗರದ ಯುವ ಕಾಂಗ್ರೆಸ್ ಸಮಿತಿಯವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವಕ್ರಾಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಜನತೆಗೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ, ಪ್ರತಿಯೊಬ್ಬರ ಕೌಂಟಿಗೆ 15 ಲಕ್ಷ ರೂ, ಕಪ್ಪು ಹಣ ಇಟ್ಟವರ ಹೆಸರನ್ನು ಬಯಲಿಗೆ ತರಲಾಗುವುದೆಂದು ಹೇಳಿ ಆಧಿಕಾರ ಹಿಡಿದ ಬಿಜೆಪಿ ಇಂದುವರೆವಿಗೂ ಒಂದು ಕೆಲಸವನ್ನು ಸಹಾ ಮಾಡಿಲ್ಲ.

ಯುವಜನತೆಗೆ ಉದ್ಯೋಗವನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಪದವಿಯನ್ನು ಹಿಡಿದು ಹೂರ ಬಂದ ಯುವಜನತೆ ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಅಲ್ಲದೆ ಯಾವೊಬ್ಬ ಅಕೌಂಟಿಗೂ ಸಹಾ ಹಣ ಬಂದಿಲ್ಲ ಕೆಲಸ ಕೇಳಿದರೆ ಪಕೋಡ ಮಾರಿ ಎಂದು ಪ್ರಧಾನ ಮಂತ್ರಿಗಳು ಹೇಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಜನಪರವಾದ ಕೆಲಸವನ್ನು ಮಾಡುತ್ತಾ, ಜನತೆಯ ಆರ್ಶಿವಾದವನ್ನು ಬೇಡುತ್ತಿದೆ. ರಾಜ್ಯದ ಬಹುತೇಕ ಡ್ಯಾಂಗಳನ್ನು ನಿರ್ಮಾಣ ಮಾಡಿ ಜನತೆಗೆ ನೀರನ್ನು ನೀಡಿದ್ದು ಕಾಂಗ್ರೆಸ್, ಇದೇ ರೀತಿ 2030ಕ್ಕೆ ಬೆಂಗಳೂರಿಗೆ ನೀರಿನ ಬರ ಬರಬಾರದೆಂದು ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆಯನ್ನು ನಡೆಸಿದೆ.

ಇದನ್ನು ಬಿಜೆಪಿ ಬೂಟಾಟಿಕೆ ಎಂದು ಹೇಳುತ್ತಿದೆ. ನಮ್ಮ ಪಕ್ಷ ಪಾದಯಾತ್ರೆ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ತನ್ನ ಆಯವ್ಯಯದಲ್ಲಿ ಇದಕ್ಕೆ 1000 ಕೋಟಿಯನ್ನು ನೀಡಿದೆ. ಇದು ಕಾಂಗ್ರೆಸ್ ಶಕ್ತಿ. ಹೋರಾಟದಿಂದಲೇ ಕಾಂಗ್ರೆಸ್ ಪಕ್ಷ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಿತು ಎಂದು ನಲಪಾಡ್ ತಿಳಿಸಿದರು.

ಅಂಬೇಡ್ಕರ್ ನೀಡಿದಂತ ಸಂವಿಧಾನವನ್ನು ಈಗಿನ ಬಿಜೆಪಿ ಸರ್ಕಾರ ಬದಲಾಯಿಸಲು ಮುಂದಾಗಿದೆ. ಸಂವಿಧಾನ ವಿರೋದಿ ಸರ್ಕಾರವಾಗಿದೆ. ಎಲ್ಲರಿಗೂ ಸಮಾನತೆಯನ್ನು ನೀಡಿದ ಸಂವಿಧಾನ ಮುಂದೆ ಬದಲಾದರೆ ಎಲ್ಲವನ್ನು ಸಹಾ ಅದಾನಿ ಅಂಬಾನಿಗೆ ಬಿಜೆಪಿಯವರು ನೀಡುತ್ತಾರೆ.

ಇದರ ಬಗ್ಗೆ ಜಾಗೂರಕತೆಯಿಂದ ಇರಬೇಕಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸಹಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕಿದೆ ಅದೇ ರೀತಿ 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿದೆ.

ಇದಕ್ಕೆ ತಕ್ಕ ಪರಿಶ್ರವನ್ನು ಈಗಿನಿಂದಲೇ ಹಾಕಬೇಕಿದೆ. ಸದಸ್ಯತ್ವ ಅಭಿಯಾನವನ್ನು ಎಲ್ಲರು ಸಹಾ ಮಾಡಬೇಕಿದೆ ಇದರ ಬಗ್ಗೆ ಕೆಪಿಸಿಸಿ ಉಸ್ತುವಾರಿಯನ್ನು ಮಾಡುತ್ತಿದೆ. ಸದಸ್ಯತ್ವ ಹೆಚ್ಚಾದರೆ ಪಕ್ಷದಲ್ಲಿ ಮುಂದೆ ನಿಮ್ಮ ಗೌರವ, ಸ್ಥಾನ ಸಿಗಲಿದೆ. ಮನೆ ಮನೆಗೆ ಹೋಗಿ ಸದಸ್ಯತ್ವವನ್ನು ಮಾಡಿ, ಜಿಲ್ಲೆಗೆ 30,000 ಗುರಿಯನ್ನು ನೀಡಲಾಗಿದೆ ಅದನ್ನು ಪೂರ್ಣ ಮಾಡಬೇಕಿದೆ ಎಂದು ಹೇಳಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಯುವ ಕಾಂಗ್ರೆಸ್ ಹಿರಿಯ ಕಾಂಗ್ರೆಸ್‍ಗಿಂತ ಯಾವುದರಲ್ಲೂ ಸಹಾ ಕಡಿಮೆ ಇಲ್ಲ, ನಾವು ಪ್ರತ್ಯೇಕ ಎನ್ನಬಾರದು. ಅವರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯವನ್ನು ಹೊಂದಿರಬೇಕಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ ವ್ಯಕ್ತಿ ಪೂಜೆ ಅಗತ್ಯ ಇಲ್ಲ. ಇಲ್ಲಿ ಎಲ್ಲರು ಸಹಾ ಒಂದೇ.

ಸಂವಿಧಾನದ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅದನ್ನು ಬದಲಾಯಿಸಲು ಮುಂದಾಗಿದೆ. ಸಫಾಯಿ ಕರ್ಮಚಾರಿಗಳ ಪಾದಪೂಜೆಯನ್ನು ಮಾಡುವವರು ಅವರಿಗೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ, ಆದರೆ ಏನು ಕೇಳದವರಿಗೆ ವಿಶೇಷವಾದ ಮೀಸಲಾತಿಯನ್ನು ನೀಡುತ್ತಿದ್ದಾರೆ ಇದು ದುರಂತ. ಸಂವಿಧಾನಕ್ಕೆ ಅಪತ್ತು ಬಂದಾಗ ಅದರ ವಿರುದ್ದ ಹೋರಾಟ ಬೇಕಾದವರು ಅಧಿಕಾರಕ್ಕಾಗಿ ಅಂಟಿ ಕುಳಿತ್ತಿದ್ದಾರೆ. ಇಂದಿನ ದಿನಮಾನದಲ್ಲಿ ರಾಜಕೀಯ ಸೇವೆ ಎಂದಾಗದೆ ಉದ್ಯಮವಾಗಿ ಪರಿಣಿಮಿಸಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ, ಇಂದಿನ ದಿನಮಾನದಲ್ಲಿ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ ಹೆಚ್ಚಾಗುತ್ತಿದೆ. ಶೇ.45ರಷ್ಟಿರುವ ಯುವ ಸಮುದಾಯವನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ.ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಅವರು ಕಾನೂನು ಬಾಹಿರ ಕೃತ್ಯದಲ್ಲಿ ತೊಡುತ್ತಿಗುತ್ತಿದ್ದಾರೆ.

ಸಮಾಜ ಮತ್ತು ಧರ್ಮದ ನಡುವೆ ವಿಷ ಬೀಜವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ. 2023ರಲ್ಲಿ ವಿಧಾನಸಭೆ 2024ರಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯವನ್ನು ಯುವ ಕಾಂಗ್ರೆಸ್ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಉಮಾಪತಿ, ಮುಖಂಡರಾದ ಸೋಮಶೇಖರ್, ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿ ಗೌಡ, ಸಂಪತ್ ಕುಮಾರ್ ಮೈಲಾರಪ್ಪ, ಶ್ರೀಮತಿ ಜಯಮ್ಮ ಬಾಲರಾಜ್,ಆನಂದ್, ಮಹಮ್ಮದ್ ರಫಿ, ಗೋವರ್ಧನ್, ಗುರು, ಹರೀಶ್, ರಾಜೇಂದ್ರ ಪ್ರಸಾದ್, ನಿಖಿಲ್ ಕೊಡಜ್ಜಿ, ಬಾಲಕೃಷ್ಣ, ಅಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಐದು ಜನ ಮಹಿಳಾ ಪೌರ ಕಾರ್ಮಿಕರನ್ನು ಹಾಗೂ ಸಾಧನೆ ಮಾಡಿದ ಹೀನಾ ಕೌಸರ್ ರನ್ನು ಸನ್ಮಾನಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ವಿನೋದ ಅಸೂಟಿ, ಸಚಿವ ಸಂತೋಷ ಲಾಡ್ ಮತ್ತು ಸಲೀಂ ಅಹಮದ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 : ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಕರ್ನಾಟಕ ಸರಕಾರದ ಸಚಿವರಾದ ಸಂತೋಷ

ಗೋವಿಂದ ಕಾರಜೋಳರವರನ್ನು ಅತಿ ಹೆಚ್ಚು ಮತಗಳ ಅಂತರಿಂದ ಗೆಲ್ಲಿಸುವುದು ನಮ್ಮ ಗುರಿ :  ಬಿ.ಕಾಂತರಾಜ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 :  ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಅತಿ ಹೆಚ್ಚು ಮತಗಳ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ : ಪ್ರಭಂಜನ ಆರೋಪ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ

error: Content is protected !!